ಮಾನವೀಯತೆ ಮೆರೆದ ತರಕಾರಿ ಮಾರುಕಟ್ಟೆ ಮಾಲೀಕರು

0
24

ಕನ್ನಡಮ್ಮ ಸುದ್ದಿ-ಶಿರಸಿ: ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಕಾಯಕದಲ್ಲಿ ತೊಡಗಿದವರು ತಮ್ಮ ಬದುಕಿನ ಬಂಡಿ ಸಾಗಿಸುವ ಜೊತೆಗೆ ಸೂರಿಲ್ಲದೆ ಅನಾಥವಾಗಿ ಆಶ್ರಮ ಸೇರಿದ ವೃದ್ಧರ ಬಾಳಿಗೆ ಆಸರೆಯಾಗುವ ಕಾರ್ಯಕ್ಕೆ ಕೈಜೋಡಿಸಿ ಮಾದರಿಯಾಗಿದ್ದಾರೆ.
ಶಿರಸಿಯ ತರಕಾರಿ ಮಾರುಕಟ್ಟೆಯಲ್ಲಿನ ಅಮಘಡಿ ಮಾಲಿಕರು ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ವೃದ್ದಾಶ್ರಮವೊಂದಕ್ಕೆ ನಿರಂತರವಾಗಿ ತರಕಾರಿ ನೀಡಿ ಮಾನವೀಯತೆ ಮೆರೆಯುತ್ತಿದ್ದರೆ. ಇಲ್ಲಿನ ಅಬ್ರಿಮನೆ ಸಮೀಪದ ಸುಯೋಗಾಶ್ರಮ ಕಳೆದ ಒಂಬತ್ತು ತಿಂಗಳಿನಿಂದ ಹದಿನೈದಕ್ಕೂ ಹೆಚ್ಚು ವ್ರದ್ಧರು ಮತ್ತು ಅನಾಥರಿಗೆ ತನ್ನ ನಿಸ್ವಾರ್ಥ ಸೇವೆ ನೀಡುತ್ತಿದೆ. ಆಶ್ರಮದ ನಿವಾಸಿಗಳಿಗೆ ಊಟ, ವಸತಿ ಮತ್ತು ಇನ್ನಿತರೆ ಸೌಲಭ್ಯ ನೀಡುತ್ತಾ ಬಂದಿರುವ ಆಶ್ರಮಕ್ಕೆ ದಾನಿಗಳು ಸಹಾಯ ನೀಡುವಂತೆ ವಿನಂತಿಸಿತ್ತು. ಈ ವೇಳೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಯುವಾ ಬ್ರಿಗೇಡ್ ಕಾರ್ಯಕರ್ತರ ಸಲಹೆಯಂತೆ ಮಾರುಕಟ್ಟೆಯಲ್ಲಿ ರಟ್ಟಿನ ಡಬ್ಬವಿಟ್ಟು, ತರಕಾರಿ ದಾನವಾಗಿ ನೀಡುವವರು ಇಲ್ಲಿ ತರಾಕಾರಿ ಹಾಕಬಹುದೆಂದು ಕೋರಲಾಗಿತ್ತು. ಇದನ್ನು ಗಂಭೀರವಾಗಿ ಪರಿಣಿಸಿದ ತರಕಾರಿ ಅಂಗಡಿ ಮಾಲಿಕರು ರಟ್ಟಿನ ಡಬ್ಬದಲ್ಲಿ ಹಾಕಿ ಇಟ್ಟು ಯವುದೋ ಒಂದು ದಿನ ತೆಗೆದುಕೊಂಡು ಹೋಗುವದರಿಂದ ತರಕಾರಿ ಹಾಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರತಿ ಶುಕ್ರವಾರ ಪ್ರತಿಯೊಂದು ಅಂಗಡಿಯವರೂ ತರಕಾರಿ ದಾನವಾಗಿ ನೀಡುತ್ತೆವೆ ಎಂದು ಉದಾರ ಮನಸ್ಸಿನಿಂದ ಆಶ್ರಮದ ಮುಖ್ಯಸ್ಥರಿಗೆ ತಿಳಿಸಿದ್ದು, ಅದರಂತೆ ಪ್ರತಿ ಶುಕ್ರವಾರ ಇಲ್ಲಿನ ತರಕಾರಿ ಮಾರುಕಟ್ಟೆ ಮಾಲೀಕರು ಆಶ್ರಮಕ್ಕೆ ತರಕಾರಿ ನೀಡುತ್ತಿದ್ದು, ಮಾನವೀಯ ಹಸ್ತ ಚಾಚುತ್ತಿದ್ದಾರೆ.

loading...