ಮುಂದೆ ನಾನೇ ಸಿಎಂ;ಸಿದ್ದರಾಮಯ್ಯ

0
27

ಬೆಂಗಳೂರು:ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಏನೂ ಆಗಲ್ಲ. ಸಮ್ಮಿಶ್ರ ಸರ್ಕಾರ ಬಹಳ ಭದ್ರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಎರಡೂ ಪಕ್ಷಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ.ಹೀಗಾಗಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಯಾರೂ ಅಭಿಪ್ರಾಯ ಪಡಬಾರದು ಎಂದು ಕಿವಿಮಾತು ಹೇಳಿದರು.
ನಾನು ಮುಂದಿನ ಚುನಾವಣೆಗೆ ನಿಲ್ಲುತ್ತೇನೆ ಎಂದು ಎಲ್ಲೂ ಹೇಳಿಲ್ಲ.ಜನ ಆಶೀರ್ವಾದ ಮಾಡಿದರೆ ಮುಂದೆ ಮುಖ್ಯಮಂತ್ರಿಯಾ ಗುತ್ತೇನೆ ಎಂದಷ್ಟೇ ಹೇಳಿದ್ದೇನೆ.ಈ ಹೇಳಿಕೆಗೆ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಕೆ.ಸಿ.ವೇಣುಗೋಪಾಲ್‍ಗೆಜೆಡಿಎಸ್ ಮುಖಂಡರು ಯಾವುದೇ ಪತ್ರ ಬರೆದಿಲ್ಲ.ವಿನಾಕಾರಣ ಬಿಜೆಪಿಯವರು ಸುಳ್ಳಿನ ಕಂತೆಗಳನ್ನು ಪೊಣಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಾನು ಸಿಎಂ ಆಗಿದ್ದಾಗ ಕೈಗೊಂಡ ಎಲ್ಲ ಯೋಜನೆಗಳಿಗೂ ಸಮ್ಮಿಶ್ರ ಸರ್ಕಾರದಲ್ಲಿ ಹಣ ಬಿಡುಗಡೆಯಾಗುತ್ತದೆ.ಎಲ್ಲ ಯೋಜನೆ ಗಳೂ ಯಶಸ್ವಿಯಾಗುತ್ತವೆ. ಈ ಕುರಿತಂತೆ ಸಮನ್ವಯ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಸಮನ್ವಯತೆ ಇದ್ದು,ಎಲ್ಲ ಸಚಿವರೂ ಉತ್ತಮವಾಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಒಡಕಿಲ್ಲ. ಆದರೆ, ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿ ಸರ್ಕಾರ ಬೀಳಿಸುತ್ತಾರೆ ಎಂಬು ದರಲ್ಲಿ ಯಾವುದೇ ಅರ್ಥವಿಲ್ಲ.ಸಮ್ಮಿಶ್ರ ಸರ್ಕಾರ ಏನೇ ಮಾಡಿದ್ರೂ ಎರಡೂ ಪಕ್ಷಕ್ಕೆ ಗೌರವ ಸಲ್ಲುತ್ತೆ.ನಮ್ಮವರೇ ಮಂತ್ರಿಯಾಗಿ ದ್ದಾರೆ.ಹೀಗಾಗಿ ನಮ್ಮನ್ನು ಕಡೆಗಣಿಸುತ್ತಾರೆ ಎನ್ನುವುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು.

loading...