ಮೃತ ಅಜಿತ ನಾಯಕ ಮನೆಗೆ ಸಚಿವ ದೇಶಪಾಂಡೆ ಬೇಟಿ

0
19

ಕನ್ನಡಮ್ಮ ಸುದ್ದಿ-ದಾಂಡೇಲಿ: ದುಷ್ಕರ್ಮಿಯಿಂದ ಬರ್ಬರ ಕೊಲೆಗೀಡಾದ ನಗರದ ಹಿರಿಯ ನ್ಯಾಯವಾದಿ, ಹೋರಟಗಾರ ಅಜಿತ ನಾಯಕರವರ ಮನೆಗೆ ಭಾನುವಾರ ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೃತ ಅಜೀತ ನಾಯಕರವರ ಮಕ್ಕಳಿಗೆ ಹಾಗೂ ಕುಟುಂಬವರ್ಗಕ್ಕೆ ದೈರ್ಯ ಹಾಗೂ ಸಾಂತ್ವನ ಹೇಳಿದ ಸಚಿವ ದೇಶಪಾಂಡೆಯವರು ನನಗೆ ನಾನೇ ನಂಬಲಾರದ ದುರ್ಘಟನೆ ಇದಾಗಿದೆ. ಊಹಿಸಿಕೊಳ್ಳಲು ಅಸಾಧ್ಯವಾದ ಕಹಿ ಘಟನೆಯಿದಾಗಿದೆ. ಶಾಂತಿಯ ನಗರದಲ್ಲಿ ಇಂಥಹ ಕುಕೃತ್ಯ ನಡೆದಿರುವುದು ಖಂಡನೀಯ. ಹತ್ಯೆಗೈದ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಘಟನೆ ನಡೆದ ದಿನವೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಸೂಚಿಸಿದ್ದೇನೆ. ಆರೋಪಿಯನ್ನು ಬಂಧಿಸಿ ಮೃತ ಅಜಿತ ನಾಯಕರವರ ಕೊಲೆಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದರು. ಇದೇ ಸಂದರ್ಭದಲ್ಲಿ ಅಜಿತ ನಾಯಕರವರ ಜೊತೆಗಿನ ಒಡನಾಟವನ್ನು ಹಂಚಿಕೊಂಡ ದೇಶಪಾಂಡೆಯವರು ದಾಂಡೇಲಿಯ ಸಮಗ್ರ ಅಭಿವೃದ್ಧಿಗಾಗಿ ದೂರದೃಷ್ಟಿಯ ಕನಸು ಕಂಡಿದ್ದ ನನ್ನ ಆತ್ಮೀಯರು ಅಜಿತ ನಾಯಕರವರು ಆಗಿದ್ದರು. ದಾಂಡೇಲಿಯನ್ನು ತಾಲೂಕನ್ನಾಗಿಲು ಅಜಿತ ನಾಯಕರವರು ಮಾಡಿದ ಹೋರಾಟ ಸದಾ ಸ್ಮರಣೀಯ. ನೇರ ನೇರವಾಗಿ ಮಾತನಾಡುವುದರ ಮೂಲಕ ಊರಿನ ಸಮಸ್ಯೆಗಳ ಬಗ್ಗೆ ಧ್ವನಿಯಾಗಿದ್ದ ಅಜಿತ ನಾಯಕರವರು ದಾಂಡೇಲಿಗೊಂದು ಶಕ್ತಿಯಾಗಿದ್ದರು. ನಗರದ ಅಭಿವೃದ್ಧಿಗಳ ಬಗ್ಗೆ ತನ್ನ ಕನಸನ್ನು ಸದಾ ಬಿಚ್ಚಿಡುತ್ತಿದ್ದ ಅಜಿತ ನಾಯಕರವರ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಹತ್ಯೆಯಂತಹ ಅಮಾನವೀಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಶೀಘ್ರದಲ್ಲೆ ಆರೋಪಿಗಳ ಬಂಧನವಾಗಲಿದೆ. ಪೊಲೀಸ್ ಇಲಾಖೆ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದೆ ಎಂದರು.  ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ: ನಮ್ಮ ಕುಟುಂಬಕ್ಕೆ ರಕ್ಷಣೆಯಿಲ್ಲವಾಗಿದೆ. ಅಜಿತ ನಾಯಕರವರ ಮಕ್ಕಳು ಇಲ್ಲಿರುವುದು ಬೇಡಾ ಬೇರೆಡೆಗೆ ಹೋಗುವ ಎಂದು ಹೇಳುತ್ತಿದ್ದು, ಕುಟುಂಬಕ್ಕೆ ರಕ್ಷಣೆ ಇಲ್ಲವಾಗಿದೆ, ಪೊಲೀಸ್ ರಕ್ಷಣೆ ನೀಡಬೇಕೆಂದು ಮೃತ ಅಜಿತ ನಾಯಕರವರ ಸಹೋದರಿಯರು ಹಾಗೂ ಅವರ ಹತ್ತಿರ ಸಂಬಂಧಿ ಹಾಗೂ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ರಮಾನಂದ ನಾಯಕರವರು ಸಚಿವ ದೇಶಪಾಂಡೆಯವರಲ್ಲಿ ಮೌಖಿಕ ಮನವಿ ಮಾಡಿದರು. ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚಿಸಿ, ನಿಮ್ಮ ಕುಟುಂಬಕ್ಕೆ ರಕ್ಷಣೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ದೇಶಪಾಂಡೆಯವರು ಹೇಳಿದರು.

ಈ ಸಂದರ್ಭದಲ್ಲಿ ಅಜಿತ ನಾಯಕರವರ ಕುಟುಂಬಸ್ಥರು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಪಕ್ಷದ ಹಿರಿಯ ಮುಖಂಡ ರಾಧಾಕೃಷ್ಣ ಕನ್ಯಾಡಿ, ತಸ್ವರ ಸೌದಾಗರ, ಫೈರೋಜ್ ಖಾನ್ ಬಾಲೆಖಾನ್, ಮೋಹನ ಹಲವಾಯಿ, ನಗರ ಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರು, ಕೀರ್ತಿ ಗಾಂವಕರ, ಬಸೀರ್ ಗಿರಿಯಾಳ, ರಾಮಲಿಂಗ ಜಾಧವ, ಎಂ.ಆರ್.ನಾಯ್ಕ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಪಕ್ಷದ ಮುಖಂಡರುಗಳಾದ ಆರ್.ಪಿ.ನಾಯ್ಕ, ಎನ್.ಎಸ್.ನಾಯ್ಕ, ಎಸ್.ಎಸ್.ಪೂಜಾರ, ವಿ.ಆರ್.ಹೆಗಡೆ, ರೇಣುಕಾ ಬಂದಂ, ಎ.ಎಂ.ಜಾಫರ್, ವಿವಿಧ ಸಾಮಾಜಿಕ ಮುಖಂಡರುಗಳಾದ ರವಿ ನಾಯ್ಕ, ಅಕ್ರಂ ಖಾನ್, ವಕೀಲರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...