ಮನ್ರೇಗಾ ಯೋಜನೆಗೆ ೪೦ ಸಾವಿರ ಕೋಟಿ ಹೆಚ್ಚುವರಿ ನಿಧಿ ಹಂಚಿಕೆ; ನಿರ್ಮಲಾ ಸೀತಾರಾಮನ್

0
37

ನವದೆಹಲಿ:- ಗ್ರಾಮೀಣ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಮಹತ್ವ ನಿರ್ಣಯ ಕೈಗೊಂಡಿದೆ. ಮನ್ರೇಗಾ( ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಗಾಗಿ ೪೦ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ನಿಧಿಯನ್ನು ಹಂಚಿಕೆ ಮಾಡಿದೆ.
ಈ ಹಣ ಈ ಹಿಂದೆ ಹಂಚಿಕೆಮಾಡಿದ ನಿಧಿಗೆ ಹೆಚ್ಚುವರಿಯಾಗಿದೆ. ಇದರಿಂದ ಮನ್ರೇಗಾ ಯೋಜನೆಗೆ ಹಂಚಿಕೆ ಮಾಡಿದ ಒಟ್ಟು ನಿಧಿ ೬೧ ಸಾವಿರ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ಸ್ವಂತ ಊರುಗಳು ತಲುಪಿರುವ ವಲಸೆ ಕಾರ್ಮಿಕರರಿಗೆ ಉದ್ಯೋಗ ಸೃಷ್ಟಿಸಲು ಹೆಚ್ಚುವರಿ ನಿಧಿ ಹಂಚಿಕೆಯಿಂದ ಅನುಕೂಲವಾಗಲಿದೆ. ಮನ್ರೇಗಾ ಪ್ರಕಾರ ದಿನಗೂಲಿ ಕಾರ್ಮಿಕರಿಗೆ ವರ್ಷದಲ್ಲಿ ೨೦೦ ಕೆಲಸದ ದಿನಗಳನ್ನು ಕಲ್ಪಿಸುವ ಅವಕಾಶವಿದೆ. ಕೂಲಿ ಹಣ ಕೂಡಾ ಗೌರವರೀತಿಯಲ್ಲಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಪ್ರಕಾರ ವಿವಿಧ ರಂಗಗಳಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತವಾಗಿ ಐದನೇ ದಿನವಾದ ಇಂದು ಮಾಧ್ಯಮ ಸಮಾವೇಶ ನಡೆಸಿದರು. ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ರೊಂದಿಗೆ ಅವರು ವಿವರ ನೀಡಿದರು.

ನಿರ್ಮಾಣ ರಂಗದಲ್ಲಿರುವ ಕಾರ್ಮಿಕರಿಗೆ ನೆರವಾಗಲು ೪,೦೦೦ ಕೋಟಿ ನೇರವಾಗಿ ಒದಗಿಸಲಾಗುವುದು ಎಂದು ಹೇಳಿದ ನಿರ್ಮಲಾ ಸೀತಾರಾಮನ್ ಬಡವರು, ಕೂಲಿಕಾರ್ಮಿಕರ ಹಸಿವು ನೀಗಿಸುವುದು ಸರ್ಕಾರದ ಹೊಣೆಯಾಗಿದೆ ಎಂದು ಪ್ರಕಟಿಸಿದರು. ಲ್ಯಾಂಡ್, ಲೇಬರ್,ಲಿಕ್ವಿಡಿಟಿ, ಸರ್ಕಾರದ ಪ್ರಧಾನ ಅಂಶಗಳು ಎಂದು ಪ್ರಕಟಿಸಿದರು.
೮.೧ ಕೋಟಿ ಮಂದಿ ಕಾರ್ಮಿಕರಿಗೆ ಕಿಸಾನ್ ಯೋಜನೆಯಡಿ ರೂ ೧೬,೩೯೪ ಕೋಟಿ ನಗದು ಹಂಚಕೆ ಮಾಡಲಾಗಿದೆ. ಜನಧನ್ ಯೋಜನೆಯಡಿ ೧೦,೦೨೫ ಕೋಟಿ ಹಣ ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ನಿರ್ಮಾಣವಲಯದ ಕಾರ್ಮಿಕರಿಗೆ ೩.೯೫೦ ಕೋಟಿ ಹಂಚಿಕೆ ಮಾಡಲಾಗಿದೆ ಎಂದರು. ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತಲುಪಿಸಲು ತಗುಲುವ ಶೇ. ೮೫ ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುವುದಾಗಿ ಹೇಳಿದರು. ೮.೯ ಕೋಟಿ ಮಂದಿ ರೈತರ ಖಾತೆಗಳಿಗೆ ೨ ಸಾವಿರ ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದರು.

loading...