ಮೌಢ್ಯತೆಯಿಂದ ಜೀವನ ಉದ್ದಾರವಾಗಲ್ಲ: ಸಚಿವ ಶಿವಾನಂದ

0
17

ಬಸವನಬಾಗೇವಾಡಿ- ಆಚಾರ ವಿಚಾರದಲ್ಲಿ ಮೌಢ್ಯತೆ ಇರುವುದರಿಂದ ನಮ್ಮ ಜೀವನ ಉದ್ಧಾರವಾಗಲ್ಲ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.
ಅವರು ಪಟ್ಟಣದ ಸಿ.ಬಿ.ಎಸ್.ಸಿ ಶಾಲೆಯ ಆವರಣದಲ್ಲಿ ಶ್ರಾವಣ ಮಾಸ ಹಾಗೂ ಮೂಲ ನಂದೀಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಅಕ್ಕನ ದಿವ್ಯ ದರ್ಶನ ಪ್ರವಚನ ಮಂಗಲೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ, ವಚನ ಸಾಹಿತ್ಯದ ಅನುಷ್ಠಾನದಲ್ಲಿ ಮುಂಡರಗಿ ನಿಜಗುಣಾನಂದ ಸ್ವಾಮೀಜಿ ರಾಜ್ಯದಲ್ಲಿಯೇ ಮುಂಚೂಣಿ ಯಲ್ಲಿದ್ದಾರೆ. ಅವರ ಒಂದು ತಿಂಗಳ ಪ್ರವಚನದ ಆಲಿಕೆಯಿಂದ ಪಟ್ಟಣ ವಚನ ಸಾಹಿತ್ಯದ ಅನುಷ್ಠಾನದತ್ತ ಸಾಗುತ್ತಿದೆ ಎಂದರು.

ಸಾನಿಧ್ಯ ವಹಿಸಿದ್ಧ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬರೀ ನೀವೆಲ್ಲಾ ಬಸವಾಭಿಮಾನಿಗಳಾಗದೇ ಬಸವ ತತ್ವ ಅನೂಯಾಯಿಗಳಾಬೇಕಾಗಿದೆ. ಜನರ ಸಮಸ್ಯೆ ಪರಿಹರಿಸುವ ಶಕ್ತಿ ಇರುವ ಪ್ರವಚನಗಳು ಇಂದು ನಮಗೆಲ್ಲಾ ನಿತ್ಯ ಬೇಕಾಗಿದೆ. ಬಸವ ಜನ್ಮ ಭೂಮಿಯಲ್ಲಿ ಬಸವ ಜನ್ಮ ಭೂಮಿ ಉತ್ಸವವನ್ನು ಸಚಿವ ಶಿವಾನಂದ ಪಾಟೀಲ ಅವರು ಮುಂದಿನ ವರ್ಷದಿಂದಲೇ ಆರಂಭಿಸಲು ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.ಬಸವ ನೆಲದಲ್ಲಿ ಹುಟ್ಟಿದ ರಾಷ್ಟಿÃಯ ಬಸವ ಸೈನ್ಯ ಇಂದು ಇಡೀ ಉತ್ತರ ಕರ್ನಾಟಕದಲ್ಲಿಯೇ ಕ್ರಿಯಾಶೀಲ ಸಂಘಟನೆಯಾಗಿ ಬೆಳೆದು ರಾಜ್ಯದಲ್ಲಿ ಎಲ್ಲಿಯೇ ಬಸವ ತತಕ್ಕ್ವೆ ಅಪಚಾರವಾದಲ್ಲಿ ಪ್ರತಿಭಟನೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಬಸವಣ್ಣ ಜಾಗತಿಕವಾಗಿ ಬೆಳೆದ್ದು ಈ ನೆಲದಲ್ಲಿ. ಹೀಗಾಗಿ ಪ್ರತಿಯೊಬ್ಬರೂ ಅವರ ತತ್ವ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.

ಬ್ಲಾಕ್ ಕಾಂಗ್ರೆÃಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ, ವಕೀಲ ಬಿ.ಕೆ ಕಲ್ಲೂರ, ಪ್ರಾಧಿಕಾರ ಆಯುಕ್ತ ಎಸ್.ಆರ್.ಹಿರೇಮಠ, ಯೊಗಗುರು ಚನ್ನಬಸವಾನಂದರು, ಜಾತ್ರಾ ಕಮೀಟಿ ಅಧ್ಯಕ್ಷ ಶೇಖರ ಗೊಳಸಂಗಿ, ಸಾಹಿತಿ ಲರು ಗೊಳಸಂಗಿ, ಶಿವಾನಂದ ತೊಳನೂರ, ಬಸವರಾಜ ನಾಯಕೋಡಿ, ಶಿವಾನಂದ ಮಠಪತಿ, ಎಂಎಸ್ ಕೊಟ್ಲಿ, ಎಸ್.ಎಸ್.ಝಳಕಿ, ಎಚ್.ಎಸ್ ಬಿರಾದಾರ, ಬಸವರಾಜ ಹಾರಿವಾಳ, ಯಮನಪ್ಪ ನಾಯ್ಕೊÃಡಿ, ಬಸವರಾಜ ಗೊಳಸಂಗಿ, ಬಸಣ್ಣ ಕಲ್ಲೂರ, ಶ್ರಿÃಕಾಂತ ಕೊಟ್ಟಶೆಟ್ಟಿ, ಸುಭಾಸ ಚಿಕ್ಕೊಂಡ, ಸಂಗಪ್ಪ ವಾಡೇದ ಸೇರಿದಂತೆ ಅನೇಕರು ಇದ್ದರು. ಶೇಖರಗೌಡ ಪಾಟೀಲ ಸ್ವಾಗತಿಸಿದರು.. ಅಶೋಕ ಬಾರಿಕಾರಿ ನಿರೂಪಿಸಿದರು. ರವಿ ರಾಠೋಡ ವಂದಿಸಿದರು.

loading...