ಮೂರು ವರ್ಷದ ಸೇವಾವಧಿಯನ್ನು ನನ್ನ ಸಿಬ್ಬಂದಿ, ಬೆಳಗಾವಿ ಜನತೆಗೆ ಅರ್ಪಿಸುವೆ: ಎಐಜಿಪಿ ಲಾಟ್ಕರ್

0
41

ಬೆಳಗಾವಿ

ಬೆಳಗಾವಿ ನಗರದಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ ಅವಧಿ ಅವಿಸ್ಮರಣಿಯ. ಅಲ್ಲದೇ ಕಳೆದ ಮೂರುವರ್ಷದ ಸೇವಾವಧಿಯನ್ನು ನನ್ನ ಸಿಬ್ಬಂದಿಗೆ ಹಾಗೂ ಬೆಳಗಾವಿ ಜನತೆಗೆ ಸಮರ್ಪಿಸುತ್ತೇನೆ ಎಂದು ನಿರ್ಗಮಿತ ಡಿಸಿಪಿ, ಬೆಂಗಳೂರು ಅಪರಾಧ ವಿಭಾಗದ ಎಐಜಿಪಿ ಸೀಮಾ ಲಾಟ್ಕರ್ ಹೇಳಿದರು.
ನಗರದ ಜಿರಿಗೆ ಸಭಾಭವನದಲ್ಲಿ ಮಂಗಳವಾರ ಬಿಳ್ಕೋಡುಗೆ ಸಮಾರಂಭದಲ್ಲಿ ಸತ್ಮಾರ ಸ್ವೀಕರಿ ಮಾತನಾಡಿದರು. ನಗರ ಪೊಲೀಸ್ ಘಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ೨೦೧೭ ಜುಲೈ ೩ ರಿಂದ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಅಲ್ಲದೆ ಬೆಳಗಾವಿಯಲ್ಲಿನ ಸೇವೆ ಅತ್ಯಂತ ಸವಾಲಿನ ಜತೆಗೆ ಉತ್ತಮ ಕಲಿಕೆಯ ಅನುಭವವಾಗಿದೆ. ಬೆಳಗಾವಿ ಸ್ವಾತಂತ್ರ್ಯ ಚಳವಳಿಯ ಇತಿಹಾಸ, ಶಾಂತಿಯುತ ಸಹಬಾಳ್ವೆ, ಆರ್ಥಿಕ ಚಟುವಟಿಕೆಯ ಕೇಂದ್ರವನ್ನು ಹೊಂದಿದೆ. ಈ ಮಹಾನಗರದ ವೈಭವವನ್ನು ತಳಮಟ್ಟ ಮತ್ತು ಸ್ಪಂದಿಸುವ ಪೋಲಿಸಿಂಗ್‌ನೊಂದಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಬ ಸಂತೃಪ್ತಿ ಹೊಂದಿದ್ದೆನೆ ಎಂದರು.
ಕೋವಿಡ್-೧೯ ಸಾಂಕ್ರಾಮಿಕವು ಜನರಿಗೆ ಅತ್ಯಂತ ಕಠಿಣ ಸವಾಲುಗಳನ್ನು ಸಾಮಾನ್ಯ ಜನರಿಗಷ್ಟೇ ಅಲ್ಲದೇ ವಿಶೇಷವಾಗಿ ಪೊಲೀಸರಿಗೆ ತಂದೊಡ್ಡಿತ್ತು. ಈ ಕಠಿಣ ಸಮಯದಲ್ಲಿ ನಮ್ಮ ಪೊಲೀಸರ ತಂಡದ ಕೆಲಸದ ಸಮರ್ಪಣೆಯಿಂದಾಗಿ ನಾವೆಲ್ಲರೂ ಅದನ್ನು ಸೂಕ್ತ ರೀತಿಯಲ್ಲಿ ಎದುರಿಸಿದ್ದೇವೆ. ನನ್ನ ಹಿರಿಯ ಹಾಗೂ ಕಿರಿಯ ಸಹೋದ್ಯೋಗಿಗಳ ಕೊಡುಗೆಯನ್ನು ಒಪ್ಪಿಕೊಳ್ಳುವುದು ನನಗೆ ಬಹಳ ಮುಖ್ಯವಾಗಿದೆ, ಬೆಳಗಾವಿ ನಗರವನ್ನು ಮತ್ತೆ ಶಾಂತಿಯುತ ದಾರಿಗೆ ತರುವಲ್ಲಿ ತೀವ್ರ ಪ್ರತಿಕೂಲತೆಗಳ ವಿರುದ್ಧ ಹಗಲು-ರಾತ್ರಿ ಎನ್ನದೇ ಶ್ರಮಿಸುವಲ್ಲಿ ನನ್ನ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ನೀಡಿರುವ ಸಹಕಾರ ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸನ ಎಲ್ಲ ಕಿರಿಯ ಸಹೋದ್ಯೋಗಿ ಹಾಗೂ ಸಿಬ್ಬಂದಿಗೆ ಬೆಳಗಾವಿಯಲ್ಲಿನ ಸುದೀರ್ಘ ಸೇವಾವಧಿಯನ್ನು ಸಮರ್ಪಿಸುತ್ತೇನೆ ಎಂದರು.
ಬೆಳಗಾವಿ ನಗರದ ಜನತೆ ಅತ್ಯಂತ ಹೃದಯ ವೈಶಾಲ್ಯತೆ ಜತೆಗೆ ನಮ್ಮ ಕೆಲಸವನ್ನು ಗುರಿತಿಸುವುದರ ಜತೆಗೆ ಗೌರವಿಸುವ ಮನೋಭಾವನೆ ಹೊಂದಿದ್ದಾರೆ. ಇಲ್ಲಿನ ಜನ ನನ್ನನ್ನು ಓರ್ವ ಪೊಲೀಸ್ ಅಧಿಕಾರಿಯನ್ನಾಗಿ ನೋಡದೇ ಸಹೋದರಿ, ಮನೆ ಮಗಳಂತೆ ಕಾಣುವುದರ ಜತೆಗೆ ಅತ್ಯಂತ ಸಹಕಾರ ನೀಡಿದ್ದಾರೆ ಎಂದು ಭಾವುಕರಾದರು.
ನೂತನ ಡಿಸಿಪಿ ಡಾ.ವಿಕ್ರಮ್ ಅಮಟೆ ಅವರನ್ನು ಇದೇ ವೇಳೆ ಆತ್ಮೀಯವಾಗಿ ಸ್ವಾಗತಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಚಂದ್ರಶೇಖರ ನೀಲಗಾರ, ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ, ಪೊಲೀಸ್ ಇನ್ಸಸ್ಪೆಕ್ಟರ್ ಶ್ರೀದೇವಿ ಪಾಟೀಲ, ಎಸಿಪಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

loading...