ಮನೆಯ ಮಗನಾಗಿ ಕೆಲಸ ಮಾಡುವೆ:ಸಮಗ್ರ ಜನರ ಏಳ್ಗೆಗಾಗಿ ಅಭಯ ಹಸ್ತವನ್ನು ಬೆಂಬಲಿಸಿ,ಸಮಗ್ರ ಜನರ ಏಳ್ಗೆಗಾಗಿ ಅಭಯ ಹಸ್ತವನ್ನು ಬೆಂಬಲಿಸಿ,

0
27

ರವಿಕುಮಾರ ಕಗ್ಗಣ್ಣವರ
ಧಾರವಾಡ: ನಾನು ಕರ್ನಾಟಕ ಸರ್ಕಾರದ ಸಚಿವನಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ವ ಸಮಾಜದ ಬಗೆಗಿನ ಕಳಕಳಿ ಕೈ ಹಿಡಿಯಲಿದ್ದು ‘ನಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಧಾರವಾಡ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದಿಂದ ಸ್ಪರ್ಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ವಿಶ್ವಾಸವ್ಯಕ್ತಪಡಿಸಿದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ “ ಇನ್ ಟ್ರಾö್ಯಕ್, ಟಾಕ ವಿತ್ ಮಿ.” ಕನ್ನಡಮ್ಮ ದಿನ ಪತ್ರಿಕೆಯ ಸಂದರ್ಶನದಲ್ಲಿ ಹಂಚಿಕೊಂಡ ಅಭಿಪ್ರಾಯವಿದು.
* ಮೋದಿ ಹವಾ ಕ್ಷೆÃತ್ರದಲ್ಲಿ ಮೋಡಿ ಮಾಡತೆತೇನ್ರಿ ?
ನೋಟ್ ಬ್ಯಾನ್‌ನಿಂದ ದೇಶದ ಸಾಮಾನ್ಯ ಪ್ರಜೆಗೆ ಕವಡೆ ಕಿಮ್ಮತ್ತಿನ ಪ್ರಯೋಜನವೂ ಆಗಿಲ್ಲವಾಗಿದ್ದು ಕೇವಲ ಅಂಬಾನಿ,ಅದಾನಿ ವಿಕಾಸ ಆಗಿದೆ ಹೊರತು ನಮ್ಮ ಜನರಿಗೇನು ಆಗಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೊÃಗ ನೀಡುವ ಭರವಸೆ ಹುಸಿಯಾಗಿದ್ದು ಜನಧನ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ ಎಂದು ಜನರೇ ಹೇಳಲಿ. ದೇಶದಲ್ಲಿ ರೈತರ ಹಾಗೂ ಜನಸಾಮಾನ್ಯರ ವಿಕಾಸ ಆಗಿಲ್ಲ. ರೈತರನಿಗೆ ಅಪಮಾನ ಮಾಡಿದ್ದು ಮೋದಿ, ನಿಜವಾಗಿಯೂ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ ಹಾಗೂ ಜನಸಾಮಾನ್ಯರ ಉದ್ದಾರ ಮಾಡಿದ್ದು ಇಂದಿರಾ ಗಾಂಧೀಜಿಯವರು ಎಂಬುದು ಜನರಿಗೆ ಗೊತ್ತಿದೆ.
* ಜೋಶಿಯವರು ಈ ಕ್ಷೆÃತ್ರಕ್ಕೆÃನು ಮಾಡಿಲ್ವಾ ?
ಪ್ರಹ್ಲಾದ ಜೋಶಿ ಅವರು ೧೫ ವರ್ಷ ಸಂಸದರಾಗಿ ಕ್ಷೆÃತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ನೋಡಿದರೆ ಎಲ್ಲವೂ ಶೂನ್ಯ. ಈ ಭಾಗದ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸಿ, ನೀರು ಕೊಡಿಸಿ ಎಂದು ಜೋಶಿ ಅವರನ್ನು ಸಂಸತ್‌ಗೆ ಕಳಿಸಿದರೆ ಮೋದಿ ಹಾಗೂ ಗೋವಾ ಸಂಪುಟದವರಿಗೆ ಹೆದರಿ ಸುಮ್ಮನಾಗಿದ್ದಾರೆ. ವಾಯುಪÅತ್ರ ಆಂಜನೇಯನ ಬಗ್ಗೆ ನಾವೆಲ್ಲರೂ ಕೇಳಿದ್ದೆÃವೆ ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಜೋಶಿಯವರು ಮೋದಿಯವರ ಗಾಳಿಯಲ್ಲಿ ತೇಲಾಡುತ್ತಾರೆ ಹೊರತು ಅವರಿಗೆ ಸ್ವಂತ ಶಕ್ತಿ ಸಾಮರ್ಥ್ಯವೇ ಇಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ಬಿಟ್ಟು ನಮ್ಮ ಜನರಿಂದಲೇ ಆರಿಸಿ ಬಂದು ನಮ್ಮ ಜನರನ್ನೆÃ ತುಳಿಯುವ ಜೋಶಿ ಸಾಧನೆ ಆದ್ರೂ ಏನು. ಮೋದಿ ಅವರ ಹೆಸರೊಂದೆ ಬಂಡವಾಳವಾಗಿದ್ದು, ಕ್ಷೆÃತ್ರಕ್ಕೆ ಇವರ ಸಾಧನೆ ಶೂನ್ಯವಾಗಿದೆ.

* ನೀವ್ ಮಂತ್ರಿಯಾಗಿದ್ದಾಗ ಕ್ಷೆÃತ್ರ‍್ರದಾಗ ಏನ್ ಅಭಿವೃದ್ದಿ ಮಾಡಿರಿ ?

ನಾನು ರೈತನ ಮಗ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದೆÃನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕುಡಿಯುವ ನೀರಿನ ಸಮಸ್ಯೆ, ಮೇವು ಬ್ಯಾಂಕು, ನಮ್ಮ ಹೊಲ ನಮ್ಮ ರಸ್ತೆ, ಶಹರದಲ್ಲಿ ಸಿಮೆಂಟ್ ರಸ್ತೆ, ಐಐಟಿ ಸ್ಥಾಪನೆ, ನಿರುದ್ಯೊÃಗಿಗಳಿಗಾಗಿ ಉದ್ಯೊÃಗ ಮೇಳ ನಡೆಸಿ ಉದ್ಯೊÃಗ ದೊರಕಿಸಿರುವುದು ಹೀಗೆ ನೂರೆಂಟು ಅಭಿವೃದ್ದಿ ಪರ ಕಾಮಗಾರಿಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದು ನಾನು ಮಾಡಿರುವ ಜನಪರ ಕಾರ್ಯಗಳು ನನಗೆ ತೃಪ್ತಿ ತಂದಿವೆ.

* ಮತದಾರರು ನಿಮ್ಮನ್ಯಾಕ ಬೆಂಬಲಿಸಬೇಕ್ರಿÃ ?
ವರ ನೋಡಿ ಕನ್ಯೆ ಕೊಡುವ ಹಾಗೆ ಅಭ್ಯರ್ಥಿ ನೋಡಿ ಮತ ಕೊಡ್ರಿ ಹಿಂದೆ ನಾನು ಮಂತ್ರಿ ಇದ್ದಾಗ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿರುವೆನು. ಬಡತನಕ್ಕೆ ಮದ್ದು ನ್ಯಾಯ ವಾರ್ಷಿಕ ೭೨ ಸಾವಿರ ಮೊತ್ತ, ಕೃಷಿಕರ ಮತ್ತು ಕಾರ್ಮಿಕರ ಸಾಲಮನ್ನಾ, ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ, ಔಧ್ಯೊÃಗಿಕ ಕ್ರಾಂತಿ, ಸಾರ್ವತ್ರಿಕ ಆರೋಗ್ಯ ಸೇವೆ, ಮಹಿಳಾ ಮೀಸಲಾತಿ, ವಾಸ್ತವ ಹಕ್ಕು, ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ, ನಗರ ಮತ್ತು ಪಟ್ಟಣಗಳ ಸಮಗ್ರ ನೀತಿ ರೂಪಿಸುವುದು ಸೇರಿದಂತೆ ಪಕ್ಷವು ಪ್ರಮುಖ ಮತ್ತು ಪ್ರಾಮಾಣಿಕ ಭರವಸೆಗಳನ್ನು ಈಡೇರಿಸಲಿದೆ. ಈ ನಿಟ್ಟಿನಲ್ಲಿ ದೇಶದ ಹಾಗೂ ಗ್ರಾಮಗಳ ಅಭಿವೃದ್ದಿ ದೃಷ್ಠಿಯಿಂದ ಜನರು ನನಗೆ ಬೆಂಬಲಿಸಲಿದ್ದಾರೆ.

* ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡ್ಯಾಕತ್ತಾವೇನ್ರಿ ?
ನಾನು ಸರ್ವ ಧರ್ಮಪ್ರಿÃಯ ಸಮಾನತೆಗೆ ನನ್ನ ಆಧ್ಯತೆ ನಾನು ಲಿಂಗಾಯತ ಕುಟುಂಬದಲ್ಲಿ ಜನಿಸಿದವನು ಹೀಗಾಗಿ ಲಿಂಗಾಯತ ಮತಗಳನ್ನು ಕೇಳುವುದರಲ್ಲಿ ತಪ್ಪೆÃನಿದೆ. ನಾನು ಎಲ್ಲ ಜನಾಂಗದವರನ್ನು ಗೌರವಿಸುತ್ತೆÃನೆ ನನ್ನೊಂದಿಗೆ ಎಲ್ಲಾ ಜಾತಿ ಮತದ ಪಂಗಡದವರು ಇದ್ದಾರೆ ಬಿಜೆಪಿಯವರ ಹಾಗೆ ನಾವು ಜಾತಿ ರಾಜಕಾರಣ ಮಾಡುವುದಿಲ್ಲ. ಜೋಶಿಯವರು ಸಂಸದರಾಗಿ ಈ ಕ್ಷೆÃತ್ರದ ಲಿಂಗಾಯತರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಷ್ಟು ಜನ ಲಿಂಗಾಯತರನ್ನು ಉನ್ನತ ಸ್ಥಾನದಲ್ಲಿ ಕೂರಿಸಿದ್ದಾರೆ ಹೇಳಲಿ. ರೈತರ ಆತ್ಮಹತ್ಯೆಯಾದಾಗ ತುಟಿ ಪಿಟಕ್ಕೆನ್ನಲಿಲ್ಲ. ಮಹದಾಯಿ ಬಗ್ಗೆ ಅನ್ನದಾತನ ಬವಣೆ ಬಗ್ಗೆ ಯಾವುದೇ ಸೊಲ್ಲೆತ್ತಿಲ್ಲ, ಲಿಂಗಾಯತರನ್ನೆÃ ಕಡೆಗಣಿಸಿರುವ ಇಂತವರನ್ನು ಮನೆಗೆ ಕಳಿಸುವುದು ಉತ್ತಮ.

ಧಾರವಾಡ ಲೋಕಸಭಾ ಕ್ಷೆÃತ್ರದಲ್ಲಿ ಮನೆಯ ಮಗನಾಗಿ ವಿನಯ ಕುಲಕರ್ಣಿ ಕೆಲಸ ಮಾಡಲಿದ್ದಾರೆ ಎಂಬ ಭರವಸೆಯನ್ನು ನಾನು ನೀಡುತ್ತೆÃನೆ. ಸಮಗ್ರ ಜನರ ಏಳ್ಗೆಗಾಗಿ ಅಭಯ ಹಸ್ತವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದು ಈ ಚುನಾವಣೆಯಲ್ಲಿ ಮತದಾರರು ನನಗೆ ಬೆಂಬಲಿಸಿ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

loading...