ಮುಂದಿನ ಶಾಸಕ ಡಿ.ಬಿ.ಇನಾಮದಾರ ಆಗಬೇಕು : ಸಿ.ಎಂ.ಸಿದ್ದರಾಮಯ್ಯ

0
51
ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಸರಕಾರದ ಸಾಧನಾ ಸಂಭ್ರಮದಲ್ಲಿ ಪಾಲ್ಗೊಂಡಿರುವ ಗಣ್ಯರು .
 1. ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಸರಕಾರದ ಸಾಧನಾ ಸಂಭ್ರಮದಲ್ಲಿ ಪಾಲ್ಗೊಂಡಿರುವ ಗಣ್ಯರು .
  ಇನಾಮದಾರ ಜಂಟಲ್ ಮ್ಯಾನ್ ರಾಜಕಾರಣಿ : ಸಿ.ಎಂ.ಸಿದ್ದರಾಮಯ್ಯ

  ಮುಂದಿನ ಶಾಸಕ ಡಿ.ಬಿ.ಇನಾಮದಾರ ಆಗಬೇಕು  : ಸಿ.ಎಂ.ಸಿದ್ದರಾಮಯ್ಯ

  ಚನ್ನಮ್ಮ ಕಿತ್ತೂರು : ಶಾಸಕ ಡಿ.ಬಿ.ಇನಾಮದಾರ ಮತ್ತು ನಾನು 1983ರಲ್ಲಿ ಒಟ್ಟಿಗೆ
  ಶಾಸಕರಾಗಿ ಆಯ್ಕೆಯಾಗಿದ್ದೇವೆ ನಂತರ ಒಟ್ಟಿಗೆ ಮಂತ್ರಿಗಳಾಗಿದ್ದೇವೆ. ಈಗ ನಾನು
  ಮುಖ್ಯಮಂತ್ರಿಯಾಗಿದ್ದು, ಆದರೆ ಇನಾಮದಾರ ಸಿಎಂ ಆಗಲಿಲ್ಲ, ಕಳೆದ 40 ವರ್ಷಗಳಿಂದ
  ಇನಾಮದಾರ ಅವರನ್ನು ನೋಡುತ್ತಿದ್ದೇನೆ ಅವರೊಬ್ಬರ ಜಂಟಲ್ ಮ್ಯಾನ್ ರಾಜಕಾರಣಿ ಎಂದು
  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
  ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ, ಕಿತ್ತೂರು ಮತಕ್ಷೇತ್ರದ ರೂ.274 ಕೋಟಿ
  ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಸರಕಾರದ ಸಾಧನಾ ಸಂಭ್ರಮದಲ್ಲಿ
  ಅವರು ಮಾತನಾಡಿದರು. ಕಿತ್ತೂರು ಹುಲಿಯಾಗಿದ್ದಾರೆ. ರಾಜಕಾರಣದಲ್ಲಿ ಯಾವುದೇ ಕಿರಿಕಿರಿ
  ಇಲ್ಲ. ಪೀಡಿಸುವ ವ್ಯಕ್ತಿಯಲ್ಲ. ಮಂತ್ರಿ ಆಗಲಿಲ್ಲ ಅಂತ ಲಾಭಿ ಮಾಡಲಿಲ್ಲ, ಯಾರ
  ವಿರುದ್ದವು ಅಸಮಾದಾನ ವ್ಯಕ್ತ ಪಡಿಸಲಿಲ್ಲ.
  ರೂ.274 ಕೋಟಿ ಅಭಿವೃದ್ಧಿ ಕಾರ್ಯಗಳು ಇನಾಮದಾರ ಪ್ರಯತ್ನದ ಫಲವಾಗಿವೆ. ಈಗ ಬಿದ್ದು ಕೈ
  ಪೆಟ್ಟು ಹಚ್ಚಿಕೊಂಡಿದ್ದಾರೆ. ಆದರೆ ಇನಾಮದಾರ ರಾಜಕಾರಣದಲ್ಲಿ ಪೆಟ್ಟು ಹಚ್ಚಿಕೊಳ್ಳು
  ವ್ಯಕ್ತಿಯಲ್ಲ. ಮುಂದಿನ ಚುನಾವಣೆಯಲ್ಲಿ ಅವರಿಗೆ ಜನತೆ ಆರ್ಶಿವಾದ ಮಾಡುವ ಮೂಲಕ
  ಪಕ್ಷವನ್ನು ಗೆಲ್ಲಿಸಿ ಎಂದರು. ಮುಂದಿನ ವಿಧಾನ ಸಭಾ ಚುನಾವಣೆಯ ಕಿತ್ತೂರು ಮತ
  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.

  ರೂ. 248 ಕೋಟಿ ವೆಚ್ಚದ ಕೆರೆ ನೀರು ತುಂಬಿಸುವ ಯೋಜನೆ ಮೂಲಕ ನೀರಾವರಿ ಭಾಗ್ಯವನ್ನು
  ಕಿತ್ತೂರು ಕ್ಷೇತ್ರಕ್ಕೆ ನೀಡಿ, ಸಮೃದ್ಧಿಯನ್ನಾಗಿ ಮಾಡಿ ಕಿತ್ತೂರನ್ನು ಬರಮುಕ್ತ
  ಕ್ಷೇತ್ರ ಮಾಡಿ ನಮ್ಮ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
  ರಾಣಿ ಚನ್ನಮ್ಮ ಜಯಂತಿಯನ್ನು ನಮ್ಮ ಸರಕಾರದ ವತಿಯಿಂದ ಇದೇ ಮೊದಲ ಬಾರಿಗೆ ಅ.23 ರಂದು
  ಆಚರಿಸಲಾಯಿತು. ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಮತ್ತು ಗಲ್ಲುಗೇರಿಸಿದ ಸ್ಥಳಗಳ
  ಅಭಿವೃದ್ಧಿ ಮತ್ತು ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಈಗಾಗಲೇ ಯೋಜನೆ
  ರೂಪುಗೊಂಡಿದ್ದು ರೂ. 264 ಕೋಟಿ ಮಂಜೂರಾತಿ ನೀಡಿದ್ದು ಶೀಘ್ರವೇ ಕೆಲಸ
  ಪ್ರಾರಂಭಿಸಲಾಗುವುದು.
  ರಾಷ್ಟ್ರಿಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೋದಿ ಅವರಲ್ಲಿ ಬಿಜೆಪಿಯ
  ಕೆಲ ಮುಖಂಡರನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ನಾನು ಸೊಸೈಟಿ ಸಾಲ ಮನ್ನಾ
  ಮಾಡುತ್ತೇನೆ ನೀವು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವಂತೆ ಕೇಳಿದಾಗ
  ಪ್ರಧಾನಿ ಒಪ್ಪಲಿಲ್ಲ. ಬಿಜೆಪಿ ನಾಯಕರು ಈ ಕುರಿತು ಚಕಾರ್ ಶಬ್ದ ಎತ್ತಲಿಲ್ಲ ಎಂದು
  ವ್ಯಂಗ್ಯವಾಡಿದರು.
  ಬಿಎಸ್ ಯಡಿಯೂರಪ್ಪ ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಗೋಲಿ ಬಾರ್
  ಮಾಡಿಸಿದ್ದು ನಾಡಿನ ಜನತೆ ಮರೆತಿಲ್ಲ. ಈಗ ಹಸಿರು ಶಾಲು ಹಾಕಿ ಪರಿವರ್ತನೆ ರ್ಯಾಲಿ
  ಎಂದು ನಾಟಕ ಆಡುತ್ತಿದ್ದಾರೆ ಎಂದರು.
  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಯಡಿಯೂರಪ್ಪ ಮತ್ತು ಕಂಪನಿ ಭ್ರಷ್ಟಾಚಾರ
  ಮಾಡಿ ಜೈಲಿಗೆ ಹೋಗಿ ಬಂದಿದ್ದು ಈಗ ಪರಿವರ್ತನೆ ರ್ಯಾಲಿ ಮಾಡುತ್ತಿದ್ದಾರೆ. ಅದು
  ಪರಿವರ್ತನೆ ರ್ಯಾಲಿ ಅಲ್ಲ ಬದಲಾಗಿ ಪಶ್ಚಾತಾಪದ ರ್ಯಾಲಿ ಎಂದು ವ್ಯಂಗ್ಯವಾಡಿದರು.
  ಶಾಸಕ ಡಿ.ಬಿ. ಇನಾಮದಾರ ಮಾತನಾಡಿ, ನಮ್ಮ ಸರಕಾರದ ಯೋಜನೆಗಳನ್ನು ನನ್ನ ಕ್ಷೇತ್ರದ
  ಪ್ರತಿಯೊಂದು ಗ್ರಾಮಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟಿಸುವಲ್ಲಿ
  ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಮತಕ್ಷೇತ್ರದಲ್ಲಿ ಶೇ. 95 ರಷ್ಟು ಸಿಸಿ
  ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ
  ಮಾಡಲಾಗಿದೆ. ಈಗ ಬೃಹತ್ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು ಕಿತ್ತೂರು ಬರಮುಕ್ತ
  ಕ್ಷೇತ್ರ ಆಗುತ್ತದೆ. ಕ್ಷೇತ್ರಕ್ಕೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ
  ಅನುದಾನಸ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
  ಮಾಜಿ ಎಂಎಲ್‍ಸಿ ಮಹಾಂತೇಶ ಕೌಜಲಗಿ, ಡಿಸಿ ಜಿಯಾವುಲ್ಲಾ ಎಸ್‍ಎಸ್‍ಪಿ ರವಿಕಾಂತೇಗೌಡ,
  ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಪಂ ಸದಸ್ಯೆ ರಾಧಾ ಕಾದ್ರೊಳ್ಳಿ, ಪಪಂ  ಅಧ್ಯಕ್ಷರಾದ
  ಹನೀಫ್ ಸುತಗಟ್ಟಿ, ಸಿದ್ಧಪ್ಪ ಗೋರಕೊಳ್ಳಿ, ವಿಕ್ರಮ್ ಇನಾಮದಾರ, ಬಸನಗೌಡ ಇನಾಮದಾರ
  ಇತರರು ವೇದಿಕೆ ಮೇಲಿದ್ದರು.  ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು.
  ಈ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಸ್ತೂಮ ಕಂಡುಬಂದಿತು.

  ಹೆಗಡೆ ನಾಲಾಯಕ್ ವ್ಯಕ್ತಿ
  ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗ್ರಾಮ ಪಂಚಾಯತಿ ಸದಸ್ಯನಾಗಲು ಅರ್ಹನಿಲ್ಲದ
  ನಾಲಾಯಕ, ಗುಂಡಾ ಪ್ರವರ್ತಿಯ ವ್ಯಕ್ತಿಯಾಗಿದ್ದು,  ಜಾತಿಗಳ ಮದ್ಯ ಕೋಮವಾದ ಬಿತ್ತಿ
  ಬೆಂಕಿ ಹಂಚುವ ವ್ಯಕ್ತಿ ಮತ್ತು ಬೆಂಕಿ ಹಚ್ಚುವ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು
  ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.

loading...