ಮೂಡಲಗಿಪುರಸಭೆ ಚುನಾವಣೆಯಲ್ಲಿ ಶೇ.೭೪.೮೬ ರಷ್ಟು ಮತದಾನ

0
19

ಮೂಡಲಗಿಪುರಸಭೆ ಚುನಾವಣೆಯಲ್ಲಿ ಶೇ.೭೪.೮೬ ರಷ್ಟು ಮತದಾನ
ಕನ್ನಡಮ್ಮ ಸುದ್ದಿ- ಮೂಡಲಗಿ :ಪಟ್ಟಣದಲ್ಲಿ ಶುಕ್ರವಾರ ನಡೆದ ೨೩ ವಾರ್ಡ್ಗಳ ಪುರಸಭೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ಪಟ್ಟಣದಲ್ಲಿ ಒಟ್ಟು ೨೫,೩೮೪ ಮತದಾರರಲ್ಲಿ ೧೯,೦೦೩ ಮತದಾರರು ಮತ ಚಲಾಯಿಸಿದ್ದು, ಶೇ ೭೪.೮೬ರಷ್ಟು ಮತದಾನವಾಗಿದೆ. ಮುಂಜಾನೆ ೭ ಕ್ಕೆ ಪ್ರಾರಂಭವಾದ ಮತದಾನ ಆರಂಭದಲ್ಲಿ ಮಂದಗತಿಯಲ್ಲಿತ್ತು. ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆಯಿತು. ಮತದಾರು ಸರತಿಸಾಲಿನಲ್ಲಿ ನಿಂತು ಮತದಾನದ ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತ ಚಲಾಯಿಸಲೂ ಬಂದ ಯುವ ಮತದಾರರು ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತಚಲಾಯಿಸಿದರು. ವಯೋವೃದ್ದರು, ಅಂಗವಿಕಲರು ಸಹ ಕುಟುಂಬದವರ ನೆರವಿನಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು. ಈ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಯಲ್ಲ. ಸಿಪಿಐ ವೆಂಕಟೇಶ ಮುರನಾಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಒದಗಿಸಿದ್ದರು.

loading...