ಮಿಗ್-27 ವಿಮಾನ ಪತನ: ಪೈಲೆಟ್ ಪಾರು

0
13

ಜೋಧ್ಪುರ್: ಭಾರತೀಯ ವಾಯು ಸೇನೆಗೆ ಸೇರಿದ ಮಿಗ್ 27 ವಿಮಾನ ಮಂಗಳವಾರದಂದು ರಾಜಸ್ಥಾನದ ಜೋಧ್ಪುರ್ ನ ಬನಾದ್ ಪ್ರಾಂತ್ಯದಲ್ಲಿ ಪತನಗೊಂಡಿದೆ.
ಇಂದು ಬೆಳಗ್ಗೆ ಎಂದಿನಂತೆ ದೈನಂದಿನ ಹಾರಾಟ ನಡೆಸುವ ವೇಳೆ ವಿಮಾನ ಪತನಗೊಂಡಿದ್ದು, ಅದೃಷ್ಟವಶಾತ್ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಸಂಬಿತ್ ಘೋಷ್, ವಿಮಾನ ಪತನಗೊಳ್ಳುವ ಮುನ್ನವೇ ಪೈಲೆಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಘಾತದ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

loading...