ಮೈತ್ರಿ ಅಭ್ಯರ್ಥಿ ವೀಣಾ ಪಾದಯಾತ್ರೆ ಮೂಲಕ ಮತಯಾಚನೆ

0
4

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಮತಕ್ಷೆÃತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಉಭಯ ಪಕ್ಷದ ಮುಖಂಡರು, ಕಾರ್ಯಕರ್ತರು ವಿದ್ಯಾಗಿರಿಯಲ್ಲಿ ಅಭ್ಯರ್ಥಿ ವೀಣಾ ಜತೆ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದರು. ಮೊದಲು ನಗರದ ವಿದ್ಯಾಗಿರಿಯ ೧೪ ನೇ ಕ್ರಾಸ್ಸಿನಲ್ಲಿ ಕೆಂಚಮ್ಮ ದೇವಿ ದೇವಸ್ಥಾನ ದಲ್ಲಿ ಪÇಜೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಅಭ್ಯರ್ಥಿ ವೀಣಾ ಕಾಶಪ್ಪನವರ್ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಉಭಯ ಪಕ್ಷದ ಕಾರ್ಯಕರ್ತರು ಜಯಘೋಷಣೆಗಳನ್ನು ಕೂಗಿದರು. ವಿದ್ಯಾಗಿರಿ ಬಳಿಕ ಕೌಲಪೇಟೆಯ ಮಲ್ಲಿಕಾರ್ಜುನ ದೇವಾಲಯ, ಮೋಟಗಿ ಬಸವೇಶ್ವರ ದೇವಾಲಯ ಕ್ಕೆ ಭೇಟಿ ನೀಡಿ ದರುಶನ ಪಡೆದರು. ,ಹುಂಡೇಕಾರ ಗಲ್ಲಿ, ಝೆಂಡಾ ಗಲ್ಲಿ ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆಯನ್ನು ಅಪಾರ ಕಾರ್ಯಕರ್ತರ ಬೆಂಬಲದೊಂದಿಗೆ ಪ್ರಚಾರ ಮಾಡಿದರು.

loading...