ಯೋಧರ ತ್ಯಾಗ-ಬಲಿದಾನ ಅಜರಾಮರ: ಸಂತೋಷ

0
20

ಕನ್ನಡಮ್ಮ ಸುದ್ದಿ-ಬಂಕಾಪುರ: ಪ್ರೇಮಿಗಳ ದಿನಾಚರಣೆಯನ್ನು ಅತಿ ಉತ್ಸುಕತೆಯಿಂದ ಆಚರಿಸುವು ನಾವುಗಳು ಸ್ವಾತಂತ್ರ್ಯ ದಿನಾಚರಣೆ, ಕಾರ್ಗಿಲ್ ವಿಜಯದ ದಿನಾಚರಣೆಯನ್ನು ಆಚರಿಸಲು ನಿರುತ್ಸಾಹ ತೊರಿಸುತ್ತಿದ್ದೇವೆ. ಆದರೆ ಕಸಾಪ ಆಶ್ರಯದಲ್ಲಿ ಕಾರ್ಗಿಲ್ ವಿಜಯದ ದಿನದ ಅಂಗವಾಗಿ ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಪಿಎಸ್‍ಐ ಸಂತೋಷ ಪಾಟೀಲ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜ, ರಾಷ್ಟ್ರೀಯ ಸೇವಾ ಯೋಜನೆ, ಕನ್ನಡ ಸಾಹಿತ್ಯ ಪರಿಷತ್, ಪೊಲೀಸ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ 19 ನೇ ವರ್ಷದ ಕಾರ್ಗಿಲ್ ವಿಜಯ ದಿನದ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ದೆಸಿಸಿ ಮಾತನಾಡಿದ ಅವರು, ಇತಿಹಾಸದ ಪುಟಗಳನ್ನು ಓದಿ ನಾವು ಯುದ್ಧದ ಕಲ್ಪನೆ ಮಾಡಿಕೊಂಡರೆ 19 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧವನ್ನು ನಾವು ದೃಶ್ಯ ಮಾಧ್ಯಮದ ಮೂಲಕ ನೇರ ಪ್ರಸಾರದಲ್ಲಿ ಕಣ್ಣಾರೆ ಕಂಡಿದ್ದೇವೆ. ಸತತ 74 ದಿನಗಳವರೆಗೆ ನಡೆದ ಕಾರ್ಗಿಲ್ ಯುಧ್ಧದಲ್ಲಿ ಸುಮಾರು 537 ಜನ ನಮ್ಮ ವೀರ ಯೋಧರು ಹೋರಾಡಿ ಮಡಿದರೆ 700 ಕ್ಕಿಂತಲೂ ಅಧಿಕ ಯೋಧರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ವಿಜಯದ ಮಾಲೆಯನ್ನು ನಮ್ಮ ಭಾರತಾಂಬೆ ಕೊರಳಿಗೆ ಧರಿಸಿರುವುದು ಇತಿಹಾಸದ ಪುಟಗಳಲ್ಲಿ ರಾಜಾಜಿಸುತ್ತಿದೆ. ಅದರಲ್ಲಿ 14 ಯೋಧರು ನಮ್ಮ ರಾಜ್ಯ ದವರೆಂಬುವುದು ಕೆಚ್ಚೆದೆಯ ಕನ್ನಡಿಗರಿಗೆ ಕಳಸ ಪ್ರಾಯವಾಗಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿರುವ ಎಲ್ಲಾ ಇಲಾಖೆ ಸಂಘ ಸಂಸ್ಥೆಗಳು, ವಿದ್ಯಾರ್ಥಿ ವಕ್ಕುಟ, ರೈತ ಸಂಘಟನೆಗಳು ನಮ್ಮ ವಯಕ್ತಿಕ ಬೇಕು ಬೇಡಿಕೆಗಳನ್ನು ಇಡೇರಿಸಿಕೊಳ್ಳಲು ಹೋರಾಟ ನಡೆಸಿದ್ದೇವೆ. ಆದರೆ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗಮಾಡಿದ ವೀರ ಯೋಧರ ಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯ ಕೊಡೆಸಲು ಹೋರಾಟಮಾಡಿದ ಯಾವುದೆ ಉದಾಹರಣೆಗಳಿಲ್ಲ ಎಂದು ವಿಷಾದ ವ್ಯಕ್ತ ಪಡೆಸಿದರು.
ಕ.ಸಾ.ಪ ತಾಲೂಕಾ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಬರಿ ಸಾಹಿತ್ಯಿಕ ಚಟುವಟಿಕೆಗಳನ್ನು ಮಾತ್ರ ನಡೆಸದೆ ವನಮಹೋತ್ಸವ ಕಾರ್ಯಕ್ರಮಗಳಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ವರ್ಷವಿಡಿ ಮಾಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು.

ಸಿ.ಪಿ.ಐ ಆರ್. ಎಫ್. ದೇಸಾಯಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಸೊಗಲದ ಮಾತನಾಡಿದರು.
ಕಸಾಪ ಕೋಶಾದ್ಯಕ್ಷರಾದ ಎ.ಕೆ.ಆದವಾನಿಮಠ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಬಸವರಾಜ ನಾರಾಯಣಪುರ, ಮಧು ಜಂಗಳಿ, ಹನಮಂತಪ್ಪ ಯು.ವಿ, ರವಿ ಕುರಗೋಡಿ, ಮಂಜುನಾಥ ವಳಗೇರಿ, ಮಹೇಶ ಪುಕಾಳೆ, ಮಂಜುನಾಥ ಕೂಲಿ, ಮಂಜುನಾಥ ಈರಪ್ಪನವರ, ಎನ್.ಎಸ್.ಎಸ್.ಕಾರ್ಯಕ್ರಮಾದಿಕಾರಿಗಳಾದ ಪ್ರೋ.ಯಮುನಾ ಕೋಣೇಸರ, ಕೆ.ಪಿ.ಬೆಣಗೇರಿ, ಉಮೇಶ ಕರ್ಜಗಿ, ಸುಜಾತಾ ಕಡ್ಲಿ ಸೇರಿದಂತೆ ಎನ್.ಎಸ್.ಎಸ್.ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಂಜಿತಾ ಹಿರೇಮಠ ಪ್ರಾರ್ಥಿಸಿದರು. ಭಾರತಿ ಆಲದಕಟ್ಟಿ ನಿರೂಪಿಸಿದರು. ಮಂಗಳಾ ಬಳೆಗಾರ ವಂದಿಸಿದರು.

loading...