ಮೋದಿಗೆ ಕರ್ನಾಟಕದ ಮೇಲೆ ಪ್ರೀತಿ ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ

0
23

ಬೆಳಗಾವಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮೇಲೆ ಕಾಳಜಿ, ಪ್ರೀತಿ ಇಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರವಾಹದ ಅನುದಾನ ಬಿಡುಗಡೆ ಮಾಡುವಂತೆ ಕೇಳಿದರೂ ನೀಡಿಲ್ಲ. ಅನುದಾನ ಕೇಳದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರು. ಪ್ರವಾಹದ ಹಾನಿ ಕಡಿಮೆ ಇದ್ದಲ್ಲಿ ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡಿತ್ತು. ಆದರೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಅನುದಾನ ಕಡಿಮೆ ನೀಡಿದ್ದಾರೆ. ಪ್ರತಿ ಸಾರಿ ಭಾಷಣ ಕೇಳುವುದು ಹೋಗುವುದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಸಚಿವರಿದ್ದರೂ ಅವರ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಡಿಸಿಎಂ ಲಕ್ಷö್ಮಣ ಸವದಿ ಇದ್ದಾರೆ. ನಾಲ್ಕು ಜನ ಮಂತ್ರಿಗಳಿದ್ದಾರೆ. ಸಮನ್ವಯತೆಯಿಂದ ಕೆಲಸ ಮಾಡಬೇಕು. ಅದನ್ನು ಬಿಟ್ಟು ನಾಲ್ಕು ಜನ ಒಂದೊAದು ದಿಕ್ಕಿಗೆ ಹೊಗುತ್ತಿದ್ದಾರೆ ಎಂದು ಹೇಳಿದರು.
ಮಣಗುತ್ತಿಯಲ್ಲಿ ಶಿವಾಜಿ ಪ್ರತಿಷ್ಠಾಪನೆಯ ವಿಚಾರದಲ್ಲಿ ಮಹಾರಾಷ್ಟç ಮಾಧ್ಯಮದವರು ಪ್ರಚೋಧನೆ ನೀಡುತ್ತಿರುವುದು ಸರಿಯಲ್ಲ. ಅದು ಒಂದು ಊರಿನ ಸಮಸ್ಯೆ ಬೆಂಗಳೂರು, ಬಾಂಬೆ, ದಿಲ್ಲಿ, ಮಹಾರಾಷ್ಟçದಿಂದ ಬರುವ ಅವಶ್ಯಕತೆ ಇಲ್ಲ. ಅದನ್ನು ಸ್ಥಳೀಯರೆ ಬಗೆಹರಿಸಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮಣಗುತ್ತಿಯಲ್ಲಿ ಶಿವಾಜಿ ಪ್ರತಿಷ್ಠಾಪನೆ ತೆಗೆದು ಹಾಕಲು ಮಹಾರಾಷ್ಟçದ ಬಿಜೆಪಿ ಶಾಸಕ ಸತೀಶ ಜಾರಕಿಹೊಳಿ ಅವರ ಕೈವಾಡ ಇದೆ ಎನ್ನುವುದು ಯಾವ ಆಧಾರದ ಮೇಲೆ ಹೇಳುತ್ತಾರೆ. ಪ್ರತಿಷ್ಠಾಪನೆಗೆ ಯಾರ ವಿರೋಧವಿಲ್ಲ. ಅದು ಜಮೀನ ವಿವಾದ ಇದೆ. ಅದನ್ನು ಗ್ರಾಮದ ಮುಖಂಡರು ಬಗೆಹರಿಸಿಕೊಳ್ಳುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಮಹಾರಾಷ್ಟçದ ಮಾಧ್ಯಮದವರು ಮಣಗುತ್ತಿಯ ಶಿವಾಜಿ ಮೂರ್ತಿಯ ಪ್ರತಿಷ್ಠಾಪನೆಯ ಕುರಿತು ಹೆಚ್ಚು ಪ್ರಚೋಧನೆ ನೀಡುತ್ತಿದ್ದಾರೆ. ಅದು ಸ್ಥಳೀಯ ಸಮಸ್ಯೆ ಇಲ್ಲಿನ ಮುಖಂಡರೇ ಬಗೆಹರಿಸಿಕೊಳ್ಳಬೇಕು. ಇದರಲ್ಲಿ ಹೊರಗಿನವರ ಮಧ್ಯಸ್ಥಿಕೆ ವಹಿಸುವುದು ಅವಶ್ಯಕತೆ ಇಲ್ಲ

ಬೆಳಗಾವಿಯಲ್ಲಿ ಪದೇ ಪದೇ ಎಂಇಎಸ್‌ನವರು ಕರಾಳ ದಿನಚಾರಣೆ ಮಾಡುವುದು. ಕರ್ನಾಟಕದ ಬಸ್ಸಿಗೆ ಕೊಲ್ಲಾಪುರದ ಬಸ್‌ಗೆ ಕಲ್ಲು ಎಸೆಯುತ್ತಾರೆ. ಅದು ಅವರ ಅಸ್ಥಿತ್ವಕ್ಕಾಗಿ ವಿನಃ ಬೇರೆಯಾವುದೇ ಇಲ್ಲ. ಅದರಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಶಿವಾಜಿ ಮಹಾರಾಜ ಜಯಂತಿಯನ್ನು ಸರಕಾರದಿಂದಲೇ ಮಾಡುತ್ತೇವೆ. ಶಿವಾಜಿ ಮಹಾರಾಜರ ಬಗ್ಗೆ ನಮಗೂ ಗೌರವ ಇದೆ ಎಂದರು.

loading...