ಯೂಥ್ ವೋಟರ್ಸ್ ಮೇಲೆ ಅಭ್ಯರ್ಥಿಗಳ ನಿರೀಕ್ಷೆ ..!

0
5

 

ಮೌಲಾಹುಸೇನ ಬುಲ್ಡಿಯಾರ್
ಕನ್ನಡಮ್ಮ ಸುದ್ದಿ-ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೆÃತ್ರದ ಎಂಟು ವಿಧಾನ ಸಭಾ ಕ್ಷೆÃತ್ರಗಳನ್ನೊಳಗೊಂಡು ಒಟ್ಟು ೧೭,೩೬,೧೧೮ ಜನ ಮತದಾರರ ಪೈಕಿ ಈ ಸಲದ ಮತದಾರರ ಪಟ್ಟಿಯಲ್ಲಿ ೨,೩೩,೮೧೩ ಜನ ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಯುವ ಮತದಾರರ ನಿರ್ಣಯದ ಮೇಲೆ ರಾಜಖಿಯ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಅಡಗಿದೆ.

ಕಳೆದ ೨೦೧೪ರ ಲೋಕಸಭೆ ಹಾಗೂ ೨೦೧೮ರ ವಿಧಾನಸಭೆ ಚುನಾವಣೆಗಳಲ್ಲಿ ಹೊಸ ಹಾಗೂ ಯುವ ಕರ ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಹೊಸ ಮತದಾರರ ಹಕ್ಕು ಚಲಾವಣೆ ಪ್ರಮಾಣ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗ ಜಾಗೃತಿಗಾಗಿ ವಿಶೇಷ ಕಾಳಜಿವಹಿಸಿ, ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ಈ ಸಾರಿ ಯೂಥ್ ವೋಟರ್ಸ್ ಸಂಕ್ಯೆ ಹೆಚ್ಚಾಗಲು ಕಾರಣವಾಗಿದೆ. ಹೊಸದಾಗಿ ಸೇರ್ಪಡೆಗೊಂಡಿರುವ ಸುಮಾರು೨.೩೩ ಲಕ್ಷ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ನಿರೀಕ್ಷೆ ಇದ್ದು ಇವರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಯುವ ಮತದಾರರನ್ನೆÃ ಟಾರ್ಗೆಟ್ ಮಾಡಿ ಪ್ರಚಾರ ಶುರುವಿಟ್ಟುಕೊಂಡಿದ್ದು, ಹಲವು ತಂತ್ರಗಾರಿಕೆ ಮೂಲಕ ಮತಗಳನ್ನು ಸೆಳೆದುಕೊಳ್ಳಲು ಭರ್ಜರಿ ಪ್ರಚಾರ ನಡೆಸಿವೆ. ಆದರೆ ಯುವ ಮತದಾರರು ಒಲವು ಯಾರತ್ತ ಅವರ ಚಿತ್ತ ಎಂಬುದು ಕಾದುನೋಡಬೇಕು. ಕೊಪ್ಪಳ ಲೋಕಸಭಾ ಕ್ಷೆÃತ್ರದಲ್ಲಿ ಅಂತಿಮ ಮತದಾರರ ಪಟ್ಟಿಯಂತೆ ಒಟ್ಟು ೧೭,೩೬,೧೧೮ ಮತದಾರರಿದ್ದಾರೆ. ೮,೬೨,೪೬೬ ಪÅರುಷರು, ೮,೭೩,೫೩೯ ಮಹಿಳೆಯರು ಹಾಗೂ ೧೧೩ ಇತರ ಮತದಾರರಿದ್ದಾರೆ. ಇವರಲ್ಲಿ ೨,೩೩,೮೧೩ ಜನ ಯೂಥ್ ವೋಟರ್ಸ್ ಇರುವರು, ಫೇಸ್‌ಬುಕ್, ವಾಟ್ಸ್ಆಯ್ಸಪ್ ಗ್ರೂಪ್‌ಗಳಲ್ಲಿ ಹೊಸಬರನ್ನು ಸೇರಿಸುವ ಮೂಲಕ ಪ್ರಚಾರದ ಭರಾಟೆ ಆರಂಭಿಸಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಮತದಾರರ ಪಟ್ಟಿ ಪರಿಷ್ಕರಣೆಗೊಂಡಿದ್ದು, ಏ.೯ಕ್ಕೆ ಕೊನೆಗೊಂಡಂತೆ ಕ್ಷೆÃತ್ರಾದ್ಯಂತ ೧೭,೩೬,೧೧೮ ಮತದಾರರಿದ್ದಾರೆ. ೨೦೧೪ರ ಜನೆವರಿಯಲ್ಲಿ ೧೫,೦೨,೩೦೫ ಮತದಾರರಿದ್ದರು. ಇದಕ್ಕೆ ಹೋಲಿಸಿದರೆ, ೨,೩೩,೮೧೩ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಇವುಗಳಲ್ಲಿ ಸಿಂಧನೂರು ಹಾಗೂ ಸಿರಗುಪ್ಪ ವಿಧಾನಸಭಾ ಕ್ಷೆÃತ್ರದಲ್ಲಿ ಅತಿ ಹೆಚ್ಚು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.
ಅಭ್ಯರ್ಥಿಗಳ ಹೆಣಗಾಟ: ಹೊಸ ಮತದಾರರನ್ನು ಸೆಳೆಯಲು ಸರ್ಕಸ್ ನಡೆಸಿರುವ ರಾಜಕೀಯ ಪಕ್ಷಗಳು ತಮ್ಮದೇ ವಿಭಿನ್ನ ತಂತ್ರ ಹೆಣೆಯುತ್ತಿವೆ. ಹೊಸ ಮತದಾರರು ಯಾರ ಮನೆಯವರೆಂದು ಗುರುತಿಸಿ, ಅವರ ಮನೆಯವರು ಯಾವ ಪಕ್ಷದ ಬೆಂಬಲಿಗರು, ಅವರ ಮತ ಯಾರಿಗೆ ಎಂಬುದನ್ನು ಈಗಲೇ ಖಾತ್ರಿ ಮಾಡಿಕೊಳ್ಳುತ್ತಿವೆ. ತಮ್ಮ ಬೆಂಬಲಿಗರಾಗಿದ್ದಲ್ಲಿ ಅದು ತಮ್ಮ ವೋಟ್ ಎಂದು ಇಲ್ಲದಿದ್ದಲ್ಲಿ, ಅವರನ್ನು ಸೆಳೆಯುವ ಬಗೆ ಹೇಗೆಂಬ ಲೆಕ್ಕಾಚಾರ ಒಳಗೊಳಗೆ ಮಾಡುತ್ತಿದ್ದು, ಇದರಲ್ಲಿ ಬಿಜೆಪಿ ಹೆಚ್ಚು ಕ್ರಿಯಾಶೀಲವಾಗಿ ಸೋಕ್ಷö್ಮ ಹೆಜ್ಜೆನ್ನಟ್ಟಿದ್ದು, ಯುವಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

೨,೩೩,೮೧೩ ಹೊಸ ಮತದಾರರು ಸೇರ್ಪಡೆ: ಸಿಂಧನೂರು-೩೫೨೦೩, ಮಸ್ಕಿ-೩೨೨೬೮, ಕುಷ್ಟಗಿ-೨೮೩೧೬, ಕನಕಗಿರಿ-೨೮೫೩೧, ಗಂಗಾವತಿ-೨೧೬೦೯, ಯಲಬುರ್ಗಾ-೨೫೬೫೯, ಕೊಪ್ಪಳ-೨೮೪೯೫, ಸಿರಗುಪ್ಪ-೩೩೭೩೨, ಒಟ್ಟು ೨,೩೩,೮೧೩ ಜನ ಯುವ ಮತದಾರರು ಸೇರ್ಪಡೆಗೊಂಡಿರುವುರು.

loading...