ಮಿಸ್ಟರ್ ಯಡಿಯೂರಪ್ಪಗೆ ಸಿಎಂ ಆಗಿ ಉಳಿಸುವ ಅಗತ್ಯವಿಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

0
34

ಬೆಳಗಾವಿ/ಗೋಕಾಕ

ಯಡಿಯೂರಪ್ಪ ಮುಂಬಾಗಿಲಿನಿಂದ ಸಿಎಂ ಆಗೇಲ್ಲೆ‌ ಇಲ್ಲ. 2008ರಲ್ಲೂ ಹಿಂಬಾಗಲಿನಿಂದ ಸಿಎಂ ಆದ್ರು. ಈಗೂ‌ ಸಹ ಹಿಂಬಾಗಿಲಿನಿಂದ ಸಿಎಂ ಆಗಿದ್ದಾರೆ. ಯಡಿಯೂರಪ್ಪಮ ಸಿಎಂ ಆಗಿ ಉಳಿಸುವ ಅಗತ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ಶನಿವಾರ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಯಡಿಯೂರಪ್ಪ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಯಿತು. ಏನು ಅಧಿಕಾರ ಮಾಡಿದ್ದಾರೆ. ಪ್ರವಾಹ ಬಂದಾಗ ಪರಿಹಾರ ಕೊಡಿ ಎಂದರೆ ಖಜಾನೆಯಲ್ಲಿ ಹಣ ಇಲ್ಲ ಅಂತಾರೆ. ಖಜಾನೆ ಭರ್ತಿ ಮಾಡಲು ಆಗದಿದ್ರೆ ಬಿಟ್ಟು‌ ಹೋಗಿ‌‌ ಮಿಸ್ಟರ್ ಯಡಿಯೂರಪ್ಪ ಎಂದು ತಮ್ಮದೆಯಾದ ಶೈಲಿಯಲ್ಲಿ ವಾಗ್ದಾಳಿ ‌ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಪರವಾಗಿ ಮತದಾರರು ಆಶೀರ್ವಾದ ಕೇಳಲು‌ ಗೋಕಾಕಗೆ ಬಂದಿದ್ದೇನೆ.
ಇದು ಸಾರ್ವತ್ರಿಕ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮೇಶ ಜಾರಕಿಹೊಳಿ‌ ಅವರನ್ನು ಆಯ್ಕೆ ಮಾಡಿದ್ದಿರಿ. ಉಪಚುನಾವಣೆ ಬರಲು ರಮೇಶ ಜಾರಕಿಹೊಳಿ‌ ಕಾರಣ ಎಂದರು.

ರಾಜ್ಯದಲ್ಲಿ 15 ಕಡೆ ಉಪಚುನಾವಣೆ ನಡೆಯುತ್ತಿವೆ. ಕಾಂಗ್ರೆಸ್ ನ 14 ಹಾಗೂ ಜೆಡಿಎಸ್ ನ 3 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರ ಮಾಡಿದರು. ಎರಡು ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿಲ್ಲ. ಉಳಿದ ಕಡೆಯಲ್ಲಿ ನಡೆಯುತ್ತಿದೆ.
ಈ ಚುನಾವಣೆಯಲ್ಲಿ ರಾಜ್ಯ ‌ಸರಕಾರದಿಂದ ನೂರಾರು ಕೋಟಿ ವೆಚ್ಚ ಮಾಡುತ್ತಿದೆ. ರಾಜಕಾರಣ ಹುಡುಹಾಟವಲ್ಲ. ನಮ್ಮ ಪರವಾಗಿ ಧ್ವನಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ‌ ಆಯ್ಕೆಯಾದರು. ಬಿಜೆಪಿ ಪಕ್ಷಾಂತರವಾಗುವಾಗ ಗೋಕಾಕ ಜನರನ್ನು ಕೇಳದೆ ಬಿಜೆಪಿಗೆ ಪಕ್ಷಾಂತರ ‌ಮಾಡಿದ್ರೆ ಜನರಿಗೆ ದ್ರೋಹ ಮಾಡಿದ ಹಾಗೆ ಎಂದರು.

ರಮೇಶ ಜಾರಕಿಹೊಳಿ‌ ಪಕ್ಷಾಂತರ ಮಾಡಿದಾಗ ಅಂದಿನ ಸ್ಪೀಕರ್ ರಮೇಶಕುಮಾರ ಅವರಿಗೆ ದೂರು ನೀಡಿದ್ದೇವು. ರಮೇಶ ಜಾರಕಿಹೊಳಿ‌ ಸೇರಿದಂತೆ 17 ಜನರ ಮೇಲೆ‌ ದೂರು‌ ನೀಡಿದ‌ ಮೇಲೆ ಅವರನ್ನು ಅನರ್ಹರನ್ನಾಗಿ ಮಾಡಿದರು ಎಂದರು.

ರಮೇಶಕುಮಾರ ತೀರ್ಪು ನೀಡಿದ ಬಳಿಕ ಇವರು ಶಾಸಕರಾಗಲು ನಾಲಾಯಕ್ ಎಂದು ಆದೇಶ ನೀಡಿದರು. ಇದಾದ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದರು. ಸುಪ್ರೀಂ ತೀರ್ಪು ನೀಡಿತ್ತು. ರಮೇಶಕುಮಾರ ನೀಡಿದ ತೀರ್ಪು ಸಂವಿಧಾನ ಬದ್ದವಾಗಿದೆ. ಇವರು ಶಾಸಕರಾಗಿ ಉಳಿಯಲು ಯೋಗ್ಯರಲ್ಲ‌ ಎಂದು ರಮೇಶಕುಮಾರ ತೀರ್ಪು ಎತ್ತಿ ಹಿಡಿದರು ಎಂದರು.

ಅನರ್ಹತೆಯನ್ನು ಹೋತ್ತುಕೊಂಡು ಜನತೆಯ ಮುಂದೆ ಬಂದಿದ್ದಾರೆ. ಸುಪ್ರೀಂ ಕೋಟ್೯ ಶಾಸಕರಾಗಲು ನಾಲಾಯಕ್ ಎಂದು ತೀರ್ಪು ನೀಡಿದೆ. ಜನತಾ ತೀರ್ಪು ಸಹ ನಾಲಾಯಕ ಶಾಸಕ ಎಂದು ರಮೇಶಗೆ ಮನೆಗೆ ಕಳುಹಿಸಿ ಎಂದರು.

ರಮೇಶ ಜಾರಕಿಹೊಳಿ‌ ಶಾಸಕನ‌ ಕೆಲಸನೂ ಮಾಡೋಲ್ಲ. ಮಂತ್ರಿ ಮಾಡಿದ್ದರೂ ಕೆಲಸ ಮಾಡೋಲ್ಲ. ಈ ಗಿರಾಕಿ ನನ್ನ ತಲೆ ಮೇಲೆ ಕೂತ ಎಂದರು.

ಹತ್ತು ಸಚಿವ ಸಂಪುಟ ಸಭೆಗೆ ರಮೇಶ ಜಾರಕಿಹೊಳಿ‌ ಹೋಗಿಲ್ಲ. ಒಮ್ಮೆ ಸಹಕಾರ ಸಚಿವ ಹಾಗೂ ಪೌರಾಡಳಿತ ಸಚಿವರನ್ನಾಗಿ ಮಾಡಿದ್ರು.‌ ಪಕ್ಷಾಂತರ ಮಾಡಿದ್ರು. ನಿಮಗೆ ಏನ್ ಅನ್ಯಾಯ ಮಾಡಿತ್ತು ಎಂದು ಪ್ರಶ್ನಿಸಿದರು.

ರಮೇಶ ಜಾರಕಿಹೊಳಿ‌ ಗೋಕಾಕನಲ್ಲಿ ಗೆಲ್ಲುವುದು ಕನಸಿನ ಮಾತು. ಯಡಿಯೂರಪ್ಪ ಏನೂ ರಮೇಶ ಜಾರಕಿಹೊಳಿಗೆ ಸಿಎಂ ಮಾಡ್ತಾರಾ ಎಂದರು.

ಗೋಕಾಕನಲ್ಲಿ ಪ್ರವಾಹ ಬಂದಾಗ ಜನರ ಕಷ್ಟ ಆಲಿಸಬೇಕಿದ್ದ ರಮೇಶ ಜಾರಕಿಹೊಳಿ‌ ಮುಂಬೈ, ದಿಲ್ಲಿಗೆ ಹೋಗಿ‌ದ್ರಲ್ಲ. ಇಲ್ಲಿನ‌ ಜನರ ಕಷ್ಟ ಕೇಳಬೇಕಿತ್ತಲ್ವಾ. ಎರಡೂವರೆ ತಿಂಗಳು ಮುಂಬೈನಲ್ಲಿ ಮೋಜು‌, ಮಸ್ತಿ ಮಾಡಿಕೊಂಡಿದ್ರು ಇಂಥವರು ಬೇಕಾ ನಿಮಗೆ ಎಂದರು.
ಸತೀಶ ಜಾರಕಿಹೊಳಿ‌ ದೀರ್ಘ ಕಾಲದ ಸ್ನೇಹಿತ ಪಾಪ‌ ಅವರನ್ನ ಮಂತ್ರಿ ಮಾಡದೆ ರಮೇಶ ಜಾರಕಿಹೊಳಿಗೆ ನೀಡಿದೇವು. ಸತೀಶ್ ಜಾರಕಿಹೊಳಿ‌ ಜಾಸ್ತಿ ಮಾತನಾಡೋಲ್ಲ.‌ಕೆಲಸ ಮಾಡ್ತಾರೆ.

loading...