ರಂಗೇರಿದ ಬಿಡಿಡಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ

0
5

ಬೆಳಗಾವಿ
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಮಹೂರ್ತ ನಿಗದಿಯಾಗಿದ್ದು, ಬ್ಯಾಂಕ್ ನಿರ್ದೇಶಕರಾಗಲು ಬೆಳಗಾವಿಯ ಘಟಾನುಘಟಿ ನಾಯಕರ ಬೆಂಬಲಿಗರು ಸಿದ್ದತೆ ನಡೆಸಿದ್ದರೆ ಹಳೆ ಕಲಿಗಳ ಜತೆಗೆ ಹೊಸ ಅಭ್ಯರ್ಥಿಗಳ ನಡುವೆ ಕದನ ನಡೆಯುವುದು ಶತ ಸಿದ್ದ.
ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯಸಭಾ, ವಿಧಾನಪರಿಷತ್ ಚುನಾವಣೆ ಮುಗಿದ ಬಳಿ ಬಿಡಿಸಿಸಿ ಬ್ಯಾಂಕಿನ 16 ಜನ ನಿರ್ದೇಶಕರ ಆಯ್ಕೆ ಮಾಡಲಾಗತ್ತದೆ. ಅದರಲ್ಲಿ ಹತ್ತು ಜನ ಪ್ರತಿ ತಾಲೂಕಿಗೆ ಒಬ್ಬರಂತೆ ಹತ್ತು ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ.
ಈ ಹತ್ತು ಜನ ನಿರ್ದೇಶಕದನ್ನು ಆಯಾ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳು ಆಯ್ಕೆ ಮಾಡುತ್ತವೆ. ಈ ಬಾರಿ ಹತ್ತು ತಾಲೂಕಿನಲ್ಲಿ ತೀವ್ರ ಪೈಪೊಟಿ ನಡೆಯುವ ಎಲ್ಲ ಲಕ್ಷಣ ಘೋಚರವಾಗುತ್ತಿವೆ.
ಅದರಲ್ಲಿಯೂ ಬೆಳಗಾವಿ ತಾಲೂಕು ಈ ಬಾರಿ ರಾಜ್ಯದ ಗಮನ ಸೆಳೆಯುವಲ್ಲಿ ಎರಡು ಮಾತಿಲ್ಲ. ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ರಾಜ್ಯದಲ್ಲಿಯೇ ಹೆಸರು ಮಾಡಿತ್ತು. ಅದರಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ರಾಜ್ಯದ ಗಮನ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ.
ಈಗಾಗಲೇ ಹುಕ್ಕೇರಿ ಶಾಸಕ ಉಮೇಶ ಕತ್ತಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ರಾಜೇಂದ್ರ ಅಂಕಲಗಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯಲಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಒಂದು ಕಡೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಜೇಂದ್ರ ಅಂಕಲಗಿ ಹಾಗೂ ಇನ್ನೊಂದು ಕಡೆ ಚನ್ನರಾಜ್ ಹಟ್ಟಿಹೊಳಿ ನಡುವೆ ಕದನ ನಡೆಯುವುದು ಶತಸಿದ್ದ. ಈಗಾಗಲೇ ಬೆಳಗಾವಿ ತಾಲೂಕಿನ ಸೊಸೈಟಿಯಲ್ಲಿ ಚನ್ನರಾಜ ಹಟ್ಟಿಹೊಳಿ ಸಾಕಷ್ಟು ಸುಧಾರಣೆ ತಂದು ಗ್ರಾಹಕರ ಸಮಸ್ಯೆ ಮತು ಕುಂದುಕೋರತೆಗಳನ್ನು ಆಲಿಸಿದ್ದಾರೆ. ಆದರೆ ಜನರ ವಿಶ್ವಾಸಗಳಿಸುವುದರ ಜತೆಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು ಎಲ್ಲ ಅರ್ಹತೆಯನ್ನು ಚನ್ನರಾಜ್ ಹೊಂದಿದ್ದಾರೆ. ಸಹೋದರಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ಜತೆಗೆ ಗ್ರಾಮೀಣ ಜನರ ಸಂಕಷ್ಟಗಳಿಗೆ ಸ್ಪಂದಿಸಿರುವುದು ಇವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಇತ್ತ ಹುಕ್ಕೇರಿ ಶಾಸಕ ಉಮೇಶ ಕತ್ತಿ ಬೆಂಬಲಿಗರಾಗಿರುವ ರಾಜೇಂದ್ರ ಅಂಕಲಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಪ್ರಭಾವಿಗಳ ಬೆಂಬಲ ಇರುವುದರಿಂದ ನಿರ್ದೇಶಕರ ಚುನಾವಣೆಗೆ ಕಾವೇರಲಿದೆ. ಈ ಇಬ್ಬರು ಘಟಾನುಘಟಿ ಅಭ್ಯರ್ಥಿಗಳ ಹಿಂದೆ ಪ್ರಭಾವಿಗಳ ಬೆಂಬಲ ಇರುವುದರಿಂದ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.

loading...