ಮಹದಾಯಿ ಕಾಮಗಾರಿ ಆರಂಭಿಸಲು ಮನವಿ

0
14

ಕನ್ನಡಮ್ಮ ಸುದ್ದಿ-ಧಾರವಾಡ: ಮಹದಾಯಿ ಜೋಡಣೆ ಯಶಸ್ವಿಯಾಗಲು ರಾಜ್ಯ ಸರಕಾರ ಕೂಡಲೆ ಈ ಯೋಜನೆಗೆ ಹಣವನ್ನು ಮಿಸಲಿಟ್ಟು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಿ ರೈತರ ಹಾಗೂ ಜನರ ಕನಸನ್ನು ನೆನಸಾಗಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಬಹುದಿನದ ಹೋರಾಟದಿಂದ ಉತ್ತರ ಕರ್ನಾಟಕಕ್ಕೆ ಮಹದಾಯಿಯ ಒಟ್ಟು 188 ಟಿ.ಎಮ್.ಸಿ. ಯಲ್ಲಿ ಕರ್ನಾಟಕದ ಒಟ್ಟು ಬೇಡಿಕೆ 36.7 ಟಿ.ಎಮ್.ಸಿ. ಅದರಲ್ಲಿ ತೀರ್ಪಿನ ಪ್ರಕಾರ ನಮಗೆ ದೊರೆತಿದ್ದು, 13.7 ಟಿ.ಎಮ್.ಸಿ. ಇದು ತಕ್ಕ ಮಟ್ಟಿಗೆ ಉತ್ತರ ಕರ್ನಾಟಕದ ತುರ್ತು ಬೇಡಿಕೆಯನ್ನು ಸಮಾದಾನಪಡಿಸಿದೆ ಹಾಗೂ ರೈತ ಹೋರಾಟದ ಫಲಶೃತಿಯಿಂದಾಗಿ ಕರ್ನಾಟಕದ ಬೇಡಿಕೆ ಇಟ್ಟಿದ್ದ 36.7 ಟಿ.ಎಮ್.ಸಿ.ಯಲ್ಲಿ ನಮಗೆ 13.7 ಟಿ.ಎಮ್.ಸಿ. ದೊರೆತಿದ್ದು, ಇನ್ನುಳಿದ 23.00 ಟಿ.ಎಮ್.ಸಿ. ಯನ್ನು ರಾಜ್ಯ ಸರಕಾರ ಉತ್ತರ ಕರ್ನಾಟಕಕ್ಕೆ ದೊರೆಕಿಸಿಕೊಡುವಂತಹ ಪ್ರಯತ್ನಶೀಲವಾಗಬೇಕು ಹಾಗೂ ಈಗ ದೊರೆತ 13.7 ಟಿ.ಎಮ್.ಸಿ.ಯನ್ನು ವರ್ಗಾವಣೆ (ಆiveಡಿsioಟಿ) ಮಾಡುವುದು ಹಾಗೂ 3.7 ಟಿ.ಎಮ್.ಸಿ. ಕುಡಿಯುವ ನೀರಿಗೆ, 5.00 ಟಿ.ಎಮ್.ಸಿ. ನೀರಾವರಿಗೆ ಮತ್ತು 5.00 ಟಿ.ಎಮ್.ಸಿ. ವಿದ್ಯುತ್ ಉತ್ಪಾದನೆಗೆ ತೀರ್ಪಿನ ಪ್ರಕಾರ ಮೀಸಲಾಗಿದೆ. ಮತ್ತು ಈ ಉದ್ದೇಶಗಳು ಯಶಸ್ವಿಯಾಗಬೇಕಾದರೆ ರಾಜ್ಯ ಸರಕಾರ ಕೂಡಲೆ ಈ ಒಂದು ಯೋಜನೆಗೆ ಹಣವನ್ನು ಮಿಸಲಿಟ್ಟು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಚಾಲನೆ ನೀಡವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ. ಈ ಭಾಗದ ಜನರ ಕನಸನ್ನು ನೆನಸಾಗಿಸಲು ರಾಜ್ಯ ಸರಕಾರ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿತು.ಈ ಸಂದರ್ಭದಲ್ಲಿ ಮೋಹನ ರಾಮದುರ್ಗ, ಪ್ರಮೋದ ಕಾರಕೂನ, ರಾಖೇಶ ನಾಜರೇ, ಓಂಕಾರ, ಮಂಜು ಹೊಂಗಳದÀ, ಚೇತನ ಹೊಟ್ಟಿ, ಶಶಿ ದೊಡವಾಡ, ಆನಂದ ವಾಗಮೋಡೆ, ವಾಣಿಶ್ರೀ ಮೋಟೆಕರ, ಕಸ್ತೂರಿ, ನೀಲಕಂಠ, ಮಡಿವಾಲ, ರಾಹುಲ್ ಅಷ್ಠಗಿ, ಹರೀಶ ಸಾಲುಂಕೆ ಹಾಜರಿದ್ದರು.

loading...