ಮುಳುಗಡೆ ಪ್ರದೇಶದ ಬಾಕಿ ಹಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ-ಸವದಿ

0
28

ಅಥಣಿ 2: ಕೃಷ್ಣಾ ನದಿ ನೀರಿನಿಂದ ಬಾಧೆಗೊಳಗಾದ ಅಥಣಿ ತಾಲೂಕಿನ ಮುಳುಗಡೆ ಪ್ರದೇಶದ ನಾಗರೀಕರಿಗೆ ಬಾಕಿ ಉಳಿದಿರುವ ಪರಿಹಾರ ಕೊಡಿಸಲು 270 ಕೋಟಿ ರೂ ಹಿಂದಿನ ಸರ್ಕಾರದಲ್ಲಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಮಂಜೂರಾತಿ ಬಂದ ನಂತರ ತೋಟದಲ್ಲಿ ವಾಸವಾಗಿರುವವರಿಗೂ ಪರಿಹಾರ ಕೊಡಿಸುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೂತನವಾಗಿ ಕಟ್ಟಿಸಿದ ಸರ್ಕಾರಿ ಪ್ರೌಢ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಭಾವನೆ ಅರ್ಥವಾಗಿದ್ದು, ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಮಾಡಲಾಗುವುದು, ತೀರ್ಥ, ಸಪ್ತಸಾಗರ, ಖೇಮಲಾಪೂರ ಸೇರುವ ಮುಖ್ಯ ರಸ್ತೆಯನ್ನು 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವದೆಂದು ಭರವಸೆ ನೀಡಿದ ಅವರು, ಪಿ.ಯು. ಕಾಲೇಜು ಮಂಜೂರಾತಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವದೆಂದರು.

ಮುಖ್ಯ ಅತಿಥಿಗಳಾಗಿ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ನೀರಾವರಿ ಬೇಕು, ಕಾಲುವೆ ತಮ್ಮ ಹೊಲದಲ್ಲಿ ಮಾಡಬಾರದು, ವಿದ್ಯುತ್ ಸಂಪರ್ಕಬೇಕು, ಕಂಬವನ್ನು ತಮ್ಮ ಹೊಲದಲ್ಲಿ ಹಾಕಬಾರದು, ರಸ್ತೆ ಬೇಕು, ತಮ್ಮಲಿ ಚರಂಡಿ ಆಗಬಾರದು ಎಂಬ ಮನೋಭಾವವನ್ನು ಬಿಟ್ಟು ಅಭಿವೃದ್ದಿ ಕೆಲಸಗಳು ಆಗುವಾಗ ಸಾರ್ವಜನಿಕರು ತ್ಯಾಗದ ಮನೋಭಾವನ್ನು ತಾಳಿದಾಗ ಮಾತ್ರ ಅಭಿವೃದ್ದಿ ಕಾಮಗಾರಿಗಳು ಯಶಸ್ವಿಯಾಗಲು ಸಾಧ್ಯ ಎಂದ ಅವರು, ತಾಲೂಕಿನ ಅಭಿವೃದ್ದಿಗೆ ಲಕ್ಷ್ಮಣ ಸವದಿ ಹಾಗೂ ತಾವು ಶ್ರಮಿಸುವದಾಗಿ ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮಾಂಗ ವಹಿಸಿದ್ದರು, ಅತಿಥಿಗಳಾಗಿ ಜಿ.ಪಂ ಸದಸ್ಯ ಅಣ್ಣಾಸಾಬ ನಾಯಿಕ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಜುಟ್ಟನವರ, ಮುಖಂಡರಾದ ಸುರೇಶ ಮಾಯಣ್ಣವರ, ಗುರುಬಸು ತೇವರಮನಿ, ಗಜಾನನ ಯರಂಡೋಲಿ, ಬಿ.ಆರ್. ದುರದುಂಡಿ, ರಾಜು ನಾಡಗೌಡರ, ಬಾಹುಬಲಿ ಸಂಕ್ರಟ್ಟಿ, ಅಣ್ಣಪ್ಪಾ ಡೆಂಗಿನಹಾಳ, ಸುಭಾಷ ನಾಡಗೌಡರ, ಅಶೋಕ ಐಗಳಿ, ಜಿನ್ನಪ್ಪಾ ತೀರ್ಥ, ಆರ್.ಕೆ. ಪಾಟೀಲ, ಭೂಪಾಲ ಪಾಟೀಲ, ಡಿ.ಬಿ.ನದಾಫ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗ್ರಾಮದ ಹಲವಾರು ಸಮಸ್ಯೆಗಳನ್ನು ಶಾಸಕರಿಗೆ ರಾಜು ನಾಡಗೌಡರ ಮನವಿ ಸಲ್ಲಿಸಿದರು.

 

loading...

LEAVE A REPLY

Please enter your comment!
Please enter your name here