ಮಹಿಳಾ ದೌರ್ಜನ್ಯ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ : ತಾರಾ

0
50

ಬೆಳಗಾವಿ:3 ರಾಜ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ತಂದೆ ಮಗಳ ಮೇಲಿನ ಲೈಗಿಂಕ ದೌರ್ಜನ್ಯ, ಶಾಲೆಯ ಸಿಬ್ಬಂದಿಗಳು ಬಾಲಕಿಯರ ಮೇಲೆ ಅತ್ಯಚಾರ ಮತ್ತು ದೆಹಲಿ, ಮುಂಬೈನಲ್ಲಿ ವರದಿಗಾರ್ತಿಯ ಮೇಲೆ ಅತ್ಯಾಚಾರಗಳಿಂದ ವಿಶ್ವದಲ್ಲಿ ಭಾರತ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನ ಸಭೆ ಸದಸ್ಯೆ, ಚಿತ್ರ ನಟಿ ತಾರಾ ಅನುರಾಧ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರವನ್ನು ವಿಕೃತ ಮನಸ್ಸಿನ ಕಾಮುಕರು ನಡೆಸುತ್ತಿರುವುದು ಹೀನ ಕೃತ್ಯವಾಗಿದೆ. ಇದರಿಂದ ಇಡೀ ಸಮಾಜವೇ ತಲೆ ತಗ್ಗಿಸುವ ಕೆಲಸ. ಇಂಥ ಘಟನೆಗಳನ್ನು ಎಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಖಂಡಿಸಬೇಕೆಂದು ಅವರು ಹೇಳಿದರು.
ಅಲ್ಲದೆ ರಾಜ್ಯ ಸರಕಾರ ಕೌಟುಂಬಿಕ ಲೈಗಿಂಕ ದೌರ್ಜನ ತಡೆಗಟ್ಟಲು ಅತ್ಯಾಚಾರಿಗಳಿಗೆ 3 ವರ್ಷ ಸಜೆ ಹಾಗೂ ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಕಾನೂನು ರೂಪಿಸಿದೆ. ಮತ್ತು ಶಾಲಾ, ಕಾಲೇಜುಗಳಲ್ಲಿ ಅತ್ಯಾಚಾರ ತಡೆಗಟ್ಟಲು ಎಮ್.ಎನ್. ರೆಡ್ಡಿ ಅವರು ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಸೂಚನೆ ನೀಡಿದ್ದಾರೆ.  ಆದರೆ ಅವುಗಳಿಗೆ ಸರಕಾರಿ ಹಣ ನೀಡದೆ ಸೂಚಿಸುವದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಸರಕಾರವನ್ನು ಪ್ರಶ್ನಿಸಿದರು.
ಅಲ್ಲದೆ ರಾಜ್ಯದಲ್ಲಿ ಕೆಲವರು ವೇಶ್ಯಾವಾಟಿಕೆ ನಡೆಸಲು ಸರಕಾರದಿಂದ ಅನುಮತಿ ಪತ್ರ ನೀಡಬೇಕೆಂದು ಹೇಳಿರುವುದನ್ನು ತೀವ್ರವಾಗಿ ವಿರೋಧಿಸಿದ ಅವರು, ಭಾರತದಲ್ಲಿ 1956ರಲ್ಲಿಯೇ ವೇಶ್ಯಾವಾಟಿಕೆಯನ್ನು ನಿಷೇಧಿಸುವಂತೆ ಕಾಯ್ದೆ ಬಂದಿದ್ದು, ಕೆಲ ಮಹಿಳೆಯರೆ ಇಂಥ ನಾಚಿಗೆಗೇಡಿನ ಕಾರ್ಯಮಾಡಲು ಅನುಮತಿ ಕೇಳುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದರು.
ರಾಷ್ಟ್ರದಲ್ಲಿ, ರಾಜ್ಯದಲ್ಲಿ ಶಾಲಾ ಬಾಲಕಿಯರ ಮೇಲೆ, ಮಹಿಳೆಯರ ಮೇಲೆ ಅತ್ಯಾಚಾರ, ಲೈಗಿಂಕ ದೌರ್ಜನ್ಯ ತಡೆಗಟ್ಟುವದು, ನಿಯಂತ್ರಿಸುವದು ಸಮಾಜದ ಕರ್ತವ್ಯವಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲರೂ ಕೈ ಜೋಡಿಸಬೇಕೆಂದು ತಾರಾ ಅನುರಾಧಾ ಮನವಿ ಮಾಡಿಕೊಂಡರು.

loading...

LEAVE A REPLY

Please enter your comment!
Please enter your name here