ಮನೆ ಗೋಡೆ ಕುಸಿದು ಇಬ್ಬರು ಯುವತಿಯರು ಸಾವು

0
14

ಕನ್ನಡಮ್ಮ ಸುದ್ದಿ-ಅಳ್ನಾವರ: ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಇಲ್ಲಿನ ಮಿಶನ್ ರಸ್ತೆಯ ನಿವಾಸಿ ಪ್ರಕಾಶ ಸುರೋಜಿ ಅವರ ಇಬ್ಬರು ಮಕ್ಕಳು ಮೃತ ಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಮನೆಯಲ್ಲಿ ಮಲಗಿದ್ದ ಹಿರಿಯ ಮಗಳು ಶಶಿಕಲಾ ( 20 ) ಮತ್ತು ಕಿರಿಯ ಮಗಳು ಮುಕ್ತಾ ( 18 ) ಮೃತ ಪಟ್ಟ ದುರ್ದೆವಿಗಳು. ಬೆಳಿಗ್ಗೆ 8 ಗಂಟೆಗೆ ಈ ಅವಘಡ ಸಂಭವಿಸಿದೆ. ಗೋಡೆ ಕುಸಿದ ಪರಿಣಾಮ ದೊಡ್ಡ ಪ್ರಮಾಣದ ಇಟ್ಟಿಗೆಗಳು ಹಾಗೂ ಮಣ್ಣಿನ ರಾಸಿಯಲ್ಲಿ ಸಿಲುಕಿ ಉಸಿರುಗಟ್ಟಿ ಗರ್ಭಿಣಿ ಶಶಿಕಲಾ ಸಾವನಪ್ಪಿದ್ದಾಳೆ. ಇಬ್ಬರು ಸಹೋದರಿಯರನ್ನು ಕೂಡಲೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಅಂಬ್ಯಲೆನ್ಸ್ ಮೂಲಕ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮುಕ್ತಾ ಕೂಡಾ ಮೃತಪಟ್ಟರು.ಪರಿಹಾರ: ಇಬ್ಬರು ಮೃತರಿಗೆ ತಲಾ $ 5 ಲಕ್ಷ ಹಾಗೂ ಶವ ಸಂಸ್ಕಾರಕ್ಕೆ ತಲಾ $ 5 ಸಾವಿರ ಮತ್ತು ಮನೆಯ ಗೋಡೆ ಕಟ್ಟಿಕೊಳ್ಳಲು $ 95 ಸಾವಿರ ನೀಡಲಾಗುವದು ಎಂದು ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ತಿಳಿಸಿದ್ದಾರೆ.
ಸುರೋಜಿ ಅವರಿಗೆ ವಾಜಪೇಯಿ ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆ ಕಟ್ಟಿ ಕೊಡಲಾಗುವದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ತಿಳಿಸಿದ್ದಾರೆ.ಮನೆ ಕಳೆದುಕೊಂಡು ಅನಾಥರಾದ ಸುರೋಜಿ ಕುಟುಂಬ ವರ್ಗ ಇಂದು ತಾತ್ಪೂರ್ತಿಕವಾಗಿ ನೆಂಟರ ಮನೆಯಲ್ಲಿ ಇರುತ್ತಾರೆ ಎಂದು ಹಿರಿಯರು ತಿಳಿಸಿದ್ದಾರೆ.
ಘಟನೆ ವಿವರ : ಕೂಲಿ ಮಾಡಿ ಬದುಕು ಕಟ್ಟಿಕೊಂಡ ಪ್ರಕಾಶ ಸುರೋಜಿ ಚಿಕ್ಕದಾದ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಹಿರಿಯ ಮಗಳನ್ನು ಕಲಘಟಗಿ ತಾಲ್ಲೂಕಿನ ಮಸಳಿಕಟ್ಟಾ ಗ್ರಾಮದ ರವಿ ಪಾಟೀಲರಿಗೆ ಮದುವೆ ಮಾಡಿ ಕೊಡಲಾಗಿತ್ತು. ಗರ್ಭಿಣಿಯಾಗಿದ್ದ ಶಶಿಕಲಾ ಪಂಚಮಿ ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದಳು.ಗುರುವಾರ ಬೆಳಿಗ್ಗೆ ನಡೆದ ಅವಘಡ ಇವರನ್ನು ಬಾರದ ಲೋಕಕ್ಕೆ ತೆಗೆದುಕೊಂಡು ಹೋಯಿತು. ತಂಗಿಯೊಡನೆ ಮಲಗಿದ್ದ ಇವರು ಎದ್ದೆಳಲಿಲ್ಲ. ಕಿರಿಯ ಸಹೋದರಿ ಮುಕ್ತಾ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಬೆಳಿಗ್ಗೆ ಎಂದಿನಂತೆ ಪ್ರಕಾಶ ಸುರೋಜಿ ಕೂಲಿ ಕೆಲಸಕ್ಕೆಂದು ಹೋಗಿದ್ದರು. ತಾಯಿ ಮನೆಯ ಹಿತ್ತಲಲ್ಲಿ ಕೆಲಸ ಮಾಡುತ್ತಿದ್ದರು. ದೀಡಿರ ಗೋಡೆ ಕುಸಿದಿದ್ದರಿಂದ ತಾಯಿ ಭಾರತಿ ಜೋರಾಗಿ ಕೂಗ ತೊಡಗಿದರು. ತಕ್ಷಣವೆ ಅಕ್ಕ ಪಕ್ಕದ ಜನರು ಸೇರಿ ಮಣ್ಣಿನಲ್ಲಿ ಹೂತು ಹೋಗಿದ್ದ ಇಬ್ಬರು ಸಹೋದರಿಯರನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ ವಿಧಿ ಆಟವೆ ಬೇರೆ ಇತ್ತು. ಬೇಟಿ : ಈ ದುರ್ಘನೆ ನಡೆದ ಸುದ್ದಿ ಕೇಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬಾಗ್ಯವತಿ ಕುರುಬರ ಹಾಗೂ 9 ನೇ ವಾರ್ಡಿನ ಸದಸ್ಯ ಪರಶುರಾಮ ಬೇಕನೇಕರ ಸ್ಥಳಕ್ಕೆ ದಾವಿಸಿ ಕುಟುಂಬಕ್ಕೆ ದೈರ್ಯ ತುಂಬಿದರು. ಪ.ಪಂ. ಸದಸ್ಯರು ಸೇರಿದಂತೆ, ತಾಲ್ಲೂಕ ಕಚೇರಿ ಮತ್ತು ಪಟ್ಟಣ ಪಂಚಾಯ್ತಿ ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿದರು.
ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಧಾರವಾಡ ಜಿಲ್ಲಾ ಆಸತ್ರೆಗೆ ತೆರಳಿ ಘಟನೆಯ ಮಾಹಿತಿ ಪಡೆದು ಸುರೋಜಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

loading...