ಮೃತ ದೇಹದ ಮೇಲಿನ‌ ಚಿನ್ನಾಭರಣವನ್ನೂ ಬಿಡದ ಖಾಸಗಿ ಆಸ್ಪತ್ರೆಯ ವೈದ್ಯರು

0
194

ಬೆಳಗಾವಿ

ವೈದ್ಯೋ ನಾರಾಯಣ ಹರಿ ಎನ್ನುವಂತೆ ಅನಾರೋಗ್ಯದಿಂದ ಮೃತಮಟ್ಟ ಮಹಿಳೆಯ ಬಳಿಯಿದ್ದ ಚಿನ್ನದ ಮಂಗಳಸೂತ್ರ ಹಾಗೂ ಕಿವಿಯೊಲೆಯನ್ನು ಆಸ್ಪತ್ರೆ ಸಿಬ್ಬಂದಿ ಮುಚ್ಟಿಟ್ಟಿ ಬಳಿಕ ಪೊಲೀಸರ್ ಮಧ್ಯಸ್ಥಿಕೆಯಿಂದ ಮರಳಿ ಮಾಲೀಕರಿಗೆ ಹಸ್ತಾಂತರಿಸಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕುಟುಂಬಸ್ಥರು ತಕ್ಷಣ ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವ ಬದಲು ಮೊದಲಿಗೆ ಹಣ ಪಾವತಿಸುವಂತೆ ಪೀಡಿಸಿದ್ದಾರೆ. ಬಳಿಕ‌ ದೊಡ್ಡ ಮೊತ್ತದ ಚಕ್ ನೀಡಿದ ನಂತರ ಮಾನವೀಯತೆ ಇಲ್ಲದೆ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ‌.

ಇಷ್ಟಾದರೂ ಆ ಮಹಿಳೆ ಮಾತ್ರ ಬದುಕಲಿಲ್ಲ. ಸುಮಾರು ಒಂದೂವರೆ ಗಂಟೆಗಳ ಕಾಲ‌ ಆ ಮಹಿಳೆಗೆ ಆ್ಯಂಬುಲೆನ್ಸ್‌ನಲ್ಲಿಯೇ ಆಕ್ಸಿಜೆನ್ ಅಳವಡಿಸಿ ಇರಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಹಿಳೆ ಶುಕರವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ. ಒಂದು ರಾತ್ರಿ ಕಳೆಯುವದರಲ್ಲಿ ಚಿಕಿತ್ಸೆಗೆ ನೀಡಿದ್ದಕ್ಕಾಗಿ ಆಸ್ಪತ್ರೆಯವರು ಸುಮಾರು 38 ಸಾವಿರ ಬಿಲ್ ಮಾಡಿದ್ದಾರೆ.

ಮೃತಪಟ್ಟ ಮಹಿಳೆ ಮೈ ಮೇಲೆ ಇದ್ದ ಚಿನ್ನದ ಮಂಗಳಸೂತ್ರ ಹಾಗೂ ಕಿವಿಯೊಲೆ ಸೇರಿದಂತೆ ಒಟ್ಟು 20 ಗ್ರಾಂ ಬಂಗಾರದ ಆಭರಣಗಳನ್ನು ರೋಗಿಯ ಕುಟುಂಬದವರಿಗೆ ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ.

ಮೃತ ದೇಹ ತೆಗೆದುಕೊಳ್ಳುವ ಸಂದರ್ಭದಲ್ಲಿ ಮೃತಮಹಿಳೆಯ ಕುಟುಂಬಸ್ಥರು ಬಂಗಾರದ ಆಭರಣಗಳ ಬಗ್ಗೆ ವಿಚಾರಿಸಿದ್ದಾರೆ. ಆಗ ಉಡಾಫೆ ಉತ್ತರ ನೀಡಿದ ಖಾಸಗಿ ಆಸ್ಪತ್ರೆಯ ವಿರುದ್ದ ನಗರದ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ‌.

 

ದೂರು ಸ್ವೀಕರಿಸಿ ಆಸ್ಪತ್ರೆಗೆ ತೆರಳಿದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಂತೆ ಇಲ್ಲಿನ ಸಿಬ್ಬಂದಿ ಕುಟುಂಬಸ್ಥರಿಗೆ ಬಂಗಾರದ ಆಭರಣಗಳನ್ನು ಪೊಲೀಸರ ಸಮ್ಮುಖದಲ್ಲಿ ರಾತ್ರಿ ಬಂಗಾರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾ ಬಳಿಕ ಕುಟುಂಬಸ್ಥರು ಮೃತದೇಹ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಕೊರೋನಾ ವೈರಸ್ ಸಂದರ್ಭದಲ್ಲಿ ಸರಕಾರಿ ವೈದ್ಯರು ಸೋಂಕಿತರನ್ನು ಬದುಕಿಸಲು ಹಗಲು ರಾತ್ರಿ ಎನ್ನದೆ ತಮ್ಮ ಕುಟುಂಬವನ್ನು ತೊರೆದು ಸೇವೆ ಮಾಡುತ್ತಿದ್ದಾರೆ. ಮಾನವೀಯತೆಗೆ ಬೆಲೆ ನೀಡದ ಇಂಥ ಖಾಸಗಿ ಆಸ್ಪತ್ರೆಯ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

loading...