ಮಹಿಳೆಯಿಂದ ಎಟಿಎಂ ಕಾರ್ಡ್ ಪಡೆದು ವಂಚನೆ

0
14

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ನಗರದಲ್ಲಿ ಮಹಿಳೆ ಒಬ್ಬರಿಗೆ ನಿಮ್ಮ ಎಟಿಎಂ ಕಾರ್ಡ್ ಲಾಕ್ ಆಗಿದೆ ಎಂದು ಸುಳ್ಳು ಹೇಳಿ ಎಟಿಎಂ ಕಾರ್ಡ್ ಸಂಖ್ಯೆ ಪಡೆದು, 1,06,499 ರೂ. ವಂಚನೆ ಮಾಡಿರುವ ಕುರಿತು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಉಣಕಲ್ಲ ಪ್ಯಾಟಿ ಓಣಿಯ ಗಂಗವ್ವ ಮಹದೇವಪ್ಪ ಹೆಬ್ಬಳ್ಳಿ ಅವರಿಗೆ ಆನ್‍ಲೈನ್ ಮೂಲಕ ವಂಚಿಸಿದ್ದಾರೆ. ಮೇ 4ರಿಂದ 6ನೇ ತಾರೀಖಿನ ನಡುವೆ ದೀಪಕ ಕುಮಾರ ಶರ್ಮಾ ಎಂಬಾತ ಗಂಗವ್ವನಿಗೆ ಕರೆ ಮಾಡಿದ್ದ. ತಾನು ಬ್ಯಾಂಕ್ ಮ್ಯಾನೇಜರ್ ಇದ್ದು, ಮುಂಬೈನಿಂದ ಕರೆ ಮಾಡುತ್ತಿದ್ದೇನೆ ಎಂದು ಕರೆ ಮಾಡಿ ನಂಬಿಸಿದ್ದ. ಬಳಿಕ ನಿಮ್ಮ ಕಾರ್ಡ್ ಲಾಕ್ ಆಗಿದೆ ಎಂದು ಹೇಳಿ ಆನ್‍ಲೈನ್ ಮೂಲಕ 1,06,499 ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಪಾಸ್‍ಬುಕ್ ಜಮಾ ಮಾಡಿಸಲು ಬ್ಯಾಂಕ್‍ಗೆ ಹೋದಾಗ ವಂಚನೆ ಬಗ್ಗೆ ಗೊತ್ತಾಗಿದೆ ಎಂದು ಗಂಗವ್ವ ದೂರಿನಲ್ಲಿ ಹೇಳಿಕೊಂಡಿದ್ದಾರೆ.

loading...