ಮೂರನೇ ದಿನ ಪೂರ್ಣಗೊಳಿಸಿದ ಕಬ್ಬು ಬೆಳೆಗಾರರ ಪ್ರತಿಭಟನೆ

0
15

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ಸಕ್ಕರೆ ಕಾರ್ಖಾನೆ ಎದುರು ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಬುಧವಾರ ಮೂರನೇ ದಿನ ಪೂರ್ಣಗೊಳಿಸಿದೆ.
೨೦೧೬-೧೭ ನೇ ಸಾಲಿಗೆ ಅನ್ವಯವಾಗುವಂತೆ ಪ್ಯಾರಿ ಸಕ್ಕರೆ ಕಾರ್ಖಾನೆಗೆ ನೀಡಿದ ಕಬ್ಬಿಗೆ ಪ್ರತಿಯಾಗಿ ಕಾರ್ಖಾನೆಯವರು ನೀಡಬೇಕಾದ ಮೊತ್ತ ಪ್ರತಿ ಟನ್‌ಗೆ ೩೦೫ ರೂ. ಗಳಂತೆ ಕೂಡಲೇ ನೀಡಬೇಕೆಂದು ಆಗ್ರಹಿಸಿ ಕಾರ್ಖಾನೆ ಮುಖ್ಯ ಗೇಟಿನ ಎದುರು ರೈತರ ನಿರಂತರ ಧರಣಿ ನಡೆಯುತ್ತಿದೆ. ಬುಧವಾರ ದಿವಸ ಸ್ಥಳೀಯ ಆದಿಶಕ್ತಿ ಮಹಾಪೀಠದ ಶ್ರಿÃ ಕೃಷ್ಣಾನಂದ ಸ್ವಾಮೀಜಿಯವರು ಧರಣಿ ಸ್ಥಳಕ್ಕೆ ತೆರಳಿ ತಾವೂ ಸಹ ಪಾಲ್ಗೊಂಡು ಹೋರಾಟಗಾರ ರೈತರಿಗೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ಶ್ರಿÃ ಕೃಷ್ಣಾನಂದರು ಮಾತನಾಡುತ್ತಾ ರೈತರು ಹೆಚ್ಚು ಲಾಭವಿಲ್ಲದಿದ್ದರೂ ಸಹ ಕೃಷಿ ಕಾರ್ಯದಲ್ಲಿ ತೊಡಗಿದ್ದು ಅವರಿಗೆ ಕೊಡಬೇಕಾದ ಮೊತ್ತ ನೀಡದೇ ಇರುವುದು ಸರಿಯಲ್ಲ. ಸಕ್ಕರೆ ಕಾರ್ಖಾನೆಯವರು ತಹಶೀಲ್ದಾರ ಹಾಗೂ ಜಿಲ್ಲಾಧಿಕಾರಿಗಳ ಎದುರು ಮಾತು ನೀಡಿ ಈಗ ತಮ್ಮ ಮಾತನ್ನು ಉಳಿಸಿಕೊಳ್ಳದಿರುವುದು ಸರಿಯಲ್ಲ. ಬಿಸಿಲು ಮಳೆಯನ್ನು ಲೆಕ್ಕಿಸದೇ ತನ್ನ ದೇಹದಂಡನೆ ಮಾಡುತ್ತಾ ಜಗತ್ತಿನ ಅವಶ್ಯಕತೆಯಾದ ಆಹಾರವನ್ನು ಉತ್ಪಾದನೆ ಮಾಡುವ ರೈತರಿಗೆ ವಂಚಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೊÃಶ ವ್ಯಕ್ತಪಡಿಸಿದರು.
ತೇರಗಾಂವ ಗ್ರಾಮದ ರೈತರು ಬುಧವಾರದ ಧರಣಿಯಲ್ಲಿ ಭಾಗವಹಿಸಿದ್ದರು. ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ತಾಲೂಕ ಪಂಚಾಯತ ಮಾಜಿ ಸದಸ್ಯ ಅನ್ವರ ಪುಂಗಿ, ರಾವುತ್, ಶಿದಬಾನವರ, ಸಂಘದ ಪ್ರಮುಖರಾದ ಗಣಪತಿ ಕರಂಜೇಕರ, ಗೋಪಾಲ ಪಟ್ಟೆÃಕರ, ರೈತರ ಸೇವಾ ಸೊಸೈಟಿ ಉಪಾಧ್ಯಕ್ಷ ಸುಭಾಸ ನಾನಾಶಿಂಧೆ ಮೊದಲಾದವರು ಪಾಲ್ಗೊಂಡಿದ್ದರು.

loading...