ಮಾದಕ ವಸ್ತು ಮಾರಾಟ ಓರ್ವ ಬಂಧನ

0
18
ಮಾದಕ ವಸ್ತು ಮಾರಾಟ ಓರ್ವ ಬಂಧನ
ಕನ್ನಡಮ್ಮ ಸುದ್ದಿ-ಬೆಳಗಾವಿ: ಶಿವಾಜಿ ನಗರದ ಜೈನ್ ಕಾಲೋನಿ ಸರಕಾರಿ ಮರಾಠಿ ಶಾಲೆ ಬಳಿ ಪನ್ನಿ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ವೀರಭದ್ರ ನಗರ ನಾಲ್ಕನೇ ಕ್ರಾಸ್‌ನ ಮಹ್ಮದ ತೌಸೀಫ್ ಬಸೀರ ಅಹ್ಮದ ಖಾಜಿ(೩೭) ಬಂಧಿತ ವ್ಯಕ್ತಿ. ಈತನಿಂದ  ೩೧.೮೦೦ ಬೆಲೆ ಬಾಳುವ ಪನ್ನಿ ರು.೨೭.೬೦೦, ೨೫ ಲೈಟರ್ ೭ ರೈಲ್ವೆ ಟಿಕೆಟ್, ಪನ್ನಿ ಮಾದಕ ವಸ್ತು ಸೇವನೆ ಮಾಡುವ ಸಿಗರೇಟ್ ನಮೂನೆಯ ಕಾಗದದ ಕೊಳುವೆ ಹಾಗೂ ಅಲ್ಯೂಮಿನಿಯಂ ಪಾಯಿಲ್ ರು.೬೦.೪೦೦ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
loading...