ಮುನಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿದವರು

0
16

ಕನ್ನಡಮ್ಮ ಸುದ್ದಿ-ಧಾರವಾಡ: ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರಹಾಕಿದಾಗ ಮಾತ್ರ ಆತ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಧಕನಾಗಬೇಕು ಎಂದು ಸಿದ್ದಸೇನ ಮುನಿ ಮಹಾರಾಜರು ಹೇಳಿದರು.
ಚರಂತಿಮಠ ಗಾರ್ಡನದಲ್ಲಿನ ಬನಶಂಕರಿ ಭವನದಲ್ಲಿಂದು ಪಾವನ ಮಂಗಲ ವರ್ಷಾಯೋಗ ಚಾತುರ್ಮಾಸದ ಮಂಗಳ ಕಳಸ ಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ ಇದನ್ನು ಹೋಗಲಾಡಿಸಲು ಇಂಥಹ ಕಾರ್ಯಕ್ರಮ ಅವಶ್ಯಕ. ಮನಷ್ಯ ಚಿಂತೆ ಮಾಡಿ ಚಿತೆಗೆ ಹೋಗುವ ಬದಲಾಗಿ ಉತ್ತಮ ಚಿಂತನೆ ಮಾಡಿ ಚಿನ್ನದಂತಾಗಬೇಕು. ಮನುಷ್ಯ ಈ ಭೂಮಿ ಮೇಲೆ ಹುಟ್ಟಿದಾಗಿಂದ ಆಧ್ಯಾತ್ಮಿಕತೆ ಹಾಗೂ ಗುರುಗಳ ಮಾರ್ಗದರ್ಶನ ಹೆಚ್ಚಾಗಿದ್ದರೂ ಕೂಡ ಯುವನರಲ್ಲಿ ಆಧ್ಯಾತ್ಮ ಕೊರತೆಯಿದೆ. ಯಾರು ಇಂದ್ರಿಯ ನಿಗ್ರಹವನ್ನು ಮಾಡುವವರೋ ಅವರು ಆಧ್ಯಾತ್ಮಿಕ ಸಾಧಕರಾಗುತ್ತಾರೆ ಹೀಗಾಗಿ ಪ್ರತಿಯೊಬ್ಬರು ಆಧ್ಯಾತ್ಮಿಕತೆಯನ್ನು ತಿಳಿದುಕೊಂಡು ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.
ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಮಳೆಗಾಲದ ಈ ಸಮಯದಲ್ಲಿ ಮುನಿಗಳು ಸಂಚಾರ ಮಾಡದೇ ಒಂದೆಡೆ ಕುಳಿತು ಜನರಲ್ಲಿ ಆಧ್ಯಾತ್ಮಿಕ ಚಿಂತನೆ ನೀಡುವರು. ಶ್ರೀಗಳ ಮಾರ್ಗದರ್ಶನದಂತೆ ನಾವೆಲ್ಲರೂ ಸಾಗಿದಾಗ ನಮ್ಮಲ್ಲಿ ದೈವಿ ಗುಣಗಳು ಬರುತ್ತವೆ. ಅಶಾಂತತೆ, ಹಿಂಸೆ, ಪರಸ್ಪರ ಅಪನಂಬಿಕೆ ಇರುವ ಈ ಕಾಲದಲ್ಲಿ ಮುನಿಗಳಂತವರು ಜನರಲ್ಲಿ ಅತ್ಯುತ್ತಮ ಮನೋಭಾವನೆ ಬಿತ್ತುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶ್ರಮಿಸುವರು. ಶರಣರು, ಸಂತರು, ದಾರ್ಶನಿಕರು, ಮಹಾತ್ಮರು ಉದ್ದಿನಕಡ್ಡಿಯ ಹಾಗೆ ತಮ್ಮನ್ನು ತಾವು ಸೈರಿಸಿಕೊಂಡು ಸಮಾಜಕ್ಕೆ ಜನಕ್ಕೆ ಒಳ್ಳೆಯದನ್ನು ಮಾಡಿ ಸುಗಂಧ ಹಾಗೆ ತಮ್ಮ ಜೀವನ ಸವೆಸುವರು ಎಂದರು. ಶಾಸಕ ಅಮೃತ ದೇಸಾಯಿ, ಪಾಲಿಕೆ ಸದಸ್ಯ ಶಂಕರ ಶೇಳಕೆ, ದತ್ತಾ ಡೋರ್ಲೇ, ಸಮಿತಿ ಅಧ್ಯಕ್ಷ ಡಾ.ಎ.ಬಿ.ಖೋತ, ರಾಜಣ್ಣ ತುಪ್ಪದ, ತವನಪ್ಪ ಅಷ್ಟಗಿ, ವಿರೇಶ ಅಂಚಟಗೇರಿ, ಪ್ರಮೋದ ಪಾಟೀಲ, ಎಲ್ಲಪ್ಪ ತಡಸದ, ಅತುಲ ಜೈನ, ವಿಕಾಸ ಜೈನ, ಪವನ ಜೈನ, ಧನ್ಯಕುಮಾರ ಜೈನ, ರಾಜೇಂದ್ರ ಕುಲಕರ್ಣಿ, ಶಿವಾನಂದ ಲೋಲೆನವರ, ದೇವರಾಜ ಕಲಗೌಡರ, ಸಚೀನ ಚೀವಟೆ, ಸುನೀಲ ಟಕಳೆÉ ಉಪಸ್ಥಿತರಿದ್ದರು.

loading...