ಮೂವರು ಮಾವೊವಾದಿಗಳ ಹತ್ಯೆ; ಓರ್ವ ಸಿಆರ್ ಪಿ ಎಫ್ ಯೋಧ ಹುತಾತ್ಮ

0
3

ಗಿರಿಧ್- ಜಾರ್ಖಂಡ್ ನ ಗಿರಿಧ್ ಜಿಲ್ಲೆಯ ಭೇಲ್ ವಾಘಾಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್ ಪಿ ಎಫ್ ಪಡೆಗಳು ಹಾಗೂ ಮಾವೊವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸಿಪಿಐಗೆ ಸೇರಿದ ಮೂವರು ಮಾವೋವಾದಿಗಳನ್ನು ಹತ್ಯೆಮಾಡಲಾಗಿದೆ. ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ದೇರೊಯ್ ಪ್ರದೇಶದ ಧಾರ್ ಪಾರಿ ಅರಣ್ಯ ಪ್ರದೇಶದಲ್ಲಿ ಸಿಆರ್ ಪಿ ಎಫ್ ನ ಎಳನೇ ಬ್ಯಾಟಲಿಯನ್ ಯೋಧರು ಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದಾಗ, ಮಾವೊವಾದಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಕಾರ್ಯಾಚರಣೆಯ ವೇಳೆ, ಸಿಆರ್ ಪಿಎಫ್ ಯೋಧರೊಬ್ಬರು ಮೃತಪಟ್ಟಿದ್ದಾರೆ. ಜಾರ್ಖಂಡ್ ಹಾಗೂ ಬಿಹಾರ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಸಮೀಪಿಸುತ್ತಿದ್ದಂತೆಯೇ ಮಾವೊವಾದಿಗಳು ಸ್ದಳದಿಂದ ಪರಾರಿಯಾಗಿದ್ದಾರೆ.
ಶೋಧನಾ ಕಾರ್ಯಾಚರಣೆಯ ವೇಳೆ ಮೂವರು ಮಾವೋವಾದಿಗಳ ಮೃತ ದೇಹವನ್ನು ಪತ್ತೆ ಹಚ್ಚಲಾಗಿದ್ದು, ಸ್ಥಳದಲ್ಲಿ ಎ.ಕೆ. 47 ಬಂದೂಕು, ಮೂರು ಮ್ಯಾಗಜೀನ್ ಗಳು ಹಾಗೂ ಪೈಪ್ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

loading...