ಮಹಾವೀರ ಭಗವಾನರ ಆದರ್ಶಗಳನ್ನು ಅಳವಡಿಸಿಕೊಳ್ಳಿ

0
5

ರಬಕವಿ-ಬನಹಟ್ಟಿ: ಜೈನ ಧರ್ಮಿಯರಾದ ನಮ್ಮೆಲ್ಲ ಹಬ್ಬಗಳಲ್ಲಿ ಮಹಾವೀರ ಜಯಂತಿ ಅತೀವ ಮುಖ್ಯವಾದುದು. ನಮ್ಮ ಧರ್ಮದ ಕೊನೆಯ ತೀರ್ಥಂಕರಾದ ಮಹಾವೀರರ ಆದರ್ಶ ಮತ್ತು ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಜವಳಿ ವರ್ತಕ ಗಣಪತರಾವ ಹಜಾರೆ ತಿಳಿಸಿದರು.
ಬುಧುವಾರ ಬೆಳಿಗ್ಗೆ ರಬಕವಿ ನಗರದ ಜೈನ ಸಮುದಾಯದವರಿಂದ ಮಹಾವೀರರ ೨೬೧೮ ನೇ ಜಯಂತಿ ನಿಮಿತ್ತ ಹಮ್ಮಿಕೊಂಡ ಮೆರವಣಿಗೆ ನಂತರ ಜೈನಬಸದಿಯಲ್ಲಿ ಜರುಗಿದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ಕ್ರಿ.ಪೂ. ೬೧೫ ಮಹಾವೀರರು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು. ವಿಜ್ಜಿ ಎಂಬ ರಾಜನು ಆ ಸಮಯದಲ್ಲಿ ಆಳ್ವಿಕೆ ಮಾಡುತ್ತಿದ್ದರು ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕೆ. ಡಿ. ಮೊಣಗಾವೆ, ಕುಮಾರ ಬಸಪ್ರಭನ್ನವರ, ಎ. ಬಿ. ಚೌಗಲೆ, ಭುಜಬಲಿ ಜಕನೂರ, ಭರತೇಶ ಯಂಡೋಳಿ, ಅಭಯ ಯಂಡೋಳಿ, ಪ್ರಸನ್ನ ಹಜಾರೆ, ಪ್ರಭಾವತಿ ಹಜಾರೆ, ಪದ್ಮಾವತಿ ಹಜಾರೆ, ಸವೀತಾ ಮೊಣಗಾವೆ, ರವಿ ಶಿರಗಾರ, ಪ್ರದೀಪ ಹಜಾರೆ, ಅಭಿನಂದನ ಹೊರತಿ, ಪ್ರಶಾಂತ ದೇಸಾಯಿ, ಬಿ. ಡಿ. ನೇಮಗೌಡ ಸೇರಿದಂತೆ ಅನೇಕರಿದ್ದರು.

loading...