ಉಳ್ಳಾಗಡ್ಡಿ-ಖಾನಾಪೂರ, ನ.14:: ಮಾನವಿಯಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯುವಕರು ಉತ್ತಮ ಸಮಾಜ ನಿರ್ಮಿಸುವುದರೊಂದಿಗೆ ಮತ್ತೊಮ್ಮೆ ಗಂಧದ ಬೀಡನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೂರಬೇಕಿದೆ ಎಂದು ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಸಮಿಪದ ಹೆಬ್ಬಾಳ ಗ್ರಾಮದಲ್ಲಿ ಕಣಾಟಕ ರಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡುತ್ತ. ಕನ್ನಡದ ಮೇರು ಸಂಸ್ಕ್ಕತಿಯನ್ನು ಉಳಿಸಿ-ಬೆಳೆಸಬೇಕಾಗಿದೆ ನಮ್ಮ ಸಂಸ್ಕ್ಕತಿ ದಶದಿಕ್ಕುಗಳಲ್ಲಿ ಹಬ್ಬಿಸುವ ಕರ್ತವ್ಯ ಕನ್ನಡಿಗರ ಮೇಲಿದೆ ಎಂದರು.
ವೇದಿಕೆಯಲ್ಲಿದ್ದ ಸಂಕೇಶ್ವರ ಪಿ.ಎಸ್,ಆಯ್. ಪ್ರಭು ಗಂಗನಹಳ್ಳಿ. ಮಾತನಾಡಿ ನಾಡಿಗಾಗಿ ಆತ್ಮೀಯವಾಗಿ ಕರ್ತವ್ಯ ನೀರ್ವಹಿಸುವುದರೊಂದಿಗೆ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ದೋರಕಿಸುವುದು ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಕರ್ತವ್ಯ ಎಂದರು,
ವೇದಿಕೆಯಲ್ದಿ ಜಿಲ್ಲಾ ಉಪಧ್ಯಕ್ಷ ಮಹಾದೇವ ತಳವಾರ. ಜಿಲ್ಲಾ ಸಂಚಾಲಕ ರಾಜು ನಾಶಿಪುಡಿ, ಮಾತನಾಡಿ ನಾಡು-ನುಡಿ ಸಂಸ್ಕ್ಕತಿ.ಮೂಲಭೂತ ಸೌಲಭ್ಯಗಳಿಗಾಗಿ ಯುವಕರು ಎದೆಗುಂದದೆ ಶ್ರಮಿಸಿ ಗ್ರಾಮೀಣ ಜನರ ಆಶೋತ್ತರಗಳಿಗೆ ಸ್ಪದಿಸಲು ಕರೆಯಿತ್ತರು,ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರೋಕಡೆ, ಗ್ರಾಮ ಪಂಚಾಯತ ಅಧ್ಯಕ್ಷ ಭರಮಗೌಡಾ ಪಾಟೀಲ, ನಾಗೇಶ ಪೂಜಾರಿ, ಬಸವರಾಜ ಲೋಳಸುರೆ, ಅಜೀತ ಮುನ್ನೊಳ್ಳಿ, ರಾಜು ಹಿರೇಮಠ, ಮೋದಿನ ನದಾಫ್, ಶ್ರೀಮತಿ ಸುಜಾತಾ ವಂದೂರೆ, ಅಶೋಕ ತಳವಾರ, ಮುಂತಾದವರು ಉಪಸ್ತಿತರಿದ್ದರು ಕಾರ್ಯಕ್ರಮಕ್ಕೆ ಅಪ್ಪಾಸಾಹೇಬ ಮುಲ್ತಾನಿ ಸ್ವಾಗತಿಸಿ, ರಾಜು ಗಾಲಿ. ಕಾರ್ಯಕ್ರಮ ನಿರೂಪಿಸಿದರು…