ರಬಕವಿ-ಬನಹಟ್ಟಿ : ಎರಡು ಶವ ಪತ್ತೆ

0
45

 

 
ರಬಕವಿ-ಬನಹಟ್ಟಿ; ಓರ್ವ 45 ವರ್ಷದ ಪುರುಷ ಹಾಗು ಸುಮಾರು 40 ವರ್ಷದ ಮಹಿಳೆ ಶವಗಳು ಪ್ರತ್ಯೇಕವಾಗಿ ನದಿಯಲ್ಲಿ ದೊರೆತ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ದೊರೆತನ್ವಯ ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದ ಪೊಲೀಸ್ ತಂಡ ಸಮೀಪದ ಕೃಷ್ಣಾ ನದಿಗೆ ತೆರಳಿ ಶವ ಪರಿಶೀಲನೆ ನಡೆಸಿದರು. ಪುರುಷನ ಶವ ಮಹಿಷವಾಡಗಿ ಬ್ಯಾರೇಜ್‍ನ ಹತ್ತಿರ ದೊರೆತರೆ ಮಹಿಳೆಯ ಶವವೊಂದು ಅಸ್ಕಿ ಗ್ರಾಮದ ಸಮೀಪದ ದೊರೆತಿದೆ.
ಎರಡೂ ಘಟನೆಗಳಿಗೆ ಪ್ರತ್ಯೇಕ ಕಾರಣವಾಗಿರಬಹುದೆಂಬ ಶಂಕೆ ಪೊಲೀಸರದ್ದಾಗಿದೆ. ಪುರುಷನ ಶವವನ್ನು ನದಿಯಲ್ಲಿ ಮೀನುಗಳು ಅರ್ಧದಷ್ಟು ತಿಂದು ಹಾಕಿರುವ ಕಾರಣ ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ. ಮಹಿಳೆಯ ಶವವು ಸ್ವಲ್ಪ ಮಟ್ಟಿಗೆ ಮೀನುಗಳಿಗೆ ಆಹಾರವಾಗಿದ್ದು, ಎರಡು ದಿನಗಳ ಹಿಂದೆ ಘಟನೆ ನಡೆದಿರಬಹುದೆನ್ನಲಾಗಿದೆ.
ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುರೆಸಿದ್ದಾರೆ.

 

loading...

LEAVE A REPLY

Please enter your comment!
Please enter your name here