ಯಾವುದೇ ರೀತಿಯ ತನಿಖೆಗೂ ನಾನು  ಸಿದ್ಧ :ಚಿಕ್ಕನಗೌಡರ

0
386
ಯಾವುದೇ ರೀತಿಯ ತನಿಖೆಗೂ ನಾನು  ಸಿದ್ಧ :ಚಿಕ್ಕನಗೌಡರ
ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ ಖಂಡನೀಯ.ಈ ಘಟನೆ ಕುರಿತು  ಮಾಜಿ ಸಚಿವರು ಹಾಗೂ ಶಾಸಕರು ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನನ್ನ ಮೇಲೆ ಶಾಸಕರು ಮಾಡಿರುವ   ಆರೋಪಗಳಿಗೆ  ಯಾವುದೇ ರೀತಿಯ ತನಿಖೆಗೂ ನಾನು  ಸಿದ್ಧ.ಎಂದು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವು ಅವರು ಶಾಸಕ ಸತೀಶ ಜಾರಕಿಹೊಳಿ  ಅವರಿಗೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವ ಹಾಗೆ ಮಾಹಿತಿ ನೀಡಿದ್ದಾರೆ.
ವಿ.ವಿ.ಯಲ್ಲಿ ಹಲವಾರು ಸಿಂಡಿಕೇಟ್ ಸದಸ್ಯರು ಇರುತ್ತಾರೆ, ಅದರಲ್ಲಿ ನಾನು ಕೂಡ ಒಬ್ಬನಾಗಿದ್ದಾನೆ ಎಂದಿದ್ದಾರೆ.
ನನಗೆ ನೀಡಿರುವ ಜವಾಬ್ದಾರಿಯನ್ನು ಪರಿಮಿತಿ ಒಳಗೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ  ಮಾಡುತ್ತಿದ್ದೇನೆ.ವಿಶ್ವವಿದ್ಯಾಲಯಗಳು ರಾಜಕೀಯ ರಹಿತವಾಗಿರಬೇಕು ಎಂಬ ಸದಾಶಯ ನನ್ನದೂ ಕೂಡ.
ಎಲ್ಲರೂ ಒಗ್ಗೂಡಿ ರಾ.ಚ.ವಿ. ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಬೇಕೆಂಬುದು ನನ್ನ ಸದಾಶಯವಗಿದೆ ಎಂದು ತಿಳಿಸಿದ್ದಾರೆ.
loading...