ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರ ಸಾಧನೆ

0
135

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರ ಸಾಧನೆ

ಕನ್ನಡಮ್ಮ ಸುದ್ದಿ -ಚಿಕ್ಕೋಡಿ : ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಸಿವಿಲ್ ಸೇವಾ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವ ಮೂಲಕ ಯಶಸ್ಸು ಕಂಡಿದ್ದಾರೆ.

ಇಂದು ಪ್ರಕಟವಾದ ಯುಪಿಎಸ್ ಸಿ ಮುಖ್ಯ ಪರೀಕ್ಷೆಯಲ್ಲಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಪ್ರಗತಿಪರ ರೈತ ಕೆಂಪಣ್ಣಾ ದೇಸಾಯಿ ಪುತ್ರ ಅಪ್ಪಟ ಗ್ರಾಮಿಣ ಪ್ರತಿಭೆ ಪ್ರಫುಲ್ ದೇಸಾಯಿ 532 ರ್ಯಾಂಕ್ ಪಡೆದರೆ, ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಗಜಾನನ ಬಾಲೆ  663 ನೆಯ ಗಳಿಸಿದ್ದಾರೆ.ಹಾಗೂ
ಚಿಕ್ಕೋಡಿ ಪಟ್ಟಣದ ಅರಣ್ಯ ರಕ್ಷಕನ ಪುತ್ರಿ ಪ್ರಿಯಾಂಕಾ ಕಾಂಬಳೆ 670ನೇ ರ್ಯಾಂಕ್ ಗಳಿಸಿದ್ದಾಳೆ.ಹಾಗೂ ಈ ಹಿಂದೆ ಕೆಪಿಎಸ್ಇ ಪರೀಕ್ಷೆ ಉತೀರ್ಣರಾಗಿ ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದ ಜಗದೀಶ ಅಡಹಳ್ಳಿ ಇಂದು ಯುಪಿಎಸ್ ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ .

loading...