ಯುವಕರು ಪಾಶ್ಚಿಮಾತ್ಯ ಸಂಸ್ಕøತಿಗೆ ಮರುಳಾಗುತ್ತಿದ್ದಾರೆ : ರಾಜಯೋಗಿಂದ್ರಶ್ರೀ

0
34

ಚನ್ನಮ್ಮ ಕಿತ್ತೂರು 25: ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಈ ಆಸ್ಪತ್ರೆಯು ಕಾರ್ಯಾರಂಭ ಮಾಡಿದ್ದು ಜನರು ಈ ಆಸ್ಪತ್ರೆಯ ಸದುಪಯೋಗ ಪಡಿದುಕೊಳ್ಳಬೇಕೆಂದು ಮಾಜಿ ಶಾಸಕ ಸುರೇಶ ಮಾರಿಹಾಳ ಹೇಳಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಸಚೀನ ಮಾರಿಹಾಳ ವಾಣಿಜ್ಯ ಮಳಿಗೆಯಲ್ಲಿ ನೂತನವಾಗಿ ಶ್ರೀ ಸಾಯಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಜನರಿಗೆ ಒಳ್ಳೆಯ ಸೇವೆಯನ್ನು ಮಾಡುವ ಗುರಿಯನ್ನು ಇಟ್ಟುಕೊಂಡು ಈ ಆಸ್ಪತ್ರೆಯನ್ನು ಸ್ಥಳಿಯ ವೈದ್ಯರು ಪ್ರಾರಂಭಿಸಿದ್ದು ಶ್ಲಾಘನೀಯ, ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಜನರು ಹುಬ್ಬಳ್ಳಿ,ಧಾರವಾಡ,ಬೆಳಗಾವಿಯಂತಹ ಮಹಾನಗರಗಳನ್ನು ಅವಲಂಭಿಸಿದ್ದಾರೆ ಆದರೆ ಅವರ ಬಡತನ ಪರಿಸ್ಥಿತಿಯನ್ನು ಕಂಡು ಇಲ್ಲಿಯೇ ಆಸ್ಪತ್ರೆಯನ್ನು ತೆರೆಯಲಾಗಿದೆ ಎಂದರು.
ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಜನರ ಆರೋಗ್ಯದ ಒಳಿತಿಗಾಗಿ ಆಸ್ಪತ್ರೆ ಕಾರ್ಯವನ್ನು ಪ್ರಾರಂಭಿಸಿದ್ದು ಇದರ ಸದುಪಯೋಗ ಪಡಿದು ಜನರು ಒಳ್ಳೆಯ ಆರೋಗ್ಯವನ್ನು ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಜಗತ್ತಿನಲ್ಲಿ ಆರೋಗ್ಯದಷ್ಟು ಬೇಲೆಬಾಳುವ ಆಸ್ತಿ ಮತ್ತೊಂದಿಲ್ಲ, ಹೆಚ್ಚಾಗಿ ಯುವಕರು ಪಾಶ್ಚಿಮಾತ್ಯ ದೇಶಗಳ ಸಂಸ್ಕøತಿಗೆ ಮಾರು ಹೋಗಿ ತಮ್ಮ ಆರೋಗ್ಯವಂತ ಜೀವನವನ್ನು ಹಾಳು ಮಾಡಿಕೋಳ್ಳುತಿದ್ದು ಯುವಕರು ನಮ್ಮ ದೇಶ ಸಂಸ್ಕøತಿಯ ಬಗ್ಗೆ ಅರಿತು ನಡೆಯಬೇಕಾಗಿದೆ ಎಂದರು.
ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಹಾಗೂ ಹುಲಿಮಠದ ಶ್ರೀ ಇಲ್ಲಿಯ ಹಳ್ಳಿಗಳಲ್ಲಿ ಅನೇಕ ಜನರು ಬಡತನ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಅದನ್ನು ಗಮನದಲ್ಲಿಟ್ಟುಕೂಂಡು ಈ ಆಸ್ಪತ್ರೆಯ ವೈದ್ಯರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಆಸ್ಪತ್ರೆ ಮುಖ್ಯಸ್ಥ ಡಾ|| ಎಸ್.ಎಮ್.ದೊಡಮನಿ ಮಾತನಾಡಿ, ಜನರಿಗೆ ವೈದ್ಯಕೀಯವಾಗಿ ಅನೇಕ ಅನಾನುಕೂಲತೆಗಳಿದ್ದು ಇದನ್ನು ಪರಿಹರಿಸುವ ಹಾಗೂ ರೋಗಿಗಳಿಗೆ ಒಳ್ಳೆಯ ಗುಣ್ಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಗೋಸ್ಕರ ಸ್ಥಳಿಯ ವೈದ್ಯರ ಸಂಘದ ಸಹಾಯದಿಂದ ಆಸ್ಪತ್ರೆಯನ್ನು ಆವಿಸ್ಕರಿಸಲಾಗಿದ್ದು, ಈ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೀಡಲಾಗುವದು ಇಲ್ಲಿ ಅನೇಕ ರೀತಿಯ ಕಾಯಿಲೆಗಳನ್ನು ಪತ್ತೆಹಚ್ಚುವ ಯಂತ್ರೋಪಕರಣಗಳನ್ನು ಅಳವಡಿಸಿ ಗುಣ್ಣಮಟ್ಟದ ಹಾಗೂ ಹಳ್ಳಿಯ ಜನರಿಗೆ ಕೈಗೆನಿಟುಕುವ ಬೆಲೆಯನ್ನು ಸಹ ಇಲ್ಲಿ ನಿಗದಿ ಪಡಿಸಲಾಗುವದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಗುರುಶಿದ್ದಪ್ಪ ಅಳೇನ್ನವರ, ಹಿರಿಯ ಪ್ರಸೂತಿ ಸೇವಕಿ ಬಾನುಬಿ ಮನಿಯಾರ ಇವರನ್ನು ಸನ್ಮಾನಿಸಲಾಯಿತು. ಡಾ|| ಬಸವರಾಜ ಪರವಣ್ಣವರ ಡಾ|| ವಿಶಾಲ, ಡಾ|| ಎಸ್.ಬಿ.ಬೆಂಬಳಗಿ, ಡಾ|| ವೆಂಕಟೇಶ ಉಣಕಲ್ಲಕರ, ಡಾ|| ಎಮ್.ಎಸ್.ಕಲ್ಮಠ, ಎ.ಎಚ್.ಲಡಖಾನ್, ಸೇರಿದಂತೆ ಸುತ್ತಮುತ್ತಲಿನ ವೈದ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು

 

loading...

LEAVE A REPLY

Please enter your comment!
Please enter your name here