ಯಾಹೂ ಮೆಸೆಂಜರ್ ಅಧಿಕೃತ ಕಾರ್ಯ ಬಂದ್

0
26

ನವದೆಹಲಿ: 20 ವರ್ಷಗಳ ಕಾಲ ಸತತ ಸೇವೆ ಒದಗಿಸಿದ್ದ ಯಾಹೂ ಮೆಸೇಂಜರ್ ಜುಲೈ 17ರಂದು ಅಧಿಕೃತವಾಗಿ ತನ್ನ ಕಾರ್ಯ ನಿಲ್ಲಿಸಿದೆ.
ಯಾಹೂ ಮೆಸೇಂಜರ್ ಕಾರ್ಯ ನಿಲ್ಲಿಸಿದ್ದರೂ ಮುಂದಿನ ಆರು ತಿಂಗಳುಗಳ ಕಾಲ ಬಳಕೆದಾರರು ಎಲ್ಲಾ ರೀತಿಯ ಡೌನ್​ಲೋಡ್ ಮತ್ತು ಚಾಟ್​ ಹಿಸ್ಟರಿಯನ್ನು ಬ್ಯಾಕ್​ಅಪ್​ ಮಾಡಿಕೊಳ್ಳಬಹುದು.
ಯಾಹೂ ಮೆಸೇಂಜರ್ ಸದ್ಯ ಕಾರ್ಯ ಸ್ಥಗಿತಗೊಳಿಸಿದ್ದು, ಪರ್ಯಾಯ ಅಪ್ಲಿಕೇಶನ್ ಇನ್ನೂ ಬಿಡುಗಡೆ ಮಾಡಿಲ್ಲ. ಸ್ಕ್ವೀರಲ್ ಹೆಸರಿನ ಆ್ಯಪ್​ ಇನ್ನೂ ಪೂರ್ಣಪ್ರಮಾಣದಲ್ಲಿ ಸಂಸ್ಥೆ ಬಿಡುಗಡೆ ಮಾಡಿಲ್ಲ.
ಮೂಲಗಳ ಪ್ರಕಾರ ಸ್ನ್ಯಾಪ್​ಚಾಟ್, ವೀಚಾಟ್, ವಾಟ್ಸ್​ಆ್ಯಪ್​ಗಳ ಪೈಪೋಟಿ ಎದುರಿಸಲಾಗದೆ ಯಾಹೂ ಮೆಸೇಂಜರ್ ಕಾರ್ಯ ನಿಲ್ಲಿಸಿದೆ ಎನ್ನಲಾಗಿದೆ. ಯಾಹೂ ಮೆಸೇಂಜರ್ 1998ರಲ್ಲಿ ಆರಂಭಗೊಂಡು ಯಾಹೂ ಪೇಜರ್ ಹೆಸರಿನಲ್ಲಿ ಇಮೇಲ್ ಹಾಗೂ ಸಂಕ್ಷಿಪ್ತ ಸಂದೇಶ ಸೇವೆ ಪ್ರಾರಂಭಿಸಿತ್ತು.

loading...