ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸುತ್ತೆವೆ:ಪಾಟೀಲ

0
24

ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸುತ್ತೆವೆ:ಪಾಟೀಲ

ಕನ್ನಡಮ್ಮ ಸುದ್ದಿ-ಬೆಳಗಾವಿ:ತಾಲೂಕಿನ ಪಿಎಲ್‌ಡಿ ಬ್ಯಾಂಕಿನ ಚುನಾವಣೆ ಬೆಳವಣಿಗೆಯಿಂದ ನೋವಾಗಿದೆ,ಸಚಿವರು ಉನ್ನತ ಹುದ್ಧೆಯಲ್ಲಿದ್ದು ಮಹಿಳಾ ಶಾಸಕಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕಾರ್ಯಕರ್ತರಿಗೆ ನೋವಾಗಿದೆ,ಕಾಂಗ್ರೆಸ್ ಪಕ್ಷ ಇತಿಹಾಸವಿರುವ ಪಕ್ಷ,ಶಿಸ್ತು ಇರುವ ಪಕ್ಷ,ಆದ್ದರಿಂದ ಉಸ್ತುವಾರಿ ಸಚಿವರು ಯಾರ ಮನಸ್ಸು ನೋಯಿಸದಂತೆ ಮಾತನಾಡಬೇಕು.ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸುತ್ತೆವೆÉ ಎಂದು ಕಾಂಗ್ರೆಸ್ ಮುಖಂಡ ಸಿ ಸಿ ಪಾಟೀಲ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತುನ ಪಕ್ಷವಾಗಿದೆ.ಜಿಲ್ಲಾ ಉಸ್ತುವಾರಿಗಳು ಮಹಿಳೆಯರ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿದ್ದು ಸರಿಯಲ್ಲ.ಅವರು ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದರು.
ಬೆಳಗಾವಿ ತಾಲೂಕ್ಕೂ ಪಂಚಾಯತಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ ಸಚಿವರ ಮಾತು ಖಂಡಸುತ್ತೆವೆ,ಒಂದೆ ಪಕ್ಷದಲ್ಲಿದ್ದುಪಕ್ಷದ ಶಾಸಕಿಯನ್ನು ಅವಮಾನಿಸುವ ರೀತಿ ಮಾತನಾಡುವುದು ಸರಿಯಲ್ಲ.ದೊಡ್ಡವರು ಈ ತರಹ ಮಾತನಾಡಬಾರದು ಎಂದರು.
ಶಾಸಕಿ ಹೆಬ್ಬಾಳಕರ್ ಯಾವುದೇ ಜಾತಿ ಭೇದ ಮಾಡಿಲ್ಲ,ಗ್ರಾಮಿಣ ಕ್ಷೆÃತ್ರದಲ್ಲಿ ಕೆವಲ ೨೮ ಸಾವಿರದಷ್ಟು ಲಿಂಗಾಯತ ಮತದಾರರಿದ್ದಾರೆ.ಆದರೆ ಹೆಬ್ಬಾಳ್ಕರ ಲಕ್ಷಕ್ಕಿಂತ ಅಧೀಕ ಮತ ಪಡೆಸಿದ್ದಾರೆ.ಅಂದರೆ ಕ್ಷೆÃತ್ರದ ಎಲ್ಲ ಸಮುದಾಯದ ಬೆಂಬಲ ಅವರಿಗಿದೆ ಎಂದರು.
ಪ್ರತಿಕಾ ಗೊಷ್ಠಿಯಲ್ಲಿ ಗ್ರಾಮಿಣ ಕ್ಷೆತ್ರದ ಮುಖಂಡರು ಇದ್ದರು.

loading...