ರಂಜಾನ್ ಮಳಿಗೆಗಳನ್ನು ಮುಖ್ಯ ರಸ್ತೆಯಲ್ಲಿ ಹಾಕುವ ಬದಲು ಬೇರೆಡೆ ಸ್ಥಳಾಂತರಿಸುವಂತೆ ಮನವಿ

0
22

ಭಟ್ಕಳ : 03 ಇಲ್ಲಿನ ಮುಖ್ಯರಸ್ತೆಯಲ್ಲಿ ರಮ್ಜಾನ್ ಪ್ರಯುಕ್ತ ಹಾಕುವ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಮುಂಡಳ್ಳಿ ಭಾಗದ ಸಾರ್ವಜನಿಕರು ಸಹಾಯಕ ಕಮೀಷನರರಿಗೆ ಮಂಗಳವಾರ ಬೆಳಿಗ್ಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಭಟ್ಕಳ ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲದಲ್ಲಿ ಕೆಲವು ವರ್ಷಗಳಿಂದ ರಮ್ಜಾನ್ ಪ್ರಯುಕ್ತ ಪುರಸಭೆ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಹಾಕಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದ್ದು, ಇದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅಂಗಡಿ ಮಳಿಗೆಗಳಲ್ಲಿನ ಸಾಮಗ್ರಿಗಳನ್ನು ಖರೀಧಿಸಲು ಬೆಳಿಗ್ಗೆಯಿಂದ ಮಧ್ಯರಾತ್ರಿ ವರೆಗೂ ಜನಜಂಗುಳಿ ಇರುವುದರಿಂದ ಮುಖ್ಯ ರಸ್ತೆಯಲ್ಲಿ ಮುಂಡಳ್ಳಿ-ಅಳ್ವೆಕೋಡಿ ಬಸ್ ಸೇರಿದಂತೆ ಇತರೇ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಬಸ್ ಸಂಚಾರಕ್ಕೆ ಅಡಚಣೆಯಾದರೆ ಮುಂಡಳ್ಳಿಯಿಂದ ಪೇಟೆಗೆ ಆಗಮಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೂ ತೊಂದರೆಯಾಗಲಿದೆ. ಮುಖ್ಯ ರಸ್ತೆಯಗೆ ತಾಗಿಕೊಂಡೇ ಮಾರಿಗುಡಿ, ರಾಜಾಂಗಣ ನಾಗಬನ ಮುಂತಾದವುಗಳು ಇರುವುದರಿಂದ ಈ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಕೂಡ ಅಗತ್ಯವಾಗಿದೆ ಎಂದು ತಿಳಿಸಲಾಗಿದ್ದು, ಹೀಗಾಗಿ ಈ ಸಲ ಮುಖ್ಯ ರಸ್ತೆಯಲ್ಲಿ ಹಾಕಲು ಉದ್ದೇಶಿಸಿರುವ ಅಂಗಡಿ ಮಳಿಗೆಗಳನ್ನು ಪಟ್ಟಣದ ಯಾವುದಾದರೂ ವಿಶಾಲ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಉತ್ತಮವಾಗಿದೆ. ಇದರಿಂದ ವ್ಯಾಪಾರ ವಹಿವಾಟು ಕೂಡ ಹೆಚ್ಚಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ಸ್ವೀಕರಿಸಿದ ಸಹಾಯಕ ಕಮೀಷನರ್ ಎಂ. ಕೂರ್ಮರಾವ್ ಈ ಬಗ್ಗೆ ಪರೀಶೀಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಷ್ಣು ನಾಯ್ಕ, ಈರಾ ನಾಯ್ಕ, ಗಣಪತಿ ನಾಯ್ಕ, ಜಯಂತ ನಾಯ್ಕ, ಜಗದೀಶ ನಾಯ್ಕ, ಕೃಷ್ಣಾ ನಾಯ್ಕ, ನಾಗೇಶ ಆಚಾರಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here