ಮಹಿಳೆಯರ ಸಮಾಜ ಸುಧಾರಣೆ ಕಾರ್ಯ ಶ್ಲಾಘನೀಯ: ಶ್ರೀಗಳು

0
20

ಕನ್ನಡಮ್ಮ ಸುದ್ದಿ-ಗದಗ: ಭಾರತೀಯ ಸಂಸ್ಕೃತಿ ಬಹಳ ಪ್ರಾಚೀನವಾದದ್ದು, ಎಲ್ಲರನ್ನು ಪ್ರೀತಿಸುವ ಸಂಸ್ಕೃತಿ ನಮ್ಮದು. ನಮ್ಮಲ್ಲಿ ಚಾರ್ವಾಕರು ಇದ್ದಾರೆ, ವೈದಿಕ, ಶೈವ, ವೈಷ್ಣವ, ಬೇರೆ- ಬೇರೆ ಪಂಥಗಳು ಚಾಲ್ತಿಯಲ್ಲಿ ಇರುವುದು ಮಾತ್ರವಲ್ಲ. ಶಂಕರಾಚಾರ್ಯರು, ಮಧ್ವಾಚಾರ್ಯರು ಈ ರೀತಿ ಅನೇಕ ಮಹಾನ್‌ ಪುರುಷರನ್ನು ಹೊಂದಿದ ದೇಶ ನಮ್ಮದು ಎಂದು ಗದುಗಿನ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಗದುಗಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಜ್ಞಾನ ಮತ್ತು ಯೋಗ ನಮ್ಮ ದೇಶದ ಕೊಡುಗೆ. ಈ ಹಿನ್ನೆಲೆಯಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ಮಾಡುವ ಕಾರ್ಯ ಬಹಳ ಮುಖ್ಯ. ಸಮಾಜದಲ್ಲಿ ತದ್ವಿರುದ್ಧವಾಗಿ ನಡೆಯುವ ಚಿತ್ರವನ್ನು ವಚನದ ಮೂಲಕ ವರ್ಣಿಸಿ ಹಕ್ಕಿಗಳೆಲ್ಲಾ ಗೂಡಿಗೆ ಬರುವಂತೆ ಸರ್ವ ಜನತೆ ಆತ್ಮನ ಕಡೆಗೆ ಬರಬೇಕಾಗುತ್ತದೆ. ಪರಮಾತ್ಮನ ಕಡೆಗೆ ಬರಬೇಕಾಗುತ್ತದೆ ಎಂದರು.
ನೂರು ವರ್ಷದ ಇತ್ತೀಚೆಗೆ ಈಶ್ವರೀಯ ವಿಶ್ವ ವಿದ್ಯಾಲಯ ಮಹಿಳೆಯರನ್ನೇ ಮುಂದಿಟ್ಟು ಮಹಿಳೆಯರಿಂದಲೇ ಸಮಾಜವನ್ನು ಸುಧಾರಿಸುವ ವಿಶಿಷ್ಠ ಕಾರ್ಯ ಮಾಡುತ್ತಿದೆ. ಈಶ್ವರೀಯ ವಿಶ್ವ ವಿದ್ಯಾಲಯದ ಸಮರ್ಪಿತ ಅಕ್ಕಂದಿರ ತ್ಯಾಗ, ಸೇವೆಯ ಬಗ್ಗೆ ಶ್ಲಾಘಿಸಿದರು. ಅವರ ಪ್ರೀತಿ, ಕರುಣೆ, ಸ್ನೇಹ, ಸೌಜನ್ಯತೆ ತಮ್ಮ ಸಂಪರ್ಕದಲ್ಲಿ ಬಂದ ಎಲ್ಲರಿಗೂ ಪರಮಾತ್ಮನ ಜ್ಞಾನ ಮತ್ತು ಧ್ಯಾನದ ಮಹತ್ವ ತಿಳಿಸುವ ಇವರ ಕೆಲಸ ಅದ್ಭುತ ಮತ್ತು ರೋಮಾಂಚನಕಾರಿ.
ಪ್ರಶಾಂತವಾದ ಸರೋವರಕ್ಕೆ ಕಲ್ಲೆಸೆದರೆ ಉತ್ಪನ್ನವಾಗುವ ಅಲೆಗಳು ಸರೋವರದ ಮೂಲೆ ಮೂಲೆಗೂ ತಲುಪುತ್ತವೆ. ಅದೇ ರೀತಿ ಶಬ್ದ ತರಂಗ ಹಾಗೂ ದೃಶ್ಯ ತರಂಗಗಳು ವಾತಾವರಣದಲ್ಲಿ ಇವೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಎಲ್ಲರೂ ಒಟ್ಟಾಗಿ ಮೆಡಿಟೇಶನ್‌ ಮಾಡುವುದರಿಂದ ಶಾಂತಿಯ ತರಂಗಗಳು ಹರಡುತ್ತವೆ. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆ. ಇದು ಮನಸ್ಸಿಗೂ, ಅರೋಗ್ಯಕ್ಕೂ ಮತ್ತು ಸಮಾಜಕ್ಕೂ ಒಳ್ಳೆಯದು.
ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಹೆಣ್ಣು ಮಕ್ಕಳು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಉತ್ತಮ ಚಾರಿತ್ರ್ಯವಂತರಾಗಿ, ಮರ್ಯಾದಿತ ಜೀವನ ಇಟ್ಟುಕೊಂಡಿದ್ದಾರೆ. ತಮ್ಮ ಶ್ರೇಷ್ಠ ನಡತೆಯ ಮೂಲಕ ಪರಿಣಾಮ ಬೀರುತ್ತಾರೆ ಎಂದು ಬ್ರಹ್ಮಾಕುಮಾರಿಯರನ್ನು ಶ್ಲಾಘಿಸಿದರು.
ಸ್ಥಳೀಯ ಸೇವಾ ಕೇಂದ್ರದ ಸಂಚಾಲಕ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿ, ನಮ್ಮ ದೇಶದ ಎಲ್ಲ ಹಬ್ಬಗಳು ಒಳ್ಳೆಯ ಮೌಲ್ಯಗಳನ್ನು ಹುಟ್ಟುಹಾಕಿ ನಡೆಸಿಕೊಂಡು ಬಂದ ಆಚರಣೆಯಾಗಿದೆ. ಗುರು ಎಂದರೆ ಅಂಧಕಾರ ಹೋಗಲಾಡಿಸುವವರು. ದೇವರ ಬಗ್ಗೆ ಇರುವ ಅನೇಕ ಬಿನ್ನಾಭಿಪ್ರಾಯ ದೂರಮಾಡಿ ಒಬ್ಬ ಪರಮಾತ್ಮನ ಬಳಿ ಎಲ್ಲರನ್ನೂ ಕರೆದೊಯ್ಯುವವರು. ಬಂಧನದಲ್ಲಿ ಸಿಕ್ಕಿಹಾಕಿಕೊಂಡವರಿಗೆ ಮುಕ್ತಿ ಕೊಡುವವನೆ ಗುರು. ಇಂತಹ ಜವಾಬ್ದಾರಿಯ ಸ್ಥಾನದಲ್ಲಿರುವ ತೋಂಟದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿಯವರನ್ನು ಗೌರವಿಸಿ ಸನ್ಮಾನಿಸಿದರು. ಜೊತೆಗೆ ಶಿವಧ್ಯಾನದಿಂದ ಮಾನಸಿಕ ಶಾಂತಿ, ಶಾರೀರಿಕ ಆರೋಗ್ಯ, ಸಶಕ್ತ ಸಮಾಜವನ್ನು ಕಟ್ಟಲು ಸಾಧ್ಯವಿದೆ. ಸಿಟ್ಟು ಬಂದಾಗ ಮನಸ್ಸಿನಲ್ಲಿ ನಕಾರಾತ್ಮಕ ಸಂಕಲ್ಪಗಳಿರಬಹುದು, ಒತ್ತಡ ತುಂಬಿದ ಇರ್ಷೇ ದ್ವೇಷ ತುಂಬಿದ ಸಂಕಲ್ಪಗಳು ಇರುತ್ತವೆ ಆ ಕ್ರೋಧದ ಸಂದರ್ಭದಲ್ಲಿ ಶರೀರದÀ ಮೇಲೆ ದುಷ್ಪರಿಣಾಮವಾಗಿ ರಕ್ತದ ಒತ್ತಡ, ಉಸಿರಾಟದ ಕ್ರೀಯೆ, ಎಂಡೋಕ್ರೈನ್‌ ಸಿಸ್ಟ್‌ಮ್‌, ಡೈಜಸ್ಟಿವ್‌ ಸಿಸ್ಟ್‌ಮ್‌, ಎಲ್ಲವೂ ಹೆಚ್ಚು ಕಡಿಮೆ ಆಗುತ್ತದೆ.
ಶರೀರದ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಆ ಶಾಂತಿಯ ಪ್ರಕಂಪನಗಳು ಮನೆಯಲ್ಲಿ, ಕುಟುಂಬದಲ್ಲಿ ಹರಡಿ ಮನೆಯೂ ಶಾಂತವಾಗುತ್ತದೆ. ಸಮಾಜದ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗೋವಿಂದರಾಜ ಕುಷ್ಟಗಿ, ಶಶಿಧರ ಪಟ್ಟಣಶೆಟ್ಟಿ, ವರದರಾಜ ಹೆಬಸೂರ ಮುಂತಾದವರು ಪಾಲ್ಗೋಂಡಿದ್ದರು.

loading...