ಮಹಾ ಸಿಎಂ ಅವಿವೇಕತದ ಹೇಳಿಕೆ ನೀಡುವುದು ನಿಲ್ಲಿಸಲಿ: ಲಕ್ಷ್ಮಣ ಸವದಿ

0
11

ಬೆಳಗಾವಿ: ಉದ್ಧವ ಠಾಕ್ರೆ ಒಬ್ಬ ಮುಖ್ಯಮಂತ್ರಿಯಾಗಿ ಗಡಿ ವಿವಾದ ಬಗ್ಗೆ ಅವಿವೇಕತನದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮದೆಯಾದ ಶೈಲಿಯಲ್ಲಿ ಮಹಾರಾಷ್ಟ್ರ ಸಿಎಂಗೆ ಪ್ರತ್ಯುತ್ತರ ನೀಡಿದರು.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಾರಾಷ್ಟ್ರದ‌ ಸಿಎಂ ಉದ್ದವ ಠಾಕ್ರೆ ಜವಾಬ್ದಾರಿ ಸ್ಥಾ‌ನದಲ್ಲಿದ್ದಾರೆ. ಬೆಳಗಾವಿ ‌ಮಹಾರಾಷ್ಟ್ರದ ಗಡಿ ವಿಷಯ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ವಿನಾಕಾರಣ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದ ಅವರು, ಗಡಿ ವಿವಾದ ಮುಗಿದ ಅಧ್ಯಾಯದ ಬಗ್ಗೆ ವಿನಾಕಾರಣ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು‌‌ ತಿವಿದರು.

ಗಡಿ ವಿಷಯ‌ ಪರಮೋಚ್ಛ ನ್ಯಾಯಾಲಯದಲ್ಲಿ ಪ್ರಕರಣವಿದೆ. ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

loading...