ಮಹಾ ಮಂಡಳದ ಗಣಪತಿ ಮಂಡಳಗಳ ಸ್ಪರ್ಧಾ ಫಲಿತಾಂಶ

0
40

ಅಥಣಿ 18- ಸ್ಥಳೀಯ ಅಥಣಿ ತಾಲೂಕಾ ಸಾರ್ವಜನಿಕ ಗಣಪತಿ ಮಹಾಮಂಡಳ ಹಾಗೂ ತಾಲೂಕಾ ಆಡಳಿತ ಅಥಣಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಫಲಿತಾಂಶ ಜಾಹೀರಪಡಿಸಲಾಯಿತು ಎಂದು ಮಹಾ  ಮಂಡಳದ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಯಾದವಾಡ ತಿಳಿಸಿದ್ದಾರೆ.

ಗುತ್ತಿಗೆದಾರರಾದ ಸಿದ್ದು ಪಾಟೀಲರ ಸೌಜನ್ಯದ ಡಾಲು ಉತ್ಕ್ಕಷ್ಟ 3 ಮೂರ್ತಿಗಳಲ್ಲಿ (ಪ್ರಥಮ) ಶ್ರೀ ಗಜಾನನ ಮಂಡಳ ಲಕ್ಷ್ಮೀ ನಾರಾಯಣ ನಗರ, (ದ್ವಿತೀಯ) ಗಜಾನನ ತರುಣ ಸೇವಾ ಸಂಘ ವಿದ್ಯಾನಗರ, ತೃತೀಯ ಚರ್ಮಾಲಯ ರಸ್ತೆ ಆಯ್ಕೆಯಾದರೆ.

ಅಲಂಕಾರಕ್ಕಾಗಿ ವಿನಾಯಕರಾವ ದೇಸಾಯಿಯವರು ಕೊಡಮಾಡಿರುವ (ಪ್ರಥಮ) ಗಜಾನನ ಮಿತ್ರ ಮಂಡಳ ಪಾರಗಾಂವ ಗಲ್ಲಿ (ದ್ವಿತೀಯ) ಗಜಾನನ ಮಂಡಳ ವಡ್ಡರ ಗಲ್ಲಿ (ಪಾಂಗಿ ದವಾಖಾನೆ ಹತ್ತಿರ) ಮತ್ತು (ತೃತೀಯ) ಗಜಾನನ ಉತ್ಸವ ಮಂಡಳ ಪೆಂಡಾರ ಮಸೂತಿ ಗಲ್ಲಿ. ಸಾಂಸ್ಕ್ಕತಿಕ ಕಾರ್ಯಕ್ರಮಕ್ಕಾಗಿ (ಪ್ರಥಮ) ಗಜಾನನ ಉತ್ಸವ ಸಮಿತಿ ಪಿ.ಡಬ್ಲ್ಯು.ಡಿ (ದ್ವಿತೀಯ), ಮಂಗಲ ಮೂರ್ತಿ ಯುವಕ ಮಂಡಳ ಪಾರಶೆಟ್ಟಿ ಗಲ್ಲಿ (ತೃತೀಯ 1) ಅಮರ ಸ್ನೇಹ ಸಂಘ ಗಜಾನನ ಮಂಡಳ ಕುಂಬಾರ ಬೀದಿ (ತೃತೀಯ 2) ಗಜಾನನ ಮಿತ್ರ ಮಂಡಳ ಅಂಬಾಬಾಯಿ ಗುಡಿ ದಿ. ಭೀಮರಾವ ಸಿಂದಗಿ ಸ್ಮರಣಾರ್ಥ ಅವರ ಮಕ್ಕಳ ಸೌಜನ್ಯ.

ಮೆರವಣಿಗೆ: ಗಣರಾಯ ಅವಾರ್ಡ: (ಪ್ರಥಮ) ಶಿವಶರಣ ಹರಳಯ್ಯ ಸಮಾಜ ಕಾಗಜಿ ಗಲ್ಲಿ (ದ್ವಿತೀಯ),  ವಕ್ರತುಂಡ ಮಹಾಕಾಯ ಡಿ.ಎಸ್.ಎಂ.ಎಸ್. (ತೃತೀಯ) ಗಜಾನನ ಮಿತ್ರ ಸಂಘ ಹಿಪ್ಪರಗಿ ಗಲ್ಲಿ ಈ ಬಹುಮಾನ ಪೋಲೀಸ್ ಇಲಾಖೆಯವರದು.

¸ಂಚಾರಿ ಢಾಲ್: ಮಹಾ ಮಂಡಳದ ಪ್ರತಿಷ್ಠಿತ ಸಂಚಾರಿ ಢಾಲ ಮಹಾ ಮಡಳದ ಪ್ರತಿಷ್ಠಿತ ಸಂಚಾರಿ ಢಾಲ ಡಿ.ಎಸ್. ಎಮ್.ಎಸ್. ವಕ್ರತುಂಡ ಮಹಾಕಾಯ (ದ್ವಿತೀಯ) ಲಕ್ಷ್ಮೀ ನಾರಾಯಣ ನಗರ ಗಜಾನನ ಮಿತ್ರ ಡಳ (ತೃತೀಯ) ಮಂಗಲ ಮೂರ್ತಿ ಯುವಕ ಮಂಡಳ ಪಾರಶೆಟ್ಟಿ ಗಲ್ಲಿ ಈ ರೀತಿ 16 ಬಹುಮಾನಗಳನ್ನು ಹಂಚಲಾಯಿತು. ಒಟ್ಟು 70 ಮಂಡಳಗಳ ವೀಕ್ಷಣೆ ಮಾಡಿ ನಿರ್ಣಾಯಕರಾದ ಕಲಾ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಗೊರಜನಾಳ ಮತ್ತು ಉಪನ್ಯಾಸಕರಾದ ಬಿ.ಎಸ್. ಮಠಪತಿ, ಶಂಕರ ಬಿಳ್ಳೂರ, ಇವರು ಫಲಿತಾಂಶ ಹೇಳಿದರು. ಬಹುಮಾನ ವಿತರಣೆಯನ್ನು ತಹಶೀಲ್ದಾರ ಶರಣಬಸ್ಸಪ್ಪ ಕೊಟೆಪ್ಪಗೋಳ, ನ್ಯಾಯವಾದಿ ಸಿದ್ದಾರೂಢ ಸವದಿ ಸಿಪಿಐ ಬಸವರಾಜ ಯಲಿಗಾರ ಕೆಪಿಸಿಸಿ ಸದಸ್ಯ ಮಹೇಶ ಕುಮಠಳ್ಳಿ, ಮಹಾಮಡಳದ ಅಧ್ಯಕ್ಷ ಶ್ರೀಶೈಲ ಸಂಕ ಅತಿಥಿಗಳ ವಿತರಣೆ ಮಾಡಿದರು. ಕಾರ್ಯುಕ್ರಮದ ನಿರೂಪಣೆ ಪರಿಚಯ ಮಂಡಳದ ಕಾರ್ಯದರ್ಶಿ ಶಿವಪುತ್ರ ಯಾದವಾಡ ಮಾಡಿದರು.

 

loading...

LEAVE A REPLY

Please enter your comment!
Please enter your name here