ಮಹೇಶ ಕುಮಠಳ್ಳಿ ಅಭಿಮಾನಿಂದ ಹರಕೆ ಪೂರೈಕೆ

0
2

ಅಥಣಿ : ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಗೆದ್ದು ಅರ್ಹರಾದ ಹಿನ್ನೆಲೆ ನೂತನ ಶಾಸಕ ಮಹೇಶ ಕುಮಟಳ್ಳಿ ಅಭಿಮಾನಿಯಿಂದ ದಂಡ ನಮಸ್ಕಾರ ಹಾಕಿ ಅಭಿಮಾನ ಮೆರೆದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.ಅಥಣಿ ಶಾಸಕ ಮಹೇಶ ಕುಮಟಳ್ಳಿ ಅಭಿಮಾನಿಯಿಂದ ೨ ಕಿ.ಮೀ ದೂರದಿಂದ ದಂಡ ನಮಸ್ಕಾರ ಹಾಕಿ ತನ್ನ ನೆಚ್ವಿನ ಶಾಸಕನಿಗೆ ನಿಷ್ಠೆ ತೋರಿದ್ದಾನೆ.

ಸತ್ತಿ ಗ್ರಾಮದ ಕುಮಟಳ್ಳಿ ಅಭಿಮಾನಿ ಬಸಪ್ಪ ಕಾಡಪ್ಪಾ ರುದ್ರಗೌಡರ ದೀರ್ಘ ದಂಡ ನಮಸ್ಕಾರಿಸಿದ್ದಾನೆ.ಮಹೇಶ ಕುಮಟಳ್ಳಿ ಚುನಾವಣೆಯಲ್ಲಿ ಗೆದ್ದು ಅನರ್ಹ ಪಟ್ಟ ಹೋಗಲಿ ಎಂದು ಹರಕೆ ಹೊತ್ತಿದ್ದ ಅಭಿಮಾನಿ ಸತ್ತಿ ಗ್ರಾಮದ ಕೃಷ್ಣಾ ನದಿ ತೀರದಿಂದ ಆಂಜನೇಯ ದೇವಸ್ಥಾನದ ವರೆಗೂ ದಂಡ ನಮಸ್ಕಾರ ಹಾಕಿದ್ದಾನೆ .

loading...