ಮಹಾವೀರ ಮಹೋತ್ಸವದ ನಿಮಿತ್ತ ಉಚಿತ ನೇತ್ರದಾನ ಶಿಬಿರ

0
5

ಮಹಾವೀರ ಮಹೋತ್ಸವದ ನಿಮಿತ್ತ ಉಚಿತ ನೇತ್ರದಾನ ಶಿಬಿರ

ಕನ್ನಡಮ್ಮ ಸುದ್ದಿ-ಬೆಳಗಾವಿ: ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಅಂಗವಾಗಿ ಶನಿವಾರ ಏ.೧೩ ರಂದು ಜಿತೋ ಯುವ ಘಟಕ ಮತ್ತು ಭರತೇಶ ಶಿಕ್ಷಣ ಸಂಸ್ಥೆ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ರಕ್ತದಾನ ಶಿಬಿರ ಜೊತೆಯಲ್ಲಿ ನೇತ್ರದಾನ ಮತ್ತು ಚರ್ಮದಾನ ಬಗ್ಗೆಯೂ ತಿಳುವಳಿಕೆ ನೀಡಲಾಯಿತು.
ರಕ್ತದಾನ ಶಿಬಿರದಲ್ಲಿ ಒಟ್ಟು ೬೬ ಜನರು ರಕ್ತದಾನ ಮಾಡಿದರು.. ೨೫ ಜನರು ನೇತ್ರದಾನ ಮತ್ತು ಚರ್ಮದಾನ ಮಾಡುವುದಾಗಿ ವಾಗ್ದಾನ ಮಾಡಿದರು. ರಕ್ತದಾನ ಶಿಬಿರವನ್ನು ಮಹಾವೀರ ಬ್ಲಡ ಬ್ಯಾಂಕ ಸಿಬಂದಿದವರು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಸಮಿತಿಯ ರಾಜೇಂದ್ರ ಜೈನ, ರಾಜೀವ ದೊಡ್ಡಣ್ಣವರ, ಜಿತೋ ಚೇರಮನ್ ಮನೋಜ ಸಂಚೇತಿ, ಯುವ ಘಟಕದ ಅಧ್ಯಕ್ಷ ಅಮಿತ ದೋಷಿ, ಡಾ. ಸಂತೋಷ ಹಜಾರೆ, ಡಾ. ಶ್ರಿÃಕಾಂತ ಕೊಂಕಣಿ,ಡಾ.ಪ್ರಸಾದ ದಡ್ಡಿಕರ, ಮೊದಲಾದವರು ಉಪಸ್ಥಿತರಿದ್ದರು.

loading...