ಮಹದಾಯಿ ನೀರು ಕೇಳುವುದು ನಮ್ಮ ಹಕ್ಕು: ಹೂಗಾರ

0
13

ಕನ್ನಡಮ್ಮ ಸುದ್ದಿ-ನರಗುಂದ: ಉತ್ತರ ಕರ್ನಾಟಕದ ಮಹದಾಯಿ ನೀರು ಮಲಪ್ರಭೆಗೆ ಸೇರಿಸುವ ಬೇಡಿಕೆಯೇ ನಮ್ಮ ಜನ್ಮ ಸಿದ್ದಹಕ್ಕು. ಸರ್ಕಾರಗಳು ನಮ್ಮ ಪಾಲಿನ ಮಹದಾಯಿ ನೀರನ್ನು ಮಲಪ್ರಭೆಗೆ ಸೇರಿಸುವುದನ್ನು ಕೈಬಿಟ್ಟರೆ ಸುತಾರಾಂ ಒಪ್ಪುವುದಿಲ್ಲ ಎಂದು ಮಹದಾಯಿ ಮಲಪ್ರಭೆ ನದಿ ಜೋಡಣಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಈರಬಸಪ್ಪ ಹೂಗಾರ ತಿಳಿಸಿದರು.
ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಮಂಗಳವಾರ 1119 ನೇ ದಿನ ತಲುಪಿದ ಹೋರಾಟದ ಧರಣಿ ವೇದಿಕೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅನೇಕ ಭಾರಿ ಮನವಿ ಮಾಡಿಕೊಂಡರು ಮಹದಾಯಿ ಯೋಜನೆ ಅನುಷ್ಟಾನ ಕಂಡಿಲ್ಲ. ಈಗೇನಿದ್ದರೂ ಚೆಂಡು ರಾಷ್ಟ್ರಪತಿಯವರ ಅಂಗಳದಲ್ಲಿದೆ. ಅವರಿಗೂ ಎರಡು ಭಾರಿ ಮನವಿ ಮಾಡಿಕೊಳ್ಳಲಾಗಿದೆ. ಇದಾಗದಿದ್ದರೆ ನಮಗೆ ದಯಾಮರಣ ಪಾಲಿಸಿ ಎಂದು ಸಾವಿರಾರು ರೈತರು ಮಠಾಧೀಶರು ಸೇರಿ ಅನೇಕ ಸಂಘಟಣೆಗಳ ಸದಸ್ಯರು ಪತ್ರ ಚಳುವಳಿ ನಡೆಸಿ ರಾಷ್ಟ್ರಪತಿಗಳಿಗೆ ಪತ್ರಗಳನ್ನು ರವಾನಿಸಿಯೂ ಆಗಿದೆ.
ಆಗಷ್ಟ 10 ರಂದು ನರಗುಂದ ಹೋರಾಟ ವೇದಿಕೆಯಿಂದ 100 ಜನ ರೈತಮುಖಂಡರು ಹುಬ್ಬಳ್ಳಿಯಿಂದ ರೈಲು ಮೂಲಕ ಬೆಂಗಳೂರಿಗೆ ತೆರಳಿ. ಆ. 11 ರಿಂದ ಪ್ರೀಡಂ ಪಾರ್ಕಿನಲ್ಲಿ ಮಹದಾಯಿಗಾಗಿ ಧರಣಿ ನಡೆಸಲಾಗುವುದು. ಬೆಂಗಳೂರಿನಲ್ಲಿರುವ ಅನೇಕ ಸಂಘಟಣೆಗಳು ದಯಾಮರಣಕ್ಕಾಗಿ ಪತ್ರ ಚಳುವಳಿ ಕಾರ್ಯಕ್ಕೆ ಬೆಂಬಲ ಸೂಚಿಸಿವೆ. ಆದ್ದರಿಂದ ಅಲ್ಲಿಯೂ ಪತ್ರ ಚಳುವಳಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರಗಳನ್ನು ರವಾನಿಸಲಾಗುವುದು ಎಂದು ತಿಳಿಸಿದರು.
ಎಸ್.ಬಿ. ಜೋಗಣ್ಣವರ. ರಮೇಶ ನಾಯ್ಕರ್, ಪರಶುರಾಮ ಜಂಬಗಿ, ಎಸ್.ಬಿ. ಕೊಣ್ಣುರ, ಶಿವಾನಂದ ಹಳಕಟ್ಟಿ, ಹನುಮಂತ ಸರನಾಯ್ಕರ್, ಜಗನಾಥ ಮುಧೋಳೆ, ನೀಲವ್ವ ಹಾಲೊಳ್ಳಿ, ನಾಮದೇವ ಪವಾರ, ಎಸ್.ಕೆ. ಗಿರಿಯಣ್ಣವರ, ಪಿ.ಎಸ್. ಕರಿಯಪ್ಪನವರ, ಸೋಮು ಆಯಟ್ಟಿ, ಚನ್ನಮ್ಮ ಕರ್ಜಗಿ, ಶಾಂತವ್ವ ಮಾದರ, ಸರೋಜವ್ವ ಚಿಲಮನಿ, ಯಲ್ಲವ್ವ ಸುರೇಬಾನ ಅನೇಕರು ಉಪಸ್ಥಿತರಿದ್ದರು.

loading...