ರಕ್ತದ ಲಕ್ಷಣದಿಂದ ವ್ಯಕ್ತಿತ್ವ ಅಭಿವ್ಯಕ್ತಿ : ಡಾ. ವೈಕುಂಠೆ

0
6

ಗದಗ: ರಕ್ತದ ಗುಣಲಕ್ಷಣಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬಹುದಾಗಿದೆ ಎಂದು ಡಾ. ದತ್ತಾತ್ರೆÃಯ ವೈಕುಂಠೆ ಅಭಿಪ್ರಾಯಪಟ್ಟರು.
ಜೆ.ಸಿ.ಎಸ್ ಶಿಕ್ಷಣ ಸಂಸ್ಥೆಯ ಶಾಸ್ತಿçÃಜಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಗದುಗಿನ ಆದರ್ಶ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೯ ರಲ್ಲಿ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಗದಗ ಜಿಲ್ಲಾ ಭಾವಸಾರ ವ್ಹಿಜನ್ ಇಂಡಿಯಾದ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ರಕ್ತ ತಪಾಸಣಾ ಶಿಬಿರ ನೆರವೇರಿಸಿ ಮಾತನಾಡಿದರು. ರಕ್ತತಪಾಸಣೆಯ ಸಂದರ್ಭದಲ್ಲಿ ಕಂಡುಕೊಳ್ಳುವ ರಕ್ತದ ವರ್ಗೀಕರಣ ಗುಂಪಿನಿಂದ ಆಯಾ ಗುಂಪಿನ ರಕ್ತದ ಗುಣಲಕ್ಷಣಗಳೇನು ವ್ಯಕ್ತಿಯ ವ್ಯಕ್ತಿತ್ವ ನಡಾವಳಿಕೆಯನ್ನೂ ಕಂಡುಕೊಳ್ಳಬಹುದಾಗಿದೆ ಎಂದ ಅವರು ಪ್ರತಿಯೊಬ್ಬ ಅರ್ಹ ವ್ಯಕ್ತಿಯು ವರ್ಷದಲ್ಲಿ ಎರಡು ಸಲವಾದರೂ ರಕ್ತದಾನ ಮಾಡಬೇಕು ಇದರಿಂದಾಗಿ ವ್ಯಕ್ತಿಯ ವ್ಯಕ್ತಿತ್ವದಲ್ಲಿ ವಿಕಸನ ಆರೋಗ್ಯದಲ್ಲಿ ಚೈತನ್ಯ ಉಂಟಾಗುವದು, ರಕ್ತದಾನದಿಂದ ಜೀವವೊಂದನ್ನು ಬದುಕಿಸಬಹುದಾಗಿದ್ದು ಕಾರಣ ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕೆಂದರು.
ಎನ್.ಎಸ್.ಎಸ್ ಶಿಬಿರಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಸೇರಿದಂತೆ ಒಟ್ಟು ೬೦ ಜನರಿಗೆ ಉಚಿತವಾಗಿ ರಕ್ತತಪಾಸಣೆ ಮಾಡಿ ರಕ್ತಗುಂಪಿನ ಚೀಟಿ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರೂ ಶಿಬಿರಾಧ್ಯಕ್ಷ ವ್ಹಿ.ಬಿ.ಕಮತರ ವಹಿಸಿದ್ದರು. ವೇದಿಕೆಯ ಮೇಲೆ ರಾಜೇಂದ್ರ ತ್ರಿಮಲ್ಲೆ, ಜಯಲಕ್ಷಿö್ಮÃ ಮಹೀಂದ್ರಕರ, ಜಯಶ್ರಿÃ ತ್ರಿಮಲ್ಲೆ, ರಮೇಶ ವಾದೋನೆ ಇದ್ದರು. ಪ್ರೊ. ಎಂ.ಸಂದೀಪ, ಪ್ರೊ. ಎಸ್.ಸಿ.ಗೊಂದಿ, ಪ್ರೊ.ಎಸ್.ವ್ಹಿ. ಧೂಳಪ್ಪನವರ, ಪ್ರೊ. ಆರ್.ಎ.ಕೇದರ, ಪ್ರೊ. ಎಸ್.ಸಿ.ಗೋಡಮಾರಕಲ್ಲ, ಪ್ರೊ.ಡಿ.ಎಂ.ನದಾಫ, ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿ ಸುರೇಖಾ ದೊಡ್ಡಮಲ್ಲಪ್ಪನವರ ಹಾಗೂ ನಫೀಸಾ ಮಂಗಳೂರು ಕಾರ್ಯಕ್ರಮದಲ್ಲಿ ಪಾಲ್ಗೊÃಂಡಿದ್ದರು.
ಹುಲಿಗೆಮ್ಮ ಪೂಜಾರ ಪ್ರಾರ್ಥಿಸಿದರು ವಿಜಯಲಕ್ಷಿö್ಮÃ ರಾಯಚೂರು ಸ್ವಾಗತಿಸಿದರು ವಂದಿಸಿದರು. ಶಿಲ್ಪಾ ಉಜರತ್ತಿ ನಿರೂಪಿಸಿ ವಂದಿಸಿದರು.

loading...