ಮಾಲಾಪೂರದಲ್ಲಿ ಬಾಲಕರಿಂದ ಸ್ವಚ್ಚತೆ

0
44

 Malapur Swachate

ಮುಧೋಳ :ತಾಲೂಕಿನ ಮಾಲಾಪೂರದಲ್ಲಿ ಶಾಲೆಯ ಬಾಲಕರು, ಹಾಗೂ ಗ್ರಾಮದ ಯುವಕರು ಸೇರಿ ,ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಎರ್ಪಡಿಸಿದ್ದರು. ಇನ್ನು ಮುಂದೆ ಪ್ರತಿ ರವಿವಾರ ನಗರ ಸ್ವಚ್ಚತೆ ಸೇರಿದಂತೆ, ಪ್ರತಿ ಮನೆಗಳ ಮುಂದೆ ಗಿಡ ನೆಡುವ ಕಾರ್ಯಕ್ರಮ ನಡೆಸುವ ಕುರಿತು ನಿರ್ಣಯಿಸಲಾಯಿತು.
ಪ್ರಧಾನಿ ಮೋದಿ ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮಾಲಾಪೂರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಮಾಡಲಾಯಿತು. ಪ್ರಮುಖರಾದ ಶಂಕರ ಟಿರ್ಕಿ,ಮಲ್ಲಪ್ಪ ಟಿರ್ಕಿ,ಸುರೇಶ ಭಸ್ಮೆ,ರಾಜು ಅಥಣಿ,ಮಂಜು
ಬಲಾಮಸ್ಸಿ, ನಾಮದೇವ ಕೊಪರ್ಡೆ,ಶಿವು ವಂದಾಲ,ಮಹೇಶ ಘಾಟಗೆ, ಶ್ರೀಮಂತ ಮಾಂಗ ಸೇರಿದಂತೆ ಗ್ರಾಮದ ಬಾಲಕರು ಯುವಕರು ಸೇರಿಕೊಂಡು ಸ್ವಚ್ಚತೆಯಲ್ಲಿ ಪಾಲ್ಗೊಂಡಿರುವುದು ವಿಶೇಷ ಎನಿಸಿತು.

loading...

LEAVE A REPLY

Please enter your comment!
Please enter your name here