ಯುಎಸ್ ಓಪನ್ : ಡೊಮಿನಿಕ್ ಥೀಮ್‍ಗೆ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಕಿರೀಟ

0
5

ನ್ಯೂಯಾರ್ಕ್:- ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‍ನ ರೋಚಕ ಫೈನಲ್ ಹಣಾಹಣಿಯಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ವಿಜೇತರಾಗಿ ಪ್ರಥಮ ಬಾರಿಗೆ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿದ್ದಾರೆ.ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ಅರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ 27 ವರ್ಷದ ಡೊಮಿನಿಕ್ ಥೀಮ್, ಜರ್ಮನಿಯ ಪ್ರಬಲ ಪ್ರತಿಸ್ಪರ್ಧಿ 23ರ ಹರೆಯದ ಅಲೆಗ್ಸಾಂಡರ್ ಝೈರವ್ ಅವರನ್ನು ಮಣಿಸಿ ಪ್ರಥಮ ಬಾರಿಗೆ ಪ್ರಶಸ್ತಿ ಗೆದ್ದರು.

loading...