ಮುಗಳಖೋಡದಲ್ಲಿ ಎರಡು ಅಂಗಡಿಗಳ ಕಳ್ಳತನ

0
19

ಕನ್ನಡಮ್ಮ ಸುದ್ದಿ
ಮುಗಳಖೋಡ 27: ಪಟ್ಟಣದಲ್ಲಿ ಕಳ್ಳರ ಹಾವಳಿ ಮಲ್ಲಿಕಾರ್ಜುನ ಫರ್ಟಿಲೈಜರ್ಸ್ ಮಳಿಗೆಯ ಪತ್ರಾಸ್ ಕೊರೆದು ಮಳಿಗೆಯಲ್ಲಿರುವ ಸಿ.ಸಿ. ಕ್ಯಾಮರಾ ಮತ್ತು ರಿಸಿವರ್ ಮತ್ತು ಗಲ್ಲೆಯಲ್ಲಿರುವ ನಾಣ್ಯಗಳು ಮತ್ತು ಮಹತ್ವದ ದಾಖಲೆಗಳನ್ನು ಕದ್ದಿದ್ದಾರೆ ಎಂದು ಸಂಜು ಯಡವಣ್ಣವರ ತಿಳಿಸಿದ್ದಾರೆ. ಇದರಂತೆ ಪಾನ್ ಶಾಪ್ ಅಂಗಡಿಯಲ್ಲಿರುವ ಇನ್ವರ್ಟರ್ ಮತ್ತು ಹಣ ಕದ್ದಿರುವರೆಂದು ಬಸು ಕಿಚಡಿ ತಿಳಿಸಿದ್ದಾರೆ. ಕಳ್ಳರ ಹಾವಳಿಯು ಪಟ್ಟಣದಲ್ಲಿ ಪದೇ ಪದೇ ನಡೆಯಿತಿದ್ದು ಪಟ್ಟಣವಾಸಿಗಳು, ವ್ಯಾಪಾರಸ್ಥರು ಭಯಭೀತಗೊಂಡಿದ್ದು, ಈ ಬಗ್ಗೆ ಪೊಲೀಸ ಇಲಾಖೆ ಅಧಿಕಾರಿಗಳು ಜಾಗೃತಗೊಳ್ಳಬೇಕಿದೆ.
..

loading...