ಮನೆ ಮನೆಗೆ  ಕಾನೂನು ಮಾಹಿತಿ

0
51

ಗದಗ:  ಗದಗ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಾ ಕಾನೂನು ಸೇವಾ ಸಮಿತಿಗಳ ಸಹಯೋಗದಲ್ಲಿ  ನವೆಂಬರ್ 9 ರಿಂದ 18 ರವರೆಗೆ ನ್ಯಾಯವಾದಿಗಳು ಹಾಗೂ ಪ್ಯಾರಾ ಲೀಗಲ್ ವಾಲಂಟಿಯರ್ಸ ಇವರುಗಳ  ಮೂಲಕ ಕಾನೂ£ನಡಿ ಸರ್ಕಾರ  ಸೌಲಭ್ಯ ಯೋಜನೆಗಳು ಹಾಗೂ  ಪ್ರಾಧಿಕಾರದ ಉದ್ದೇಶಗಳ ಕುರಿತು  ಜಾಗೃತಿ  ಅರಿವು  ಮೂಡಿಸಲು   ಮನೆ ಮನೆಗೆ  ಕಾನೂನು ಮಾಹಿತಿ ಏರ್ಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಕೆ. ನಾಗರತ್ನ  ಅವರು ಗದಗ  ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿಂದು ಬೈಕ್ ರ್ಯಾಲಿಗೆ ಚಾಲನೆ £ೀಡಿದರು.     ರ್ಯಾಲಿಯು ಕೋರ್ಟ ಆವರಣದಿಂದ ಜೋಡು ಮಾರುತಿ ದೇವಸ್ಥಾನ, ಜುಮ್ಮಾ ಮಸೀದಿ, ವೀರನಾರಾಯಣ ಗುಡಿ ರಸ್ತೆ, ಗಂಗಾಪುರ ಪೇಟೆ, ಹಳೆ ಕೋರ್ಟು, ಗಾಂಧಿ  ಸರ್ಕಲ್, ಭೂಮರೆಡ್ಡಿ ಸರ್ಕಲ್ ಮೂಲಕ  ನ್ಯಾಯಾಲಯ ಆವರಣಕ್ಕೆ ಬಂದು ಸೇರುವುದು. ರ್ಯಾಲಿಯಲ್ಲಿ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರಿಮತಿ ರೇಣುಕಾ ಕುಲಕರ್ಣಿ,   ಅಪರ ಜಿಲ್ಲಾ ಮತ್ತು ಸತ್ರ  ನ್ಯಾಯಾಧೀಶರಾದ ಸುಮಂಗಲಾ ಬಸವಣ್ಣೇರ,  ಪ್ರಧಾನ  ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀಮತಿ ಜರೀನಾ,   ಪ್ರಧಾನ ದಿವಾಣಿ ನ್ಯಾಯಾಧೀಶ ಎ.ಎಂ. ಬಡಿಗೇರ, ದಿವಾಣಿ ನ್ಯಾಯಾಧೀಶರಾದ ಮಹಾದೇವಪ್ಪ ಎಚ್., ಶ್ರೀಮತಿ ಶೈಲಜಾ, ವಕೀಲರುಗಳು, ಎಸ್.ಎ ಮಾ£್ವ ಲಾ ಕಾಲೇಜಿನ ವಿದ್ಯಾರ್ಥಿಗಳು, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು,             ಪಾಲ್ಗೊಂಡಿದ್ದರು.

loading...