ಮಹಾದಾಯಿ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ

0
22

ಬೆಂಗಳೂರು:ಮಹಾದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಅನ್ಯಾಯವಾಗಿದೆ.ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಾವು ಒಟ್ಟಾಗಿ ಹೋರಾಟ ಮುಂದುವರೆಸೋಣ ಎಂದು ವಿಪಕ್ಷಗಳಿಗೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು,ಹಸಿರುಪೀಠದ ಮುಂದೆ ಹೋಗಲು ಗೋವಾ ನಿರ್ಧಾರ ಮಾಡಿದೆ.ಬೇರೆ ರಾಜ್ಯದ ಬಗ್ಗೆ ನನಗೇನು ಗೊತ್ತಿಲ್ಲ.ಆದರೆ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ವಾಗಿದೆ.ಹೀಗಾಗಿ ಶೀಘ್ರದಲ್ಲೇ ಅಧಿಕಾರಿಗಳ ಜೊತೆ ಸ್ಪಾಟ್ ವಿಸಿಟ್ ಮಾಡುತ್ತೇವೆ. ಸ್ಥಳ ಪರಿಶೀಲನೆ ಬಳಿಕ ಸಿಎಂ ಜೊತೆ ಸಭೆ ಮಾಡ್ತೀವಿ ಸಿಎಂ ಜೊತೆ ಚರ್ಚೆಯ ಮುಂದಿನ ಹೆಜ್ಜೆಯಿಡುತ್ತೇವೆ ಎಂದು ತಿಳಿಸಿದರು.
ಗೋವಾದವರು ಏನಾದ್ರೂ ಮಾಡಿಕೊಳ್ಳಲಿ.ನಮ್ಮ ರಾಜ್ಯದ ಹಿತ ಕಾಪಾಡುವುದು ನಮಗೆ ಮುಖ್ಯ.ಇದಕ್ಕಾಗಿ ನಾವು ಏನು ಬೇಕಾದರೂ ತ್ಯಾಗ ಮಾಡಲು ಸಿದ್ದ.ಹೋರಾಟ ಮಾಡಲು ನಾವು ಸಿದ್ದರಿದ್ದೇವೆ.ಎಲ್ಲಾ ಪಕ್ಷದ ಮುಖಂಡರಿಗೆ ಕೈ ಮುಗಿದು ಕೇಳಿಕೊಳ್ತೀನಿ.ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ.ಇದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇದ್ರಲ್ಲಿ ರಾಜಕೀಯ ಮಾಡೋದು ಬೇಡ ನಾವು ಒಟ್ಟಾಗಿ ಹೋರಾಟ ಮುಂದುವರೆಸೋಣ ಎಂದು ವಿಪಕ್ಷಗಳಿಗೆ ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿ.ಕೆ ಶಿವಕುಮಾರ್ , ಹೈಕಮಾಂಡ್ ನಿಂದ ಬುಲಾವ್ ಬಂದಿದೆಯೇ ಎಂಬ ಪ್ರಶ್ನಿಸಿದರು.

loading...