ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ಜಾರಿಗಾಗಿ ಆಗ್ರಹ

0
19

ಬೆಳಗಾವಿ:ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಮತ್ತು ಮಹಿಳೆಯರ ಸೂಕ್ತ ರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರಬೇಕೆಂದು ವಿವಿಧ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ AIDYO, AIDSO, AIMSS ಸೇರಿದಂತೆ ವಿವಿದ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ ನಡೆಸುವುದರ ಮೂಲಕ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿಲಾಯಿತು. ದೇಶಾದ್ಯಂತ ಸರಣಿ ಅತ್ಯಾಚಾರಗಳು ನಡೆಯುತ್ತಲೇ ಬಂದಿವೆ ನಿರ್ಭಯಾ, ಪ್ರಿಯಂಕಾ ರಡ್ಡಿ ಪ್ರಕರಣ ಮತ್ತು ಆಸಿಫಾ ಪ್ರಕರಣ ಹೀಗೆ ಒಂದರ ಮೇಲೊಂದು ಅತ್ಯಾಚಾರದ ಪಟ್ಟಿ ಬೆಳೆಯುತ್ತಲೇ ಇದ್ದು ಸರಕಾರ ಮಹಿಳೆಯರ ರಕ್ಷಣೆಯಲ್ಲಿ ವಿಫಲವಾಗಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಮಹಿಳೆಯರ ರಕ್ಷಣೆಗೆ ಕಠೀಣ ಕಾನೂನನ್ನು ಜಾರಿಗೆಗೊಳಿಸಿ ಎಂದು ಘೋಷಣ ಕೂಗಿ ಸರಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ವಿದ್ಯಾರ್ಥಿನಿ ಗಂಗಾ ಕೋಕರೆ ಮಾತನಾಡಿ ದೇಶದಲ್ಲಿ 20 ನಿಮಿಶಕ್ಕೆ ಒಬ್ಬಳು ಮಹಿಳೆ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾಳೆ ಇದಕ್ಕೆ ಮೂಲ ಕಾರಣ ಅಶ್ಲೀಲ ಚಲನಚಿತ್ರ ಮತ್ತು ಪ್ರೋನೋಗ್ರಾಪಿಗಳಾಗಿದ್ದು ಸರಕಾರ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಪರಾಧಿಗಳು ಹೋರಗೆ ಬಾರದಂತೆ ಕಾನೂನನ್ನು ಕಠೀಣಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ಬಿಳ್ಳೂರ, ರಾಜು ಗಾಣಿಗೇರ, ರೋಹಿತ್ ಹಂಚಿನಮಣಿ, ಶಿವು ಅಂಗಡಿ, ಕಿರಣ ವಡ್ಡರ ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇತರರು.

loading...