ಮೃತಪಟ್ಟ ಕೊರೋನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ಪಾಲಿಕೆ ಅಧಿಕಾರಿ

0
149

ಬೆಳಗಾವಿ

ಕೊರೊನಾ ಪಾಸಿಟಿವ್ ಮೃತದೇಹದ ಅಂತ್ಯಕ್ರಿಯೆ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಕಣ್ಣೀರು ಹಾಕಿದರು.

ಬೆಳಗಾವಿ ಸದಾಶಿವ ನಗರದ ಸ್ಮಶಾನ ದಲ್ಲಿ ಗುರುವಾರ ನಡೆದ ಘಟನೆ ನಡೆದಿದೆ.

ಎರಡು ಮೃತ ದೇಹಗಳಿಗೆ ಅಗ್ನಿ ಸ್ಪರ್ಶ ನೀಡಿದ ಪಾಲಿಕೆ ಸಿಬ್ಬಂದಿ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಬಸವರಾಜ ದಬಾಡೆ ಕಣ್ಣೀರು ಹಾಕಿದರು.

ಯಾವ ಜನ್ಮದ ಋಣವೂ ನಂಟಿಲ್ಲದ ಮೃತರ ಅಂತ್ಯಕ್ರಿಯೆ ನೆನಪಿಸಿಕೊಂಡು ಕಣ್ಣೀರು.

ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ದೇಹಗಳ ಅಂತ್ಯಕ್ರಿಯೆ ಮಾಡುವ ವೇಳೆ ಮಾನವೀಯತೆ ಮೆರೆದ ಅಧಿಕಾರಿ.

ಮೃತರು ಕುಟುಂಬಸ್ಥರು ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಂತ್ಯಕ್ರಿಯೆ ಮಾಡುವಂತೆ ಮನವಿ ಮಾಡಿಕೊಳ್ಳುವ ಕ್ಷಣಗಳನ್ನ ಸ್ಮರೀಸಿಕೊಂಡು ಕಣ್ಣೀರು.

ಕೊರೊನಾದಿಂದ ಸಾವನ್ನಪ್ಪಿದವರ ಚಿತೆಗೆ ಅಗ್ನಿಸ್ಪರ್ಶ ನೀಡುವ ಮುನ್ನ ನಮಸ್ಕಾರ ಮಾಡಿ ಚಿತೆಗೆ ಅಗ್ನಿ ಸ್ಪರ್ಶ ನೀಡುವ ಮುನ್ನ ಮೂರು ಬಾರಿ ನೆಲಕ್ಕೆ ಮುಟ್ಟಿ ನಮಸ್ಕಾರ ಮಾಡಿದರು.

ಅನಿವಾರ್ಯ ಕಾರಣದಿಂದ ಕುಟುಂಬಸ್ಥರು ಮಾಡಲಾಗದ ಕಾರ್ಯವನ್ನ ಪಾಲಿಕೆ ಸಿಬ್ಬಂದಿಗಳು ನೆರವೇರಿಸುತ್ತಿರುವುದು ಶ್ಲಾಘನೀಯ.

loading...