ಮಹಿಳೆಯರ ಸಂರಕ್ಷಣಾ ಕಾಯ್ದೆ ಕುರಿತು ಶಿಬಿರ

0
8

ಗದಗ, 15- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಗದಗ ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಗ್ರಾಮ ಪಂಚಾಯತಿ ಹಾತಲಗೇರಿ, ಹುಲಕೋಟಿ ಹಾಗೂ ಬಿಂಕದಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೌಟಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ನಿಯಮ 2006 ರ ರಡಿ ಜಾಗೃತಿ ಶಿಬಿರವು ಆ.ದಿ 25 ರಂದು  ಬೆಟಗೇರಿಯ ಸಮುದಾಯ    ಭವನನದಲ್ಲಿ ಏರ್ಪಡಿಸಲಾಗಿತ್ತು                                 ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀ ಶರು ವ.ನಿ.ಜೆ.ಎಂ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ, ಕಾರ್ಯ ದರ್ಶಿಗಳಾದ   ಶ್ರೀ ಉಮೇಶ ಮೂಲಿಮನಿ,   ಕಾರ್ಯಕ್ರಮ ಉದ್ಘಾಟಿಸಿ ಬಾಲ್ಯ ವಿವಾಹ, ಮಹಿಳಾ ದೌರ್ಜನ್ಯ, ವರದ ಕ್ಷಣೆ ಕಿರುಕುಳದ ಬಗ್ಗೆ ಮಾತನಾಡಿದರು.

ಗದಗ ಬೆಟಗೇರಿ ನಗರ ಸಭೆ  ಸದಸ್ಯರಾದ  ಶ್ರೀಮತಿ ಲಕ್ಷ್ಮೀದೇವಿ. ವಿ.ಕಟ್ಟಿಮನಿ ಅದ್ಯಕ್ಷ ಸ್ಥಾನ ವಹಿಸಿ ಮಹಿಳೆಯರು ಪುರುಷರಿಗಿಂತಲು ಕಡಿಮೆ ಇಲ್ಲ ಎಂದು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ  ಉಪನಿದೇರ್ಶಕರಾದ ಶ್ರೀ.ಎಚ್.ಜೆ. ಚಂದ್ರಶೇಖರಯ್ಯ ಇವರು ಸಂಸಾರದಲ್ಲಿ ಗಂಡು ಹೆಣ್ಣು ಹೊಂದಾಣಿಕೆಯಿಂದ ಬಾಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ. ವಾಯ್. ಆರ್.ಗುಡೂರು, ಶ್ರೀ. ಜೆ.ಸಿ.ರೇಶ್ಮಿ ಶ್ರೀಮತಿ ಭಾರತಿ ಶಲವಡಿ  ಅವರು ಕೌಟುಂಬಿಕ ದೌರ್ಜನ್ಯ ತಡೆ ನಿಷೇದ ಕಾಯ್ದೆ  ಹಾಗೂ ವರದಕ್ಷಿಣೆ ಕಾಯ್ದೆ ಕುರಿತು ಮಾತನಾಡಿದರು.

ಶಿಶು ಅಬಿವೃದ್ದಿ ಯೋಜನಾಧಿಕಾರಿ ಗದಗ ಶ್ರೀಯುತ ಎಸ್.ಟಿ.ಆನಂದಿ  ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಪಿ.ಎಮ್.ಕುಕನೂರು ಇವರು ವಂದನಾರ್ಪಣೆ ಮಾಡಿದರು.

 

loading...